ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹುಬ್ಬಳ್ಳಿ ಪ್ರೀಮಿಯರ ಲೀಗ್ ಕ್ರಿಕೆಟ್ ಟ್ರೋಫಿ ಅನಾವರಣ

By ಹುಬ್ಬಳ್ಳಿ ಪ್ರತಿನಿಧಿ
|
Google Oneindia Kannada News

ಹುಬ್ಬಳ್ಳಿ, ಡಿಸೆಂಬರ್, 21 : ಉತ್ತರ ಕರ್ನಾಟಕ ಭಾಗದಲ್ಲಿ ಪ್ರಸಿದ್ಧಿ ಹೊಂದಿರುವ ಎರಡನೇ ಆವೃತ್ತಿಯ ಹುಬ್ಬಳ್ಳಿ ಪ್ರೀಮಿಯರ ಲೀಗ್ ಕ್ರಿಕೆಟ್ ಟ್ರೋಫಿಯನ್ನು ನಗರದ ಡೆನಿಸನ್ಸ್ ಹೊಟೆಲ್ ನಲ್ಲಿ ಬಿಡುಗಡೆ ಮಾಡಲಾಯಿತು.

ರಾಜನಗರದ ಕೆಎಸ್ ಸಿಎ ಕ್ರೀಡಾಂಗಣದಲ್ಲಿ ಡಿಸೆಂಬರ್ 30 ರಿಂದ ಜನವರಿ 15 ರವರೆಗೆ ಈ ಪಂದ್ಯಾವಳಿ ನಡೆಯಲಿದ್ದು. ಒಟ್ಟು 34 ಪಂದ್ಯಗಳು ನಡೆಯಲಿವೆ. ಇನ್ನು ಈ ಟೂರ್ನಿಯಲ್ಲಿ 8 ತಂಡಗಳು ಭಾಗವಹಿಸಲಿವೆ.

ಹುಬ್ಬಳ್ಳಿ ಪ್ರೀಮಿಯರ ಲೀಗ್ ಪದ್ಯಾವಳಿಯಿಂದ ಉತ್ತರ ಕರ್ನಾಟಕ ಭಾಗದ ಕ್ರೀಡಾಪಟುಗಳಿಗೆ ಉತ್ತಮ ವೇದಿಕೆ ಕಲ್ಪಿಸಲು ಉದ್ದೇಶಿಸಲಾಗಿದೆ. ನ್ಯೂಸ್ ಟೈಮ್ ಚಾನೆಲ್ ನಲ್ಲಿ ಪಂದ್ಯಗಳು 30 ಜಿಲ್ಲೆಗಳಲ್ಲಿ ಪ್ರಸಾರವಾಗಲಿದೆ. 10 ಲಕ್ಷ ಕ್ಕೂ ಹೆಚ್ಚು ಜನರು ಪಂದ್ಯಾವಳಿಯನ್ನು ವೀಕ್ಷಿಸಲಿದ್ದಾರೆ.

The Hubli Premier League (HPL) 2016 trophy was unveiled at the hubblli

ಟ್ರೋಫಿ ಅನಾವರಣಗೊಳಿಸಿದ ಕೆಎಸ್ ಸಿಎ ಧಾರವಾಡ ವಲಯ ಅಧ್ಯಕ್ಷ ವೀರಣ್ಣ ಸವಡಿ ಮಾತನಾಡಿ, ಈ ಭಾಗದಲ್ಲಿ ಕ್ರಿಕೆಟ್ ಪ್ರತಿಭೆಗಳಿದ್ದರೂ ಅವರು ರಣಜಿ ಮತ್ತು ಕೆಪಿಎಲ್ ಪಂದ್ಯಾವಳಿಯಲ್ಲಿ ಆಡಲು ಅವಕಾಶವಿರುತ್ತಿರಲಿಲ್ಲ. ಈಗ ಎಚ್ ಪಿಎಲ್ ಪಂದ್ಯಾವಳಿಗಳಿಂದ ಆಟಗಾರರ ಪ್ರತಿಭೆಗಳಿಗೆ ವೇದಿಕೆ ದೊರೆತಂತಾಗುತ್ತದೆ ಎಂದರು.

ಬಾಬಾ ಭೂಸದ, ದಿನೇಶ ಪೈ, ಪಂಕಜ ಮುನಾವರ, ಶಿವಾನಂದ ಗುಂಜಾಳ ಸೇರಿದಂತೆ ಎಲ್ಲ ತಂಡಗಳ ಆಟಗಾರರು ಮತ್ತು ಮಾಲೀಕರು ಉಪಸ್ಥಿತರಿದ್ದರು.

ರಾಜನಗರ ಕ್ರೀಡಾಂಗಣ: ಕಳೆದ 5 ವರ್ಷಗಳಿಂದ ಹುಬ್ಬಳ್ಳಿ ರಾಜನಗರ ಕ್ರೀಡಾಂಗಣ ರಣಜಿ ಸೇರಿದಂತೆ ಕರ್ನಾಟಕ ಪ್ರೀಮಿಯರ್ ಲೀಗ್ ಪಂದ್ಯಗಳಿಗೆ ಸಾಕ್ಷಿಯಾಗಿದೆ.

ಈ ಮೈದಾನದಲ್ಲಿ ರಣಜಿ, ಕೆಪಿಎಲ್ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿ ಅಂತರಾಷ್ಟ್ರೀಯ ಕ್ರಿಕೆಟ್ ಗೆ ಆಯ್ಕೆಯಾಗಿರುವುದು ವಿಶೇಷ.

English summary
The Hubli Premier League (HPL) 2016 edition's trophy was unveiled at the hubblli denissons hotel on 20.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X