ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗರ್ಭ ಧರಿಸುವುದನ್ನು ತಡೆಯಲು ಸರಕಾರದಿಂದ ನೂತನ ‘ಚುಚ್ಚು ಮದ್ದು'

By Basavaraj Maralihalli
|
Google Oneindia Kannada News

ಹುಬ್ಬಳ್ಳಿ, ಜೂನ್ 28: ಒಂದು ಮಗುವಿನ ನಂತರ ಇನ್ನೊಂದು ಮಗು ಪಡೆಯಲು ಅಂತರ ಕಾಯ್ದುಕೊಳ್ಳಬೇಕೆ? ಹಾಗಾದರೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪರಿಚಯಿಸುತ್ತಿರುವ 'ಅಂತರ' ಎಂಬ ಗರ್ಭ ನಿರೋಧಕ ಚುಚ್ಚು ಮದ್ದನ್ನು ಉಪಯೋಗಿಸಿ. ಒಂದು ಬಾರಿ ಈ ಚುಚ್ಚುಮದ್ದನ್ನು ಹಾಕಿಸಿಕೊಂಡರೆ 3 ರಿಂದ 4 ತಿಂಗಳು ಗರ್ಭ ಧರಿಸುವ ಸಾಧ್ಯತೆ ಇರುವುದಿಲ್ಲ.

ಹೌದು, ಸಾಮಾನ್ಯವಾಗಿ ಒಂದು ಮಗು ಜನನವಾದ ನಂತರ ಇನ್ನೊಂದು ಮಗು ಪಡೆಯುವ ಮಧ್ಯದಲ್ಲಿ ಅಂತರ ಕಾಯ್ದುಕೊಳ್ಳುತ್ತಾರೆ. ಇದಕ್ಕಾಗಿ ಕಾಂಡೋಮ್, ಕಾಪರ್‍ ಟಿ, ಮಾತ್ರೆ ಮತ್ತಿತರ ಉಪಾಯಗಳ ಮೊರೆ ಹೋಗುವುದು ಬಹುತೇಕ ದಂಪತಿಗಳು ಅನುಸರಿಸುವ ಕ್ರಮ.

The state government will introduce injection to prevent pregnancy

ಆದರೆ, ಇದರಿಂದ ಲೈಂಗಿಕ ತೃಪ್ತಿ ಸಿಗದೆ ಪರಿತಪಿಸುತ್ತಿರುವ ಪತಿ-ಪತ್ನಿಯರಿಗೆ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ 'ಅಂತರ' ಎಂಬ ನೂತನ ಚುಚ್ಚು ಮದ್ದನ್ನು ಉಚಿತವಾಗಿ ನೀಡುವ ಯೋಜನೆ ಸದ್ಯದಲ್ಲಿಯೇ ಜಾರಿಗೊಳ್ಳಲಿದೆ.

ಜಿಲ್ಲಾಸ್ಪತ್ರೆಗಳಲ್ಲಿ ನಂತರ ತಾಲೂಕು ಆಸ್ಪತ್ರೆಗಳಲ್ಲಿ

ಈಗಾಗಲೇ ಚುಚ್ಚುಮದ್ದು ಹಾಕುವ ಕುರಿತು ಇಲಾಖೆಯ ಸಿಬ್ಬಂದಿಗೆ ಅಗತ್ಯ ತರಬೇತಿ ನೀಡಲಾಗಿದೆ. ಆರಂಭದಲ್ಲಿ ಇದನ್ನು ಕೇವಲ ಜಿಲ್ಲಾ ಆಸ್ಪತ್ರೆಗಳಲ್ಲಿ ಮಾತ್ರ ಪರಿಚಯಿಸಲು ತಿರ್ಮಾನಿಸಲಾಗಿದೆ.

ಮುಂಬರುವ ವರ್ಷದಿಂದ ಈ ಸೇವೆ ತಾಲೂಕು ಆಸ್ಪತ್ರೆಗಳಲ್ಲಿಯೂ ಲಭ್ಯವಿರಲಿದೆ ಎಂದು ಆರೋಗ್ಯ ಇಲಾಖೆ ಮೂಲಗಳು ಹೇಳಿವೆ. ಅವಧಿ ಪೂರ್ಣಗೊಂಡ ನಂತರ ಪುನಃ ಈ ಚುಚ್ಚುಮದ್ದನ್ನು ಹಾಕಿಸಿಕೊಳ್ಳಬಹುದಾಗಿದ್ದು, ಒಂದು ವೇಳೆ ಮಕ್ಕಳು ಬೇಕು ಎಂದೆನಿಸಿದಾಗ ಇದನ್ನು ನಿಲ್ಲಿಸಬಹುದಾಗಿದೆ.

ಅಡ್ಡ ಪರಿಣಾಮಗಳಿಲ್ಲ

ಮುಖ್ಯವಾಗಿ ಗಮನಿಸಬೇಕಾದ ಅಂಶ ಎಂದರೆ, ಗರ್ಭ ಧರಿಸುವುದನ್ನು ತಡೆಯಲು ಮಾತ್ರೆ ತೆಗೆದುಕೊಳ್ಳುವುದು ಹಾಗೂ ಕಾಪರ್-ಟಿ ಹಾಕಿಸಿಕೊಳ್ಳುವುದರಿಂದ ಕೆಲವೊಂದು ಅಡ್ಡ ಪರಿಣಾಮಗಳಾಗುತ್ತವೆ ಎಂಬ ದೂರುಗಳಿವೆ.

ಆದರೆ, 'ಅಂತರ' ಚುಚ್ಚು ಮದ್ದಿನಿಂದ ಮಹಿಳೆಯರಿಗಾಗಲಿ ಅಥವಾ ಆಕೆಗೆ ಹುಟ್ಟುವ ಮಕ್ಕಳಿಗಾಗಲಿ ಯಾವುದೇ ಅಡ್ಡ ಪರಿಣಾಮಗಳಾಗುವುದಿಲ್ಲ ಎಂದು ಇಲಾಖೆಯ ಮೂಲಗಳು ಸ್ಪಷ್ಟಪಡಿಸಿವೆ. ಈ ಕಾರಣದಿಂದ ಈ ವಿಧಾನವನ್ನು ಆಪ್ತ ಸಮಾಲೋಚನೆ ಮೂಲಕ ಜನಪ್ರಿಯ ಗೊಳಿಸಲು ಇಲಾಖೆಯ ಅಧಿಕಾರಿಗಳು ನಿರ್ಧರಿಸಿದ್ದು, ಜುಲೈ ಮೊದಲ ವಾರದಲ್ಲಿ ಜಿಲ್ಲಾ ಆಸ್ಪತ್ರೆಗಳಲ್ಲಿ ಅಂತರ ಚುಚ್ಚುಮದ್ದು ಲಭ್ಯವಾಗಲಿದೆ ಎಂದು ಮೂಲಗಳು ತಿಳಿಸಿವೆ.

50,000 ಅಂತರ ಚುಚ್ಚುಮದ್ದು

ಮೊದಲ ವರ್ಷ 50,000 ಅಂತರ ಚುಚ್ಚುಮದ್ದು ಪೂರೈಸುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದೆ. ಇಲಾಖೆ ಮೂಲಗಳ ಪ್ರಕಾರ ರಾಜ್ಯದಲ್ಲಿ 90 ಲಕ್ಷ ಮಹಿಳೆಯರು ಮಕ್ಕಳನ್ನು ಪಡೆಯಲು ಅರ್ಹರಾಗಿದ್ದಾರೆ.

ಇದರಲ್ಲಿ ಈಗಾಗಲೇ 40 ಲಕ್ಷ ಮಹಿಳೆಯರು ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದು, ಪ್ರತಿ ವರ್ಷ ಶಸ್ತ್ರ ಚಿಕಿತ್ಸೆಗೆ ಒಳಗಾಗುವವರ ಪ್ರಮಾಣ 3.5 ಲಕ್ಷವಾಗಿದೆ. ಕೆಲವು ಮಹಿಳೆಯರು ಕಾಪರ್-ಟಿ, ಮಾತ್ರೆ ಹಾಗೂ ಕಾಂಡೋಮ್ ಬಳಸುತ್ತಿದ್ದಾರೆ. ಈ ಎಲ್ಲ ಲೆಕ್ಕಾಚಾರದ ಪ್ರಕಾರ ಕೇವಲ ಶೇ 1ರಷ್ಟು ಮಹಿಳೆಯರಿಗೆ ಮಾತ್ರ ಅಂತರ ಚುಚ್ಚುಮದ್ದು ನೀಡಲು ಇಲಾಖೆ ನಿರ್ಧರಿಸಿದೆ. ಕೇವಲ ಶೇ 1ರಷ್ಟು ಮಹಿಳೆಯರಿಗೆ ಈ ಚುಚ್ಚುಮದ್ದು ಹಾಕಿದರೂ ಸರಾಸರಿ ವರ್ಷಕ್ಕೆ 50 ಲಕ್ಷ ಚುಚ್ಚುಮದ್ದುಗಳ ಅಗತ್ಯವಿದೆ.

English summary
Health and Family Welfare department has decided to introduce ‘Antara’ injection for preventing pregnancy although having sex without following any precautionary. Couple can prevent pregnancy up to 3 to 4 months if they have taken injection once.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X