ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಾಫಿ ಡೇ ಸಿದ್ದಾರ್ಥ ಸಾವಿನ ಪ್ರಕರಣ ತನಿಖೆಗೆ ಹಿರೇಮಠ ಆಗ್ರಹ

|
Google Oneindia Kannada News

ಹುಬ್ಬಳ್ಳಿ, ಆಗಸ್ಟ್ 01: "ಕಾಫಿ ಡೇ ಮಾಲೀಕ ವಿಜಿ ಸಿದ್ಧಾರ್ಥ ಅವರ ನಿಗೂಢ ಸಾವಿನ ಕುರಿತು ಪ್ರಾಮಾಣಿಕ ತನಿಖೆ ನಡೆಸಬೇಕು. ಸಾವಿಗೂ ಕೆಲ ದಿನಗಳ ಮೊದಲು ಬರೆದ ಪತ್ರದಲ್ಲಿ ಸತ್ಯ ಮರೆ ಮಾಚಲಾಗಿದೆ. ಪತ್ರವನ್ನು ಉದ್ದೇಶ ಪೂರ್ವಕವಾಗಿ ಬರೆದಂತೆ ಕಾಣುತ್ತಿದೆ. ಅವರ ಸಾವಿನ ಕುರಿತು ಸರಕಾರ ಉನ್ನತ ಮಟ್ಟದ ತನಿಖೆ ನಡೆಸಬೇಕು. ಹಗರಣಗಳನ್ನು ಬಹಿರಂಗಪಡಿಸಿ ಅವರ ಸಾವಿನ ಸತ್ಯವನ್ನು ಹೊರತರುವಲ್ಲಿ ತನಿಖೆ ನಡೆಯಬೇಕು" ಎಂದು ಸಾಮಾಜಿಕ ಕಾರ್ಯಕರ್ತ ಎಸ್. ಆರ್. ಹಿರೇಮಠ ಆಗ್ರಹಿಸಿದ್ದಾರೆ.

ಸಂಕ್ಷಿಪ್ತ ವ್ಯಕ್ತಿಚಿತ್ರ : ಭಾರತದ 'ಕಾಫಿ ಕಿಂಗ್' ವಿ. ಜಿ. ಸಿದ್ದಾರ್ಥ ಹೆಗ್ಡೆ from ಚೇತನಹಳ್ಳಿ ಎಸ್ಟೇಟ್ಸಂಕ್ಷಿಪ್ತ ವ್ಯಕ್ತಿಚಿತ್ರ : ಭಾರತದ 'ಕಾಫಿ ಕಿಂಗ್' ವಿ. ಜಿ. ಸಿದ್ದಾರ್ಥ ಹೆಗ್ಡೆ from ಚೇತನಹಳ್ಳಿ ಎಸ್ಟೇಟ್

"ಜುಲೈ 29ರಂದು ನೇತ್ರಾವತಿ ನದಿ ಸೇತುವೆ ಬಳಿ ನಿಗೂಢವಾಗಿ ಕಾಣೆಯಾಗಿ, 36 ಗಂಟೆಗಳ ಬಳಿಕ ನದಿಯಲ್ಲಿ ಶವವಾಗಿ ಪತ್ತೆಯಾಗಿರುವ ವಿ.ಜಿ.ಸಿದ್ದಾರ್ಥ ಡಾರ್ಕ್ ಫೈಬರ್ ಮತ್ತು ಕೊ-ಲೊಕೇಶನ್ ಎಂಬ ಹಗರಣಗಳಲ್ಲಿ ಭಾಗಿಯಾಗಿದ್ದರು. ರಾಜಕಾರಣಿಯೊಬ್ಬರು ಅವರಿಗೆ ಕಿರುಕುಳ ನೀಡುತ್ತಿದ್ದರು" ಎಂದು ಸಮಾಜ ಪರಿವರ್ತನಾ ಸಮುದಾಯದ ಎಸ್.ಆರ್ ಹಿರೇಮಠ ಹೇಳಿದರು.

ಸಿದ್ದಾರ್ಥರ 650 ಕೋಟಿ ರು ಮೊತ್ತ ಎಲ್ಲೆಲ್ಲಿ ಹೂಡಿಕೆ?ಸಿದ್ದಾರ್ಥರ 650 ಕೋಟಿ ರು ಮೊತ್ತ ಎಲ್ಲೆಲ್ಲಿ ಹೂಡಿಕೆ?

ಹುಬ್ಬಳ್ಳಿ ನಗರದಲ್ಲಿಂದು ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, "ಡಾರ್ಕ್ ಫೈಬರ್ ಮತ್ತು ಕೊ-ಲೊಕೇಶನ್ ಎಂಬ ಹಗರಣದಲ್ಲಿ ಸಿದ್ದಾರ್ಥ ಅವರು ಭಾಗಿಯಾಗಿದ್ದರು. ಸಿಂಗಪುರ ಹಾಗೂ ಹಾಂಕಾಂಗ್‌ನಲ್ಲಿರುವ ಅಲ್ಫಾಗ್ರಾಫ್ ಕಂಪನಿಗಳಲ್ಲಿ ದೊಡ್ಡ ಹಗರಣಗಳು ನಡೆದಿವೆ. ಈ ಹಗರಣದಲ್ಲಿ ಸಿದ್ಧಾರ್ಥ ಸಿಲುಕಿರುವ ಬಗ್ಗೆ ಆರ್ಥಿಕ ಅಪರಾಧ ತನಿಖಾ ಸಂಸ್ಥೆಗಳು ಶಂಕೆ ವ್ಯಕ್ತಪಡಿಸಿದೆ. ಜೊತೆಗೆ ಒಬ್ಬ ರಾಜಕಾರಣಿಯೂ ಅವರಿಗೆ ಕಿರುಕುಳ ನೀಡಿದ್ದಾರೆ. ಅವರ ಹೆಸರನ್ನು ನಾನು ಈಗ ಬಹಿರಂಗ ಪಡಿಸಲಾರೆ" ಎಂದಿದ್ದಾರೆ.

ಸಿದ್ದಾರ್ಥ ಹಿಂದೆ ಬಿದ್ದಿದ್ದ ಹಿರೇಮಠ

ಸಿದ್ದಾರ್ಥ ಹಿಂದೆ ಬಿದ್ದಿದ್ದ ಹಿರೇಮಠ

ಕಾಫಿ ಡೇ ಮಾಲೀಕ ವಿ.ಜಿ ಸಿದ್ದಾರ್ಥ ಅವರು ಅಕ್ರಮ ಆಸ್ತಿ ಹೊಂದಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ಎಸ್. ಆರ್. ಹಿರೇಮಠ ಅವರು ಈ ಹಿಂದೆ ವಿಶೇಷ ತನಿಖಾ ಸಂಸ್ಥೆ(ಎಸ್ಐಟಿ)ಗೆ ದೂರು ನೀಡಿದ್ದರು. ಕೆಲವು ಬೇನಾಮಿ ಸಂಸ್ಥೆಗಳಲ್ಲಿ ಹೂಡಿಕೆ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿತ್ತು. ಇದರ ಆಧಾರದ ಮೇಲೆ 2017ರಲ್ಲಿ ಆ ಸಂಸ್ಥೆಗಳ ಮೇಲೆ ಐಟಿ ದಾಳಿ ನಡೆಸಲಾಗಿ 650 ಕೋಟಿ ರು ಗೂ ಅಧಿಕ ಬೇನಾಮಿ ಹೆಸರಿನ ಆಸ್ತಿ ಪತ್ತೆಯಾಗಿದೆ. ಈ ಬಗ್ಗೆ ಸರಿಯಾದ ವಿವರ ಲಭ್ಯವಾಗಿರಲಿಲ್ಲ.

ಅರಣ್ಯ ಭೂಮಿ ಒತ್ತುವರಿ ಆರೋಪ

ಅರಣ್ಯ ಭೂಮಿ ಒತ್ತುವರಿ ಆರೋಪ

ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕು ವ್ಯಾಪ್ತಿಯಲ್ಲಿ ದುಬಾರಿ ಬೆಲೆಯ 200 ಎಕರೆಗೂ ಅಧಿಕ ಸರಕಾರಿ ಜಮೀನನ್ನು ಸಿದ್ಧಾರ್ಥ ಅವರ ಎಬಿಸಿ ಕಂಪನಿ ಒತ್ತುವರಿ ಮಾಡಿದೆ. ಅರಣ್ಯ ಭೂಮಿ ಒತ್ತುವರಿ ಸರಿಪಡಿಸಿ ಎಂದು ಹಿರೇಮಠ್ ದೂರು ನೀಡಿದ್ದರು. ಈ ಬಗ್ಗೆ ಕೂಡಾ ತನಿಖೆ ನಡೆಸಲಾಗಿತ್ತು. ಸಿದ್ದಾರ್ಥ ಅವರ ಆಸ್ತಿ ಪಾಸ್ತಿ ಉಳಿಸಲಿಕ್ಕೆಂದೇ ಮಾಜಿ ಮುಖ್ಯಮಂತ್ರಿ, ಮಾಜಿ ವಿದೇಶಾಂಗ ಸಚಿವ ಎಸ್ಎಂ ಕೃಷ್ಣ ಅವರು ಬಿಜೆಪಿ ಸೇರಿದ್ದು ಎಂದು ಕೂಡಾ ಹಿರೇಮಠ್ ಆರೋಪಿಸಿದ್ದರು.

ಸಿದ್ದಾರ್ಥ ಸಾವಿನ ನಂತರ ನೆಲಕಚ್ಚಿದ ಕಾಫಿ ಡೇ ಷೇರುಗಳು ಸಿದ್ದಾರ್ಥ ಸಾವಿನ ನಂತರ ನೆಲಕಚ್ಚಿದ ಕಾಫಿ ಡೇ ಷೇರುಗಳು

2017ರ ಐಟಿ ದಾಳಿ ಸಂದರ್ಭ

2017ರ ಐಟಿ ದಾಳಿ ಸಂದರ್ಭ

2017ರಲ್ಲಿ ತೆರಿಗೆ ವಂಚನೆ ಆರೋಪದ ಮೇಲೆ ವಿಜಿ ಸಿದ್ದಾರ್ಥ ಅವರ ಒಡೆತನದ ಸಂಸ್ಥೆಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಸರಣಿ ದಾಳಿ ನಡೆಸಿದ್ದರು. ಬೆಂಗಳೂರು, ಮುಂಬೈ, ಚೆನ್ನೈ, ಚಿಕ್ಕಮಗಳೂರಿನಲ್ಲಿ ದಾಳಿ ನಡೆದಿತ್ತು.

ಸಿದ್ದಾರ್ಥ್ ಹಾಗೂ ಅವರ ಸಂಬಂಧಿಗಳಾದ ನಿತಿನ್ ಬಾಗ್‌ ಮನೆ, ರಾಜಾ ಬಾಗ್‌ ಮನೆ, ನಾಗವೇಣಿ ಹಾಗೂ ಗುರುಚರಣ್‌ ಎಂಬುವವರ ಹೆಸರುಗಳನ್ನು ಉಲ್ಲೇಖಿಸಿ ದೂರು ಸಲ್ಲಿಸಲಾಗಿತ್ತು. ಸುಮಾರು 21 ಕಂಪನಿಗಳ ಹೆಸರು ಇದರಲ್ಲಿತ್ತು.

ವಿವಿಧ ಸಂಸ್ಥೆಗಳಲ್ಲಿ ಸಿದ್ದಾರ್ಥ ಹೂಡಿಕೆ: ಕೆಫೆ ಕಾಫಿ ಡೇ ಮಾಲೀಕತ್ವದಲ್ಲಿ ಸೆರಾಯ್ ಹಾಗೂ ಸಿಕಾಡಾ ರೆಸಾರ್ಟ್ ಚಿಕ್ಕಮಗಳೂರು, ನಾಗರಹೊಳೆ ಸೇರಿದಂತೆ ವಿವಿಧೆಡೆ ಇವೆ. ಇದಲ್ಲದೆ ಜಿಟಿವಿ, ಮೈಂಡ್ ಟ್ರೀ, ಲಿಕ್ವಿಡ್ ಕ್ರಿಸ್ಟಲ್, ವೇ2 ವೆಲ್ತ್, ಇಟ್ಟಿಯಂ ಮುಂತಾದ ಕಂಪನಿಗಳಲ್ಲಿ ಸಿದ್ದಾರ್ಥ ಪಾಲು ಹೊಂದಿದ್ದಾರೆ. ಮೈಂಡ್ ಟ್ರೀ ಸಂಸ್ಥೆಯಲ್ಲಿದ್ದ ತಮ್ಮ 20.3% ಪಾಲನ್ನು ಸಿದ್ದಾರ್ಥ ಮಾರಿದ್ದು, ಎಲ್ ಅಂಡ್ ಟೀ ಕಂಪನಿ ಖರೀದಿಸಲು ಮುಂದಾಗಿದೆ.

ಮಾರ್ಚ್ 2019ರ ಎಣಿಕೆಯಂತೆ ಸಿದ್ದಾರ್ಥ ಆಸ್ತಿ

ಮಾರ್ಚ್ 2019ರ ಎಣಿಕೆಯಂತೆ ಸಿದ್ದಾರ್ಥ ಆಸ್ತಿ

ಮಾರ್ಚ್ 2019ರ ಎಣಿಕೆಯಂತೆ ಭಾರತದಲ್ಲಿ ಸುಮಾರು 1,752 ಕೆಫೆಗಳನ್ನು ಹೊಂದಿರುವ ಕೆಫೆ ಕಾಫಿ ಡೇ ಸದ್ಯ ದೇಶದಲ್ಲಿ ಮುಂಚೂಣಿಯಲ್ಲಿರುವ ಕಾಫಿ ಸಂಸ್ಥೆಯಾಗಿದೆ. ಭಾರತದಲ್ಲಿ ವಿಸ್ತೃತವಾದ ಕಾಫಿ ಮಳಿಗೆಯನ್ನು ವಿಸ್ತರಿಸುವಲ್ಲಿ ಸಂಸ್ಥೆಯ ಸ್ಥಾಪಕ ವಿಜಿ ಸಿದ್ದಾರ್ಥ ಅವರ ಪಾತ್ರ ದೊಡ್ಡದು. 1996ರಿಂದ ಇಲ್ಲಿ ತನಕ ಹಲವು ಏರಿಳಿತ ಕಂಡಿರುವ ಸ್ವದೇಶಿ ಬ್ರ್ಯಾಂಡ್ ಕೆಫೆ ಕಾಫಿ ಡೇ ಈಗ ಅಮೆರಿಕದ ಕೋಕ ಕೋಲಾ ಕಂಪನಿ ಪಾಲಾಗುವ ಮಾತುಕತೆ ನಡೆದಿತ್ತು. ಕಾಫಿ ಡೇ ಸಂಸ್ಥೆ ಆದಾಯ 1,777 ಕೋಟಿ ರು ಹಾಗೂ 2020ರ ವೇಳೆಗೆ 2250 ಕೋಟಿ ರು ಗಳಿಕೆ ಗುರಿ ಹೊಂದಿದ್ದರು. ಇತ್ತೀಚೆಗೆ ಸಿದ್ದಾರ್ಥ ಅವರು ಮೈಂಡ್ ಟ್ರೀಯಲ್ಲಿದ್ದ ತಮ್ಮ 20.3% ಷೇರುಗಳನ್ನು ಎಲ್ ಅಂಡ್ ಟಿ ಕಂಪನಿಗೆ ಮಾರಿದ್ದರು. ಸುಮಾರು 8 ರಿಂದ 9 ಸಾವಿರ ರುಪಾಯಿ ಸಾಲ ಮಾಡಿಕೊಂಡಿದ್ದ ಸಿದ್ದಾರ್ಥ ಅವರಿಗೆ 22 ಸಾವಿರ ಕೋಟಿ ರು ಆಸ್ತಿ ಇದೆ.

ಕಾಫಿ ಡೇ ಸಂಸ್ಥೆಯ ನೂತನ ಸಿಒಒ ಆಗಿ ನಿತಿನ್ ಬಾಗ್ಮನೆ ನೇಮಕ ಕಾಫಿ ಡೇ ಸಂಸ್ಥೆಯ ನೂತನ ಸಿಒಒ ಆಗಿ ನಿತಿನ್ ಬಾಗ್ಮನೆ ನೇಮಕ

ಷೇರುಪೇಟೆಯಲ್ಲಿ ಕಾಫಿ ಡೇ ಕುಸಿತ

ಷೇರುಪೇಟೆಯಲ್ಲಿ ಕಾಫಿ ಡೇ ಕುಸಿತ

ಸುಮಾರು 8 ರಿಂದ 9 ಸಾವಿರ ರುಪಾಯಿ ಸಾಲ ಮಾಡಿಕೊಂಡಿದ್ದ ಸಿದ್ದಾರ್ಥ ಅವರಿಗೆ 22 ಸಾವಿರ ಕೋಟಿ ರು ಆಸ್ತಿಯಿದ್ದರೂ ಸಾಲಕ್ಕೆ ಹೆದರಿದ್ದು ಏಕೆ? ಎಂಬ ಮಾತು ಎಲ್ಲೆಡೆ ಕೇಳಿ ಬರುತ್ತಿದೆ. ಆದರೆ, ಅವರು ತೆಗೆದುಕೊಂಡ ಸಾಲವನ್ನು ತೀರಿಸಲು ಅವರ ಬಳಿ ಇದ್ದ ಆಸ್ತಿಗಳನ್ನು ಅನೇಕ ಕಡೆಗಳಲ್ಲಿ ಅಡ ಅಥವಾ ಶ್ಯೂರಿಟಿಯಾಗಿ ನೀಡಿದ್ದರು. ಹೀಗಾಗಿ, ಬಹು ಮೌಲ್ಯದ ಆಸ್ತಿ ಇದ್ದರೂ ಮಾರಾಟ ಮಾಡುವಂತಿರಲಿಲ್ಲ.

ಕಳೆದ ಮೂರು ದಿನಗಳಿಂದ ಆರಂಭದ ವಹಿವಾಟಿನಲ್ಲೇ ಶೇ20ರಷ್ಟು ಕುಸಿತ ಕಂಡ ಕಾಫಿ ಡೇ ಷೇರುಗಳು 52 ವಾರಗಳಲ್ಲೇ ಅತ್ಯಧಿಕ ಕಳಪೆ ಸಂಖ್ಯೆಯನ್ನು ಕಂಡಿದೆ. ಇದಕ್ಕಿಂತ ಇನ್ನು ಕುಸಿಯಲು ಸಾಧ್ಯವಿಲ್ಲ. ಸುಮಾರು 2,494,013 ಷೇರು ಮಾರಾಟಕ್ಕಿದ್ದರೂ ಖರೀದಿದಾರಲಿಲ್ಲ.

ಬುಧವಾರದಂದು ಬಿಎಸ್ಇಯಲ್ಲಿ ಕಾಫಿ ಡೇ ಎಂಟರ್ ಪ್ರೈಸಸ್ ಲಿಮಿಟೆಡ್ ಷೇರುಗಳು ಬೆಳಗ್ಗೆ 10.24ರ ಸುಮಾರಿಗೆ 123.25ರು ನಂತೆ ವಹಿವಾಟು ಆರಂಭಿಸಿದ್ದು, 19.99% ಕುಸಿತ ಕಂಡು 38.50ರು ಕಳೆದುಕೊಂಡಿದೆ. ಇದೇ ವೇಳೆ ಎನ್ ಎಸ್ ಇಯಲ್ಲಿ 20% ಕುಸಿತ ಕಂಡು 30.65ರು ನಷ್ಟು ನಷ್ಟವಾಗಿದ್ದು, 122.75ರಂತೆ ವಹಿವಾಟು ನಡೆಸಿದೆ.

English summary
Cafe Coffee day owner VG Siddhartha death case: Samaja parivarthana samudaya Whistleblower SR Hiremath urges for probe mentions Dark fiber and Co location scams.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X