ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪ್ರವಾಸಿಗರಿಗೆ ಸೂಚನೆ; ದೂಧ್‌ ಸಾಗರಕ್ಕೆ ಪ್ರವೇಶ ನಿಷೇಧ

|
Google Oneindia Kannada News

ಹುಬ್ಬಳ್ಳಿ ಜು.11: ಜೋರು ಮಳೆ ಮತ್ತು ಸೂಕ್ಷ್ಮ ಪ್ರದೇಶವಾಗಿರುವ ಹಿನ್ನೆಲೆಯಲ್ಲಿ ದೂಧ್ ಸಾಗರ್ ಫಾಲ್ಸ್‌ಗೆ ಪ್ರವಾಸಿಗರ ಭೇಟಿಗೆ ನಿಷೇಧ ಹೇರಲಾಗಿದೆ. ರೈಲ್ವೆ ರಕ್ಷಣಾ ಪಡೆ (ಆರ್‌ಪಿಎಫ್) ನಿರ್ಬಂಧ ಹೇರಿರುವುದಕ್ಕೆ ಪ್ರವಾಸಿಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮಳೆಗಾಲ ಆರಂಭವಾಗುತ್ತಿದ್ದಂತೆ ಕರ್ನಾಟಕ ಮತ್ತು ಗೋವಾ ಗಡಿ ಭಾಗದಲ್ಲಿರುವ ದೂಧ್‌ ಸಾಗರ ಜಲಪಾತವು ರಮಣೀಯತೆಗೆ, ವೈಭವಕ್ಕೆ ಮರಳುತ್ತದೆ. ಜೊತೆಗೆ ಪ್ರವಾಸಿಗರನ್ನು ತನ್ನತ್ತ ಆಕರ್ಷಿಸುತ್ತದೆ. ಇದೀಗ ಅಂತಹ ಪ್ರಕೃತಿದತ್ತ ಸೌಂದರ್ಯ ಸವಿಯಲು ಆಗಮಿಸಲು ಬರುವವರನ್ನು ನಿರ್ಬಂಧಿಸಲಾಗಿದೆ.

ಗೋವಾ ಕಾಂಗ್ರೆಸ್ ಬಿಕ್ಕಟ್ಟು; ಬಿಜೆಪಿ ವಿರುದ್ಧ ಸಿದ್ದರಾಮಯ್ಯ ಆರೋಪ ಗೋವಾ ಕಾಂಗ್ರೆಸ್ ಬಿಕ್ಕಟ್ಟು; ಬಿಜೆಪಿ ವಿರುದ್ಧ ಸಿದ್ದರಾಮಯ್ಯ ಆರೋಪ

ದೂಧ್‌ ಸಾಗರ ಜಲಪಾತ ಕರ್ನಾಟಕ ಹಾಗೂ ಗೋವಾ ಗಡಿ ಭಾಗದಲ್ಲಿರುವ ದಟ್ಟ ಕಾಡುಗಳು ಹಾಗೂ ಬೆಟ್ಟಗಳ ಮಧ್ಯೆ ಹರಿಯುತ್ತದೆ. ಇದಕ್ಕೆ ಉತ್ತರ ಕನ್ನಡ ಜಿಲ್ಲೆಯ ಕ್ಯಾಸೆಲ್ ರಾಕ್ ನಲ್ಲಿ ಇಳಿದು ಅಲ್ಲಿಂದ 15 ಕಿ. ಮೀ. ಕ್ರಮಿಸಬೇಕಿದೆ. ಈ ಪ್ರಯಾಣ ರೈಲ್ವೆ ಹಾದಿಯ ಮೇಲೆ ಸಾಗುತ್ತದೆ.

Tourists Entry banned to Dudha Sagar Falls

ರೈಲು ಇಳಿಯಲು ಬಿಡದ ಅಧಿಕಾರಿಗಳು; ರೈಲ್ವೆ ಮಾರ್ಗದ ಮೂಲಕವೇ ಪ್ರವೇಶಿಸಬಹುದಾದ ಈ ಜಲಪಾತಕ್ಕೆ ಆಗಮಿಸುವವರನ್ನು ಜಲಪಾತದ ಸ್ಥಳದಲ್ಲಿ ಇಳಿಯಲು ರೈಲ್ವೆ ರಕ್ಷಣಾ ಪಡೆ ತಂಡಗಳು ಬಿಡುತ್ತಿಲ್ಲ, ಮರಳಿ ಕಳುಹಿಸುತ್ತಿದ್ದಾರೆ. ಕಳೆದ ವಾರ ರಾಜ್ಯದ ವಿವಿಧ ಭಾಗದಿಂದ ಆಗಮಿಸಿದ್ದ ಸುಮಾರು 400 ಜನರನ್ನು ಗೋವಾಗೆ ಕಳುಹಿಸಲಾಗಿದೆ.

ಘಾಟ್ ನಂತಹ ಸೂಕ್ಷ್ಮ ಪ್ರದೇಶದಲ್ಲಿ ಹೆಚ್ಚು ಜನ ಸೇರುವುದು ಸುರಕ್ಷಿತವಲ್ಲ. ಜೀವ ಹಾನಿ, ರೈಲ್ವೆ ಸಂಚಾರಕ್ಕೆ ಅಡಚಣೆ, ರೈಲ್ವೆ ಆಸ್ತಿಗೆ ಹಾನಿ ಉಂಟಾಗಬಹುದು. ಜೋರು ಮಳೆಯಿಂದ ಗುಡ್ಡ ಕುಸಿತಗೊಳ್ಳುವ ಸಾಧ್ಯತೆ ಹೆಚ್ಚು. ಇಲ್ಲಿ ಜನರ ಜೀವಕ್ಕೆ ಯಾವುದೇ ಭದ್ರತೆಯೂ ಇಲ್ಲ. ಈ ಹಿನ್ನೆಲೆ ಪ್ರವಾಸಿಗರಿಗೆ ತಾತ್ಕಾಲಿಕವಾಗಿ ನಿರ್ಬಂಧ ಹೇರಲಾಗಿದೆ.

ಕಾನೂನು ಕ್ರಮ; ದೂಧ್‌ ಸಾಗರ ಜಲಪಾತದ ಸ್ಥಳ ಸಾರ್ವಜನಿಕವಾಗಿ ಪ್ರವೇಶಿಸುವುದು ಕಾನೂನು ಬಾಹಿರವಾಗಿದೆ. ಈ ಸಂಬಂಧ ಜನರನ್ನು ಎಚ್ಚರಿಸುತ್ತಿದ್ದು, ನಿಯಮ ಮೀರಿ ಯಾರಾದರೂ ಆಗಮಿಸಿದವರ ವಿರುದ್ಧ ಕಾನೂನು ಕ್ರಮ ಜರುಗಿಸಲು ಚಿಂತನೆ ನಡೆದಿದೆ. ಇದು ವಿದ್ಯಾರ್ಥಿಗಳು ಅಥವಾ ಪ್ರವಾಸಿಗರಿಗೆ ಸಮಸ್ಯೆ ತಂದೊಡ್ಡಬಹುದು. ಆದ್ದರಿಂದ ಈ ಜಲಪಾತಕ್ಕೆ ಬರುವುದನ್ನು ನಿಲ್ಲಿಸಿ ಎಂದು ಆರ್‌ಪಿಎಫ್ ಅಧಿಕಾರಿಯೊಬ್ಬರು ತಿಳಿಸಿದರು.

Tourists Entry banned to Dudha Sagar Falls

ಮಳೆಗಾಲದಲ್ಲಿ ಕ್ಯಾಸಲ್ ರಾಕ್ ಮತ್ತು ದೂಧ್‌ ಸಾಗರ ಪ್ರದೇಶಗಳು 'ರೆಡ್ ಅಲರ್ಟ್' ಎಚ್ಚರಿಕೆಗೆ ಒಳಪಟ್ಟಿರುತ್ತವೆ. ಹೀಗಾಗಿ ಕ್ಯಾಸಲ್ ರಾಕ್ ಮತ್ತು ದೂಧ್‌ ಸಾಗರ ಪ್ರದೇಶಗಳಲ್ಲಿ ಸಾರ್ವಜನಿಕರನ್ನು ಇಳಿಯಲು ಅನುಮತಿ ನೀಡುತ್ತಿಲ್ಲ ಎಂದು ತಿಳಿದು ಬಂದಿದೆ.

ಮಾನ್ಸೂನ್ ಋತುವಿನಲ್ಲಿ ಪ್ರವಾಸಿಗರನ್ನು ಪ್ರೋತ್ಸಾಹಿಸಲು ರಾಜ್ಯ ಸರ್ಕಾರ ಯೋಜನೆಗಳನ್ನು ರೂಪಸಿಬೇಕು. ಮಾನ್ಸೂನ್ ಪ್ರವಾಸೋದ್ಯಮ ಬೆಂಬಲಿಸಬೇಕು ಎಂದು ಗೋವಾದ ಪ್ರವಾಸಿಗರೊಬ್ಬರು ಒತ್ತಾಯಿಸಿದರು.

Recommended Video

Vijay Mallya ಅವರಿಗೆ 4 ತಿಂಗಳು ಜೈಲು ಹಾಗೂ 2000/-ರೂ ದಂಡ ವಿಧಿಸಿದ ನ್ಯಾಯಾಲಯ | #World | OneIndia Kannada

English summary
The Railway Protection Force (RPF) has ban the entry of tourists to Dudh Sagar falls on the Karnataka and Goa border.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X