• search
 • Live TV
ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಹುಬ್ಬಳ್ಳಿಗೆ ಬಂಪರ್ ಉಡುಗೊರೆ ಕೊಟ್ಟ ಕೇಂದ್ರ ಸರ್ಕಾರ

|

ಹುಬ್ಬಳ್ಳಿ, ಆಗಸ್ಟ್ 31: ಹುಬ್ಬಳ್ಳಿಯ ಪ್ರಸಿದ್ಧ ಚೆನ್ನಮ್ಮ ವೃತ್ತದಲ್ಲಿ ಫ್ಲೈ ಓವರ್ ನಿರ್ಮಾಣವಾಗಲಿದೆ. 300 ಕೋಟಿ ವೆಚ್ಚದಲ್ಲಿ ಫ್ಲೈ ಓವರ್ ನಿರ್ಮಾಣ ಮಾಡಲು ಕೇಂದ್ರ ಸರ್ಕಾರ ಅಧಿಕೃತವಾಗಿ ಒಪ್ಪಿಗೆ ನೀಡಿದೆ.

   1000 ಚದರ ಕಿಲೋಮೀಟರ್ Indiaದ ಗಡಿಯನ್ನು ಆಕ್ರಮಿಸಿಕೊಂಡ China | Oneindia Kannada

   ಕೇಂದ್ರ ಸಚಿವ ಮತ್ತು ಧಾರವಾಡ ಸಂಸದ ಪ್ರಹ್ಲಾದ್ ಜೋಶಿ ಸೋಮವಾರ ಈ ಕುರಿತು ಟ್ವೀಟ್ ಮಾಡಿದ್ದಾರೆ. "ಹುಬ್ಬಳ್ಳಿ ಜನರ ಬಹುದಿನದ ಬೇಡಿಕೆಯಾಗಿದ್ದ ಚೆನ್ನಮ್ಮ ವೃತ್ತದಲ್ಲಿ ಫ್ಲೈ ಓವರ್ ನಿರ್ಮಾಣ ಈಗ ಈಡೇರಿದೆ" ಎಂದು ಹೇಳಿದ್ದಾರೆ.

   ಉತ್ತರ ಕರ್ನಾಟಕದ ಪಾಲಿಗೆ ಸಂಜೀವಿನಿಯಾಗಿರುವ ಹುಬ್ಬಳ್ಳಿ ಕಿಮ್ಸ್

   ಸಂಚಾರ ದಟ್ಟಣೆ ಪ್ರದೇಶವಾಗಿದ್ದ ಚೆನ್ನಮ್ಮ ವೃತ್ತದಲ್ಲಿ ಫ್ಲೈ ಓವರ್ ನಿರ್ಮಾಣವಾಗಬೇಕು ಎಂಬುದು ಬಹು ದಿನದ ಬೇಡಿಕೆಯಾಗಿತ್ತು. ಪ್ರಹ್ಲಾದ್ ಜೋಶಿ ಕೇಂದ್ರ ಸಚಿವರಾದ ಬಳಿಕ ಈ ಬೇಡಿಕೆ ಮತ್ತಷ್ಟು ಜೋರಾಗಿ ಕೇಳಿ ಬಂದಿತ್ತು.

   ಹುಬ್ಬಳ್ಳಿ-ಧಾರವಾಡ ಬೈಪಾಸ್‌ ರಸ್ತೆಯ ಪ್ರಸ್ತಾವನೆಯನ್ನು ಕೇಂದ್ರಕ್ಕೆ ಕಳಿಸಲು ಸೂಚನೆ

   "ಈ ಭಾಗದ ಜನರ ಬೇಡಿಕೆಗೆ ಸ್ಪಂದಿಸಿ ಈ ಯೋಜನೆಗೆ ಅನುಮೋದನೆ ನೀಡಿದ್ದಕ್ಕಾಗಿ ನಾನು ಈ ಸಂದರ್ಭದಲ್ಲಿ ಜನತೆಯ ಪರವಾಗಿ ಕೇಂದ್ರ ಸರ್ಕಾರಕ್ಕೆ ಹಾಗೂ ಪ್ರಧಾನಿ ಶ್ರೀ ನರೇಂದ್ರ ಮೋದಿ ಮತ್ತು ಕೇಂದ್ರ ಸರ್ಕಾರ ಸಚಿವರಾದ ಶ್ರೀ ನಿತಿನ್ ಗಡ್ಕರಿ ಅವರಿಗೆ ಹಾರ್ದಿಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ" ಎಂದು ಪ್ರಹ್ಲಾದ್ ಜೋಶಿ ಟ್ವೀಟ್ ಮಾಡಿದ್ದಾರೆ.

   ಹುಬ್ಬಳ್ಳಿ ಧಾರವಾಡ ನಗರಾಭಿವೃದ್ಧಿ ಬಗ್ಗೆ ಮಹತ್ವ ನಿರ್ಣಯಗಳು

   ಹುಬ್ಬಳ್ಳಿ ಎಂದಾಕ್ಷಣ ತಟ್ಟನೆ ನೆನಪಿಗೆ ಬರುವುದು ಚೆನ್ನಮ್ಮ ಸರ್ಕಲ್. ಡಾ. ರಾಜ್‌ ಕುಮಾರ್‌ ನಟನೆಯ 'ಆಕಸ್ಮಿಕ' ಚಿತ್ರದ ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಹಾಡಿನ ಚಿತ್ರೀಕರಣವನ್ನು ಇದೇ ಸರ್ಕಲ್‌ನಲ್ಲಿ ಮಾಡಲಾಗಿತ್ತು.

   ಪುನೀತ್‌ ರಾಜ್‌ಕುಮಾರ್‌ ನಟನೆಯ 'ದೊಡ್ಮನೆ ಹುಡುಗ' ಚಿತ್ರದ ಹಾಡಿನ ಶೂಟಿಂಗ್‌ ಸಹ ಇಲ್ಲಿ ನಡೆದಿತ್ತು. ಹುಬ್ಬಳ್ಳಿ ನಗರ ಬೆಳೆದಂತೆ ಚೆನ್ನಮ್ಮ ಸರ್ಕಲ್‌ನಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿತ್ತು.

   English summary
   Union government approved to build flyover at Chennamma circle Hubballi, Karnataka.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X