ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹುಬ್ಬಳ್ಳಿಯ ರೈಲ್ವೆ ಗಾರ್ಡ್ ಮಗಳಿಗೆ UPSC ಪರೀಕ್ಷೆಯಲ್ಲಿ 482ನೇ ರ್‍ಯಾಂಕ್

By ಹುಬ್ಬಳ್ಳಿ ಪ್ರತಿನಿಧಿ
|
Google Oneindia Kannada News

ಹುಬ್ಬಳ್ಳಿ ಮೇ, 31: ಕೇಂದ್ರೀಯ ಲೋಕಸೇವಾ ಆಯೋಗದ ( ಯುಪಿಎಸ್ಸಿ ) ನಡೆಸುವ ದೇಶದ ಅತ್ಯುನ್ನತ ನಾಗರೀಕ ಸೇವೆಗಳ ನೇಮಕಕ್ಕೆ 2021 ನೆ ಸಾಲಿನ ಫಲಿತಾಂಶ ಸೋಮವಾರ ಪ್ರಕಟವಾಗಿದ್ದು, ಹುಬ್ಬಳ್ಳಿಯ ತಹಸಿನ್ ಬಾನು ದವಡಿ ತಮ್ಮ ಮೊದಲ ಪ್ರಯತ್ನದಲ್ಲೇ ತಹಸಿನ್ ಬಾನು 482 ನೇ ರ್‍ಯಾಂಕ್ ಪಡೆದು ಉತ್ತೀರ್ಣರಾಗಿದ್ದಾರೆ.

ಹುಬ್ಬಳ್ಳಿ ನಗರದ ಖಾದರ್ ಬಾಷಾ ಹಾಗೂ ಹಸೀನ ಬೇಗಂ ದಂಪತಿ ಪುತ್ರಿ ತಹಸಿನ್ ಬಾನು ಯುಪಿಎಸ್ಸಿಯಲ್ಲಿ ಉತ್ತೀರ್ಣರಾಗಿರುವ ರಾಜ್ಯದ ಏಕೈಕ ಮುಸ್ಲಿಂ ಯುವತಿಯಾಗಿದ್ದಾರೆ.

2ನೇ ಬಾರಿ ಯುಪಿಎಸ್‌ಸಿ ಪಾಸ್ ಮಾಡಿದ ದೃಷ್ಟಿ ವಿಶೇಷಚೇತನೆ ಮೇಘನಾ2ನೇ ಬಾರಿ ಯುಪಿಎಸ್‌ಸಿ ಪಾಸ್ ಮಾಡಿದ ದೃಷ್ಟಿ ವಿಶೇಷಚೇತನೆ ಮೇಘನಾ

ಪ್ರಾಥಮಿಕ ಶಿಕ್ಷಣದದಿಂದ ಪಿಯುಸಿವರೆಗೆ ಹುಬ್ಬಳ್ಳಿ ನಗರದಲ್ಲೇ ವ್ಯಾಸಂಗ ಮಾಡಿರುವ ಬಾನು ಬಳಿಕ ಧಾರವಾಡ ಕೃಷಿ ವಿವಿಯಲ್ಲಿ ಬಿಎಸ್ಸಿ ಪದವಿ ಪಡೆದಿದ್ದಾರೆ. ಜನರ ಸೇವೆ ಮಾಡಬೇಕೆಂಬ ಉದ್ದೇಶದಿಂದ ಯುಪಿಎಸ್ಸಿ ಬರೆದು ಆಯ್ಕೆಯಾಗಿದ್ದು ಸಂತಸ ತಂದಿದೆ ಎಂದು ಅವರು ಕುಟುಂಬ ಸದಸ್ಯರು ಹರ್ಷ ವ್ಯಕ್ತಪಡಿಸುತ್ತಿದ್ದಾರೆ.

UPSC Success Story: Tahseen Banu Dawadi from Davangere: All India Rank 31, Civil Service Exam

ಮಗಳ ಸಾಧನೆ ಬಗ್ಗೆ ಪೋಷಕರು ಹಾಗೂ ಕುಟುಂಬಸ್ಥರು ಸಂತಸಗೊಂಡಿದ್ದಾರೆ. ಇವರ ತಂದೆ ನೈಋತ್ಯ ರೈಲ್ವೆ ಇಲಾಖೆಯಲ್ಲಿ ಗಾರ್ಡ್ ಆಗಿ ಕಾರ್ಯ ನಿರ್ವಹಿಸಿ ನಿವೃತ್ತಿ ಹೊಂದಿದ್ದಾರೆ.

ಕರ್ನಾಟಕದ ಏಕೈಕ ಮುಸ್ಲಿಂ ವಿದ್ಯಾರ್ಥಿ
ಹುಬ್ಬಳ್ಳಿಯ ತಹಸಿನ್ ಬಾನು ದೇಶದಲ್ಲಿ2021ರ ಸಾಲಿನಲ್ಲಿ ಕೇವಲ 21 ಯುಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಕರ್ನಾಟಕ ಏಕೈಕ ಮತ್ತು ದೇಶದ 21ನೇ ಮುಸ್ಲೀಮ್ ವಿದ್ಯಾರ್ಥಿಯರಾಗಿದ್ದಾರೆ. ಇದು 2010ರ ಬಳಿಕ ಮುಸ್ಲೀಂ ವಿದ್ಯಾರ್ಥಿಗಳ ಅತ್ಯಂತ ಕಳಪೆ ಸಾಧನೆಯಾಗಿದೆ. 2020ರ ಸಾಲಿನಲ್ಲಿ 68 ಸಂದರ್ಶನದವರೆಗೆ ಹೋಗಿದ್ದು, 25 ಮುಸ್ಲಿಂ ವಿದ್ಯಾರ್ಥಿಗಳು ನಾಗರೀಕ ಸೇವಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರು.

UPSC Success Story: Tahseen Banu Dawadi from Davangere: All India Rank 31, Civil Service Exam

ಕರ್ನಾಟಕದಿಂದ 27 ವಿದ್ಯಾರ್ಥಿಗಳು
2021ರ ಸಾಲಿನ ನಾಗರಿಕ ಸೇವೆಗಳ ಪರೀಕ್ಷಾ ಫಲಿತಾಂಶ ಬಿಡುಗಡೆಯಾಗಿದ್ದು, ಉತ್ತರ ಪ್ರದೇಶದ ಶೃತಿ ಶರ್ಮಾ ದೇಶಕ್ಕೆ ನಂಬರ್‌ 1 ರ‍್ಯಾಂಕ್ ಪಡೆದುಕೊಂಡಿದ್ದಾರೆ. ಕರ್ನಾಟಕದಿಂದ ಒಟ್ಟು 27 ಅಭ್ಯರ್ಥಿಗಳು ಯಪಿಎಸ್‌ಸಿ ಪಾಸ್ ಮಾಡಿದ್ದಾರೆ. ದಾವಣಗೆರೆಯ ಅವಿನಾಶ್ ರಾವ್‌ ಎಂಬುವವರು ರಾಜ್ಯಕ್ಕೆ ಪ್ರಥಮ ಹಾಗೂ ದೇಶಕ್ಕೆ 31ನೇ ಶ್ರೇಯಾಂಕ ಪಡೆದಿದ್ದಾರೆ.

(ಒನ್ಇಂಡಿಯಾ ಸುದ್ದಿ)

English summary
Here is the UPSC success story of Tahseen Banu from Hubballi: He secured All India Rank 31.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X