ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ತುಮಕೂರು-ದಾವಣಗೆರೆ ರೈಲ್ವೆ ಮಾರ್ಗ ಸಮೀಕ್ಷೆ ಪೂರ್ಣ: ಜೋಶಿ

By ಹುಬ್ಬಳ್ಳಿ ಪ್ರತಿನಿಧಿ
|
Google Oneindia Kannada News

ಹುಬ್ಬಳ್ಳಿ, ನವೆಂಬರ್, 15 : ಬಹುದಿನಗಳ ಬೇಡಿಕೆಯಾಗಿದ್ದ ತುಮಕೂರು-ಚಿತ್ರದುರ್ಗ ಹಾಗೂ ದಾವಣಗೆರೆ ರೈಲು ಮಾರ್ಗದ ಸಮೀಕ್ಷೆ ಪೂರ್ಣಗೊಂಡಿದೆ. ಸದ್ಯ ಈ ಯೋಜನೆಗೆ ರಾಜ್ಯ ಸರಕಾರ ಭೂಮಿ ಒದಗಿಸಬೇಕಿದೆ ಎಂದು ಸಂಸದ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.

ನಗರದಲ್ಲಿ ರೈಲು ನಿಲ್ದಾಣದಲ್ಲಿ ಎಸ್ಕಲೇಟರ್ ಗೆ ಚಾಲನೆ ನೀಡಿ ಮಾತನಾಡಿದ ಅವರು, ತುಮಕೂರು-ಚಿತ್ರದುರ್ಗ ಹಾಗೂ ದಾವಣಗೆರೆ ರೈಲು ಮಾರ್ಗದ ಸಮೀಕ್ಷೆ ಪೂರ್ಣಗೊಂಡಿದ್ದು. ಈ ಮಾರ್ಗ ಪೂರ್ಣಗೊಂಡಲ್ಲಿ ಹುಬ್ಬಳ್ಳಿಯಿಂದ ಬೆಂಗಳೂರಿಗೆ ಕೇವಲ ನಾಲ್ಕೂವರೆ ತಾಸುಗಳಲ್ಲಿ ಪ್ರಯಾಣಿಸಬಹುದು ಎಂದರು.

tumakuru-Davanagere railway line survey completed-Pralhad Joshi

ಸದ್ಯ ಬೀರೂರು, ಚಿಕ್ಕಜಾಜೂರು, ಅರಸೀಕೆರೆ ಮಾರ್ಗವಾಗಿ ಸುತ್ತು ಬಳಸಿ ಬೆಂಗಳೂರಿಗೆ ಪ್ರಯಾಣಿಸಬೇಕಾಗಿದೆ. ಹೊಸ ಮಾರ್ಗದಿಂದ ಸೂಪರ್ ಮತ್ತು ಸೆಮಿ ಸೂಪರ್ ಟ್ರೈನ್ ಗಳನ್ನು ಓಡಿಸಬಹುದು. ಈ ಕಾಮಗಾರಿಗೆ ಕೇಂದ್ರದಿಂದ 1800 ಕೋಟಿ ರೂ. ಅನುದಾನ ದೊರೆತಿದೆ.

ಈಗ ಪ್ರತಿ ಗಂಟೆಗೆ 80 ಕಿ.ಮೀ. ವೇಗದಲ್ಲಿ ರೈಲುಗಳು ಸಂಚರಿಸುತ್ತಿದ್ದ ಹೊಸ ಮಾರ್ಗ ನಿರ್ಮಾಣದಿಂದ ಗಂಟೆಗೆ 120 ರಿಂದ 130 ಕಿ.ಮೀ ವೇಗದಲ್ಲಿ ರೈಲುಗಳನ್ನು ಓಡಿಸಬಹುದಾಗಿದೆ ಎಂದರು. ಇನ್ನು ಹುಬ್ಬಳ್ಳಿ - ಬೆಂಗಳೂರು ನಡುವಿನ ದ್ವಿಮಾರ್ಗ ಯೋಜನೆ 2019 ರೊಳಗಾಗಿ ಪೂರ್ಣಗೊಳಿಸಬೇಕೆಂದರು.

ರೈಲ್ವೆ ಡಿಜಿಎಂ ಎ.ಕೆ.ಗುಪ್ತಾ ಮಾತನಾಡಿ, ಹುಬ್ಬಳ್ಳಿ ಸೇರಿದಂತೆ ಇತರೆ ಕೆಲ ನಿಲ್ದಾಣಗಳನ್ನು 60 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗಿದೆ. 9 ಕೋಟಿ ರೂ.ವೆಚ್ಚದಲ್ಲಿ ಬೆಂಗಳೂರು, ಯಶವಂತಪುರ, ಮೈಸೂರಿನಲ್ಲಿ ಎಸ್ಕಲೇಟರ್ ಅಳವಡಿಸಲಾಗಿದ್ದು, ಬೆಳಗಾವಿಯ ರೈಲು ನಿಲ್ದಾಣಗಳಲ್ಲಿ ಆದಷ್ಟು ಬೇಗ ಎಸ್ಕಲೇಟರ್ ಅಳವಡಿಸಲಾಗುವುದು ಎಂದರು.

English summary
Tumakuru and Davangere railway new line survey is completed Hubbali MP Pralhad Joshi said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X