ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೇಬಿನ ರೇಟಿನ ಜತೆಗೆ ಟೊಮೆಟೊ ಫೈಟು; ಕೇಜಿಗೆ ಎಪ್ಪತ್ತು ರುಪಾಯಿ

By Basavaraj
|
Google Oneindia Kannada News

ಹುಬ್ಬಳ್ಳಿ, ಜುಲೈ 11: ಅಲ್ಲೆಲ್ಲೋ ದೂರದ ದೆಹಲಿಯಲ್ಲಿ ಒಂದು ಕೇಜಿ ಟೊಮೆಟೋಗೆ ತೊಂಬತ್ತು ರುಪಾಯಿ ಬೆಲೆ ಅಂತೆ ಎಂಬ ಸುದ್ದಿ ನೋಡಿ, ಹುಬ್ಬೇರಿಸಿದವರಿಗೆ ಹುಬ್ಬಳ್ಳಿಯಲ್ಲಿನ ಬೆಲೆ ಗಮನಕ್ಕೆ ಬಂದಿರಲಿಕ್ಕಿಲ್ಲ. ಹೋದ ವಾರದವರೆಗೆ ಸಂತೆಯಲ್ಲಿ 50 ರೂಪಾಯಿ ಮಾರಾಟ ಆಗುತ್ತಿದ್ದ ಟೊಮೆಟೋ 70ಕ್ಕೆ ಜಿಗಿದಿದೆ.

ಗೊಬ್ಬರದ ಮೇಲಿನ ಜಿಎಸ್ ಟಿ ಶೇ 12ರಿಂದ 5ಕ್ಕೆ ಇಳಿಕೆ, ರೈತರು ನಿರಾಳಗೊಬ್ಬರದ ಮೇಲಿನ ಜಿಎಸ್ ಟಿ ಶೇ 12ರಿಂದ 5ಕ್ಕೆ ಇಳಿಕೆ, ರೈತರು ನಿರಾಳ

ಮಾರುಕಟ್ಟೆಯಲ್ಲಿ ಟೊಮೆಟೊ ದರ ತೀವ್ರ ಏರಿಕೆ ಕಾಣುತ್ತಿದ್ದು, ಬೆಳೆಗಾರರ ಮುಖದಲ್ಲೇನೋ ನಗು ಮೂಡಲು ಕಾರಣವಾಗಿದ್ದರೆ, ಯಪ್ಪೋ ಈ ಪಾಟಿ ಬೆಲೆ ಆಯ್ತಲ್ಲ ಎಂದು ಗ್ರಾಹಕರು ಕಂಗಾಲಾಗುತ್ತಿದ್ದಾರೆ.

Tomato price drastically hiked

ಇಲ್ಲಿನ ಸಂತೆಗೆ ಧಾರವಾಡ, ಹಾವೇರಿ, ಬಾಗಲಕೋಟೆಯಿಂದ ಹಣ್ಣು, ಸೊಪ್ಪು ಹಾಗೂ ತರಕಾರಿಗಳು ಬರುತ್ತವೆ. ಆದರೆ ಈ ಬಾರಿ ಟೊಮೆಟೊ ಆವಕವೂ ಕಡಿಮೆಯಾಗಿದ್ದು, ಬೆಲೆಯೂ ದುಬಾರಿಯಾಗಿದೆ. ಹೀಗಾಗಿ ಹೋಟೆಲ್‌ಗಳ ಮಾಲೀಕರು ಆಹಾರ ಪದಾರ್ಥಗಳಿಗೆ ಟೊಮೆಟೊ ಬಳಕೆಯನ್ನು ಕಡಿಮೆ ಮಾಡಿದ್ದಾರೆ.

ಖರೀದಿಗೆ ಹಿಂದೇಟು
ಇನ್ನು ಮನೆಗಳಲ್ಲೂ ಟೊಮೆಟೊ ಬದಲಾಗಿ ಹುಣಸೆ ಹಣ್ಣು ಹೆಚ್ಚಾಗಿ ಬಳಕೆಯಾಗುತ್ತಿದೆ. ಆಹಾರ ಪದಾರ್ಥಗಳ ತಯಾರಿಕೆಗೆ ಟೊಮೆಟೊ ಅಗತ್ಯವಾಗಿರುವುದರಿಂದ ಜನರು ಸ್ವಲ್ಪ ಪ್ರಮಾಣದಲ್ಲಿ ಖರೀದಿಸುತ್ತಿದ್ದಾರೆ. ಸಾಮಾನ್ಯವಾಗಿ 2-3 ಕೆ.ಜಿ. ಖರೀದಿಸುತ್ತಿದ್ದ ಜನರು, ಇದೀಗ ಕಾಲು, ಅರ್ಧ ಕೆ.ಜಿ. ಖರೀದಿಗೆ ಸೀಮಿತವಾಗಿದ್ದಾರೆ.

Tomato price drastically hiked

ಇಳುವರಿ ಕಡಿಮೆ
ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ಈ ಬಾರಿ ಮಳೆ ಕೊರತೆ ತೀವ್ರವಾಗಿದೆ. ಹೀಗಾಗಿ ಟೊಮೆಟೊ ಇಳುವರಿ ಕುಸಿದಿದೆ. ಕೊಳವೆಬಾವಿ ನೀರಿನಲ್ಲಿ ಬೆಳೆದ ಟೊಮೆಟೊ ಮಾತ್ರ ಮಾರುಕಟ್ಟೆಗೆ ಬರುತ್ತಿದೆ. ಸಗಟು ಮಾರುಕಟ್ಟೆಯಲ್ಲಿ ಕೆ.ಜಿ. 60 ರೂಪಾಯಿ ಕೊಟ್ಟು ಖರೀದಿಸಿದ್ದು, ಇಲ್ಲಿ ಕೆ.ಜಿ.ಗೆ 70ರಂತೆ ಮಾರಾಟ ಮಾಡುತ್ತಿದ್ದೇವೆ. ದೂರದ ಊರುಗಳಿಂದ ವ್ಯಾಪಾರ ಮಾಡಲು ಬಂದವರಿಗೆ ಕನಿಷ್ಠ 10 ರೂಪಾಯಿ ಲಾಭ ಬೇಡವೇ ಎಂಬುದು ವ್ಯಾಪಾರಿಗಳ ವಾದವಾಗಿದೆ.

ಮಳೆ ಕೊರತೆ ನೀಗಿಸಲು ಆಗಸ್ಟ್ ನಲ್ಲಿ ಮೋಡ ಬಿತ್ತನೆ: ಕೃಷ್ಣ ಬೈರೇಗೌಡಮಳೆ ಕೊರತೆ ನೀಗಿಸಲು ಆಗಸ್ಟ್ ನಲ್ಲಿ ಮೋಡ ಬಿತ್ತನೆ: ಕೃಷ್ಣ ಬೈರೇಗೌಡ

ತರಕಾರಿಗಳ ಬೆಲೆಯಲ್ಲಿ ತುಸು ಏರಿಕೆ
ಸಂತೆಯಲ್ಲಿ ತರಕಾರಿಗಳ ಬೆಲೆ ತುಸು ಏರಿಕೆಯಾಗಿದೆ. ಬೀನ್ಸ್ ಒಂದು ಕೆ.ಜಿ.ಗೆ 60, ಬದನೆಕಾಯಿ 60, ದೊಡ್ಡ ಮೆಣಸಿನಕಾಯಿ 80, ಬೆಂಡೆಕಾಯಿ 40 ರೂಪಾಯಿ ಹೀಗೆ ಹಲವು ತರಕಾರಿಗಳ ದರ ಹೆಚ್ಚಳವಾಗಿದ್ದರೆ, ಸೊಪ್ಪುಗಳ ಬೆಲೆಯಲ್ಲಿ ಯಾವುದೇ ವ್ಯತ್ಯಾಸ ಆಗಿಲ್ಲ.

English summary
Tomato price drastically hiked in market either retail or whole sale in Hubballi. Due to lack of rain there is no tomato crop in Dharwad, Haveri and Gadag. So, these district’s farmers didn’t get normal yield in this year. Meanwhile tomato growers expressed happy, but consumers unhappy with tomato price hike.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X