ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಮಿತ್ ಶಾ ಕಾರ್ಯಕ್ರಮಕ್ಕಾಗಿ ಮರಗಳಿಗೆ ಕೊಡಲಿ: ಆಕ್ರೋಶ

|
Google Oneindia Kannada News

ಹುಬ್ಬಳ್ಳಿ, ಜನವರಿ 17: ಅಮಿತ್ ಶಾ ಕಾರ್ಯಕ್ರಮಕ್ಕಾಗಿ ಮರಗಳ ಮಾರಣ ಹೋಮ ಮಾಡಲಾಗಿದ್ದು, ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹುಬ್ಬಳ್ಳಿಯ ನೆಹರು ಮೈದಾನದಲ್ಲಿ ಜನವರಿ 18 ಕ್ಕೆ ಅಮಿತ್ ಶಾ ಕಾರ್ಯಕ್ರಮವಿದೆ. ಹಾಗಾಗಿ ನೆಹರು ಮೈದಾನವನ್ನು ಸಜ್ಜುಗೊಳಿಸಲಾಗಿದೆ.

ಬೆಂಗಳೂರಿನ ಅರಮನೆ ಮೈದಾನದಲ್ಲಿ ಅಭಿನಂದನಾ ಸಮಾರಂಭಬೆಂಗಳೂರಿನ ಅರಮನೆ ಮೈದಾನದಲ್ಲಿ ಅಭಿನಂದನಾ ಸಮಾರಂಭ

ಹೀಗೆ ಸಜ್ಜುಗೊಳಿಸುವಾಗ ನೆಹರೂ ಮೈದಾನ ರಸ್ತೆ ಬದಿಯಲ್ಲಿದ್ದ ಹಲವು ಹೊಂಗೆ ಮರಗಳನ್ನು ಪಾಲಿಕೆ ಸಿಬ್ಬಂದಿ ಕಡಿದುಹಾಕಿದ್ದಾರೆ. ಇದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

Trees Cut Down In Hubli For Amit Shahs Program

ಹೊಂಗೆ ಮರದ ಟೊಂಗೆಗಳನ್ನು ಕಡಿಯಲು ಪೊಲೀಸ್ ಅಧಿಕಾರಿಗಳು ಸೂಚಿಸಿದ್ದರು. ಭದ್ರತಾ ದೃಷ್ಟಿಯಿಂದ ಟೊಂಗೆಗಳನ್ನು ಕಡಿಯಲು ಸೂಚಿಸಲಾಗಿತ್ತು. ಆದರೆ ಪಾಲಿಕೆ ಸಿಬ್ಬಂದಿ ಮರಗಳನ್ನೇ ಕಡಿದುಬಿಟ್ಟಿದ್ದಾರೆ.

ನಿತೀಶ್ ಕುಮಾರ್ ಎನ್‌ಡಿಎ ಸಾರಥಿ: ಅಮಿತ್ ಶಾ ಘೋಷಣೆನಿತೀಶ್ ಕುಮಾರ್ ಎನ್‌ಡಿಎ ಸಾರಥಿ: ಅಮಿತ್ ಶಾ ಘೋಷಣೆ

ಬುಡ ಸಮೇತ ಮರಗಳನ್ನು ಕಡಿದಿರುವ ಬಗ್ಗೆ ಸ್ಥಳೀಯರು ಪಾಲಿಕೆ ವಿರುದ್ಧ ಮತ್ತು ಪೊಲೀಸ್ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಮಿತ್ ಶಾ ಅವರು ಜನವರಿ 18 ಕ್ಕೆ ರಾಜ್ಯಕ್ಕೆ ಬರಲಿದ್ದು, ಹುಬ್ಬಳ್ಳಿಯಲ್ಲಿ ಬೃಹತ್ ಸಮಾವೇಶ ಉದ್ದೇಶಿಸಿ ಮಾತನಾಡಲಿದ್ದಾರೆ. ಯಡಿಯೂರಪ್ಪ ಅವರೊಂದಿಗೆ ಸಂಪುಟ ವಿಸ್ತರಣೆ ಬಗ್ಗೆಯೂ ಅಮಿತ್ ಶಾ ಮಾತುಕತೆ ನಡೆಸಲಿದ್ದಾರೆ.

English summary
Road side trees has been cut down for home minister Amit Shah's program, public unhappy with municipality.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X