ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಇನ್ನೂ ಉಡುಗಿಲ್ಲ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಕೂಗು

By Manjunatha
|
Google Oneindia Kannada News

ಹುಬ್ಬಳ್ಳಿ, ಸೆಪ್ಟೆಂಬರ್ 08: ಕೆಲವು ದಿನದ ಹಿಂದೆ ದೊಡ್ಡ ಮಟ್ಟದಲ್ಲಿ ಎದ್ದಿದ್ದ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಕೂಗನ್ನು ರಾಜಕೀಯ ಮುಖಂಡರು, ಚಿಂತಕರು ಸೇರಿ ಚರ್ಚೆಯ ಮೂಲಕ ಹತ್ತಿಕ್ಕಿದ್ದರು ಆದರೆ ಈ ಕೂಗು ಸಂಪೂರ್ಣ ಉಡುಗಿಲ್ಲ.

ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾದರೆ ಇಷ್ಟೆಲ್ಲಾ ಲಾಭಗಳು ಆಗುತ್ತವಂತೆ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾದರೆ ಇಷ್ಟೆಲ್ಲಾ ಲಾಭಗಳು ಆಗುತ್ತವಂತೆ

ಹುಬ್ಬಳ್ಳಿಯಲ್ಲಿ ನಿನ್ನೆ ಪತ್ರಿಕಾಗೋಷ್ಠಿ ಕರೆದಿದ್ದ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಹರಾಟ ಸಮಿತಿಯ ಅಧ್ಯಕ್ಷ ನಾಗೇಶ ಗೊಲ್ಲಶೆಟ್ಟಿ ಅವರು ಇದೇ ಸೆಪ್ಟೆಂಬರ್ 23ರಂದು ಹೋರಾಟ ರೂಪು ರೇಶೆ ಚರ್ಚೆಗೆ ವಿಶೇಷ ಸಭೆ ಕರೆಯಲಾಗಿದೆ ಎಂದು ಹೇಳಿದ್ದಾರೆ.

ಇದು ಪ್ರತ್ಯೇಕ ರಾಜ್ಯದ ಕೂಗಲ್ಲ: ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿಇದು ಪ್ರತ್ಯೇಕ ರಾಜ್ಯದ ಕೂಗಲ್ಲ: ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ

ಬಾಗಲಕೋಟೆಯ ಚಿರಂತಿನಮಠದಲ್ಲಿ ಸಭೆ ನಡೆಯಲಿದ್ದು, ಉತ್ತರ ಕರ್ನಾಟಕದ ಪ್ರತ್ಯೇಕ ಬಾವುಟ ಸೇರಿ ಪ್ರತ್ಯೇಕ ರಾಜ್ಯ ಹೋರಾಟ ಕುರಿತು ಐದು ಪ್ರಮುಖ ನಿರ್ಣಯಗಳನ್ನು ತೆಗೆದುಕೊಳ್ಳಲಿದೆ ಎಂದು ಮಾಹಿತಿ ನೀಡಿದರು.

ಪ್ರತ್ಯೇಕ ರಾಜ್ಯ ಹೋರಾಟ ನೇತೃತ್ವ ವಹಿಸಲು ಸಿದ್ಧ: ಶ್ರೀರಾಮುಲು ಪ್ರತ್ಯೇಕ ರಾಜ್ಯ ಹೋರಾಟ ನೇತೃತ್ವ ವಹಿಸಲು ಸಿದ್ಧ: ಶ್ರೀರಾಮುಲು

Uttar Karnataka separate state: special meeting on September 23

ಸಭೆಯಲ್ಲಿ, ಪ್ರತ್ಯೇಕ ರಾಜ್ಯಕ್ಕೆ ಸೇರಬೇಕಿರುವ ಜಿಲ್ಲೆಗಳು ಯಾವುದು, ಬಾವುಟ ರೂಪ ಹೇಗಿರಬೇಕು, ಪ್ರತ್ಯೇಕ ರಾಜ್ಯಕ್ಕೆ ರಾಜಧಾನಿ ಯಾವುದಾಗಬೇಕು, ಧ್ವಜಾರೋಹಣ ಮಾಡುವ ದಿನಾಂಕ, ಪ್ರತ್ಯೇಕ ರಾಜ್ಯಕ್ಕೆ ಯಾವ ಹೆಸರಿಡಬೇಕು ಎಂಬಿತ್ಯಾದಿ ಪ್ರಮುಖ ವಿಷಯಗಳ ಬಗ್ಗೆ ನಿರ್ಣಯ ತೆಗೆದುಕೊಳ್ಳಲಾಗುವುದು ಎಂದರು.

English summary
Uttar Karnataka separate state activist committee call for special meeting on September 23 in Bagalkote. They were going to discuss about the separate stats flag, capital and many other things.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X