ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕುಂದಗೋಳ: ಕಾಂಗ್ರೆಸ್ ನಲ್ಲಿ ಗಂಡಸರಿಲ್ಲ, ಅದಕ್ಕೆ ಡಿಕೆಶಿಯನ್ನು ಕರೆತಂದಿರೋದು

|
Google Oneindia Kannada News

Recommended Video

ಡಿ ಕೆ ಶಿವಕುಮಾರ್ ಹಾಗು ಮೈತ್ರಿ ಸರ್ಕಾರದ ವಿರುದ್ಧ ಹರಿಹಾಯ್ದ ಬಿಜೆಪಿ ನಾಯಕ | Oneindia Kannada

ಹುಬ್ಬಳ್ಳಿ, ಮೇ 10: ಉತ್ತರ ಕರ್ನಾಟಕದ ಬಿಜೆಪಿಯ 'ಮಾತಿನ ಮಲ್ಲ' ಬಸನಗೌಡ ಪಾಟೀಲ್ ಯತ್ನಾಳ್ ಮತ್ತೆ ಸಮ್ಮಿಶ್ರ ಸರಕಾರದ ವಿರುದ್ದ ತಮ್ಮದೇ ಶೈಲಿಯಲ್ಲಿ ಹರಿಹಾಯ್ದಿದ್ದಾರೆ.

ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ

ಕುಂದಗೋಳ ಅಸೆಂಬ್ಲಿ ಉಪಚುನಾವಣೆಗೆ ಕಾಂಗ್ರೆಸ್ ನವರು ಸಚಿವ ಡಿ ಕೆ ಶಿವಕುಮಾರ್ ಅವರನ್ನು ಯಾಕೆ ಕರೆತಂದದ್ದು ಅಂದರೆ, ಉತ್ತರ ಕರ್ನಾಟಕದ ಭಾಗದಲ್ಲಿ ಕಾಂಗ್ರೆಸ್ ನಲ್ಲಿ ಯಾರೂ ಗಂಡಸರು ಇಲ್ಲ ಎನ್ನುವ ಕಾರಣಕ್ಕಾಗಿ ಎಂದು ಯತ್ನಾಳ್ ಹೇಳಿದ್ದಾರೆ.

ಕುಂದಗೋಳ ಉಪ ಚುನಾವಣೆ : ಬಿಜೆಪಿಗೆ ಶಾಕ್‌ ಕೊಟ್ಟ ಡಿಕೆಶಿಕುಂದಗೋಳ ಉಪ ಚುನಾವಣೆ : ಬಿಜೆಪಿಗೆ ಶಾಕ್‌ ಕೊಟ್ಟ ಡಿಕೆಶಿ

ಪಕ್ಷದ ಪರವಾಗಿ ಪ್ರಚಾರ ನಡೆಸುತ್ತಾ ಯತ್ನಾಳ್, ಪುಣ್ಯಕ್ಕೆ ಜೆಡಿಎಸ್ ವರಿಷ್ಠ ದೇವೇಗೌಡರಿಗೆ 28ಜನ ಮೊಮ್ಮಕ್ಕಳು ಇಲ್ಲ, ಇದ್ದರೆ ಎಲ್ಲರಿಗೂ ಪಕ್ಷದ ಟಿಕೆಟ್ ಕೊಡಿಸುತ್ತಿದ್ದರು, 90ವರ್ಷವಾದರೂ ಅವರಿಗೆ ದುರಾಸೆ ಇನ್ನೂ ಕಮ್ಮಿಯಾಗಿಲ್ಲಎಂದು ಲೇವಡಿ ಮಾಡಿದ್ದಾರೆ.

There is no stron leaders in North Karnataka, that is why DK Shivakumar campaigning

ರಾಜ್ಯ ರಾಜಕಾರಣದ ಭವಿಷ್ಯವನ್ನು ಕುಂದಗೋಳ ಮತ್ತು ಚಿಂಚೋಳಿಯ ಉಪಚುನಾವಣೆ ಬರೆಯಲಿದೆ. ಮತದಾರರಲ್ಲಿ ನಮ್ಮ ಮನವಿ ಏನೆಂದರೆ, ಬಿಜೆಪಿಗೆ ಮತ ನೀಡಿದರೆ ಈ ಎರಡು ಕ್ಷೇತ್ರಗಳನ್ನು ರಾಜ್ಯದಲ್ಲೇ ಮಾದರಿ ಕ್ಷೇತ್ರವನ್ನಾಗಿ ಮಾಡುತ್ತೇವೆ ಎಂದು ಯತ್ನಾಳ್ ಭರವಸೆ ನೀಡಿದ್ದಾರೆ.

ಐಟಿ ದಾಳಿಗೆ ಹೆದರಲಿಲ್ಲ ಇನ್ನು ಕಣ್ಣೀರು ಹಾಕಿ ಓಟು ಕೇಳ್ತೀನಾ?: ಡಿಕೆಶಿ ಐಟಿ ದಾಳಿಗೆ ಹೆದರಲಿಲ್ಲ ಇನ್ನು ಕಣ್ಣೀರು ಹಾಕಿ ಓಟು ಕೇಳ್ತೀನಾ?: ಡಿಕೆಶಿ

ನಿಖಿಲ್ ಎಲ್ಲಿದ್ದೀಯಪ್ಪಾ.. ಎನ್ನುವ ಜನಪ್ರಿಯ ಡೈಲಾಗನ್ನೂ ತಮ್ಮ ಭಾಷಣದಲ್ಲಿ ಪ್ರಯೋಗಿಸಿದ ಯತ್ನಾಳ್, ಬಿಜೆಪಿಯನ್ನು ಆಶೀರ್ವದಿಸುವಂತೆ ಮತದಾರರಲ್ಲಿ ಮನವಿ ಮಾಡಿದ್ದಾರೆ.

ನಾನು ಮನಸ್ಸು ಮಾಡಿದರೆ, ಎಂ ಬಿ ಪಾಟೀಲರನ್ನು ಬಿಜೆಪಿ ಕರೆತರುವುದು ದೊಡ್ಡ ವಿಷಯವಲ್ಲ, ಪಾಟೀಲರು ನಮ್ಮ ಪಕ್ಷಕ್ಕೆ ಸೇರುವುದಾದರೆ ನಾನೇ ಮುಂದೆ ನಿಂತು, ಪಕ್ಷದಲ್ಲಿ ಸೂಕ್ತ ಸ್ಥಾನಮಾನ ಅವರಿಗೆ ಸಿಗುವ ಹಾಗೆ ನೋಡಿಕೊಳ್ಳುತ್ತೇನೆ ಎಂದು ಯತ್ನಾಳ್ ಎರಡು ದಿನಗಳ ಹಿಂದೆ ಹೇಳಿದ್ದರು.

English summary
There is no stron leaders in North Karnataka, that is why DK Shivakumar campaigning, BJP MLA Basangouda Patil Yatnal statement.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X