ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹುಬ್ಬಳ್ಳಿ; ಯುಪಿಎಸ್‌ಸಿ ಯಶಸ್ಸಿನ ಪಯಣ ಹಂಚಿಕೊಂಡ ತಹಸಿನ್ ಬಾನು

By ಹುಬ್ಬಳ್ಳಿ ಪ್ರತಿನಿಧಿ
|
Google Oneindia Kannada News

ಹುಬ್ಬಳ್ಳಿ, ಜೂನ್ 3: ಕೇಂದ್ರಿಯ ಲೋಕಸೇವಾ ಆಯೋಗ ನಡೆಸಿದ ನಾಗರೀಕ ಸೇವಾ ಪರೀಕ್ಷೆಯಲ್ಲಿ ಹುಬ್ಬಳ್ಳಿಯ ದೊಡ್ಡಮನಿ ಕಾಲೋನಿಯ ನಿವಾಸಿ, ನಿವೃತ್ತ ರೈಲ್ವೆ ಗಾರ್ಡ್‌ನ ಪುತ್ರಿ ತಹಸಿನ್ ಭಾನು ದವಡಿ 923 ಅಂಕ ಪಡೆದು 482ನೇ ರ್‍ಯಾಂಕ್‌ ಗಳಿಸಿ ಸಾಧನೆ ಮಾಡಿದ್ದಾರೆ.

ಹುಬ್ಬಳ್ಳಿಯ ಸೌಥ್‌ ವೆಸ್ಟರ್ನ್ ರೈಲ್ವೆ ಹ್ಯುಮನ್ ವೆಲ್‌ಫೇರ್ ಆರ್ಗನೈಸೇಷನ್‌ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ತಹಸಿನ್‌ ಬಾನು, ಪ್ರೌಢ ಶಿಕ್ಷಣವನ್ನು ಫಾತಿಮಾ ಶಾಲೆಯಲ್ಲಿ ಪಡೆದುಕೊಂಡಿದ್ದಾರೆ. ವಿದ್ಯಾನಗರದ ವಿದ್ಯಾನಿಕೇತನದಲ್ಲಿ ಪಿಯುಸಿ ಶಿಕ್ಷಣ, ಧಾರವಾಡದ ಅಗ್ರಿಕಲ್ಚರ್‌ ಯುನಿವರ್ಸಿಟಿಯಲ್ಲಿ ಪದವಿ ಶಿಕ್ಷಣ ಪಡೆದು, ಬಳಿಕ ಯುಪಿಎಸ್‌ಸಿ ಪರೀಕ್ಷೆ ಬರೆಯಬೇಕೆಂಬ ಹಂಬಲದಲ್ಲಿದ್ದಾಗ ಕರ್ನಾಟಕ ಸರ್ಕಾರ ವತಿಯಿಂದ ಯುಪಿಎಸ್‌ಸಿ ಪರೀಕ್ಷೆ ತರಬೇತಿಗೆ ಆಯ್ಕೆಯಾಗಿ ಪ್ರೋತ್ಸಾಹಧನದೊಂದಿಗೆ ತರಬೇತಿ ಪಡೆದಿದ್ದಾರೆ.

ಹುಬ್ಬಳ್ಳಿಯ ರೈಲ್ವೆ ಗಾರ್ಡ್ ಮಗಳಿಗೆ UPSC ಪರೀಕ್ಷೆಯಲ್ಲಿ 482ನೇ ರ್‍ಯಾಂಕ್ಹುಬ್ಬಳ್ಳಿಯ ರೈಲ್ವೆ ಗಾರ್ಡ್ ಮಗಳಿಗೆ UPSC ಪರೀಕ್ಷೆಯಲ್ಲಿ 482ನೇ ರ್‍ಯಾಂಕ್

ಪ್ರಥಮ ಬಾರಿಗೆ 2019 ಯುಪಿಎಸ್‌ಸಿ ಪರೀಕ್ಷೆ ಎದುರಿಸಿದ ಅವರು, ಎರಡನೇ ಪ್ರಯತ್ನದಲ್ಲಿ ಉತ್ತಮ ರ್‍ಯಾಂಕ್‌ ನೊಂದಿಗೆ ಯಶಸ್ಸು ಸಾಧಿಸಿದ್ದಾರೆ. 2022ರ ಲೋಕಸೇವಾ ಆಯೋಗವು ದೇಶಾದ್ಯಂತ 620 ಅಭ್ಯರ್ಥಿಗಳನ್ನು ಆಯ್ಕೆ ಮಾಡಿದೆ. ಅದರಲ್ಲಿ 482ನೇ ರ್‍ಯಾಂಕ್‌ ನೊಂದಿಗೆ ಕರ್ನಾಟಕದಲ್ಲಿ ಆಯ್ಕೆಯಾದವರಲ್ಲಿ ಏಕೈಕ ಮುಸ್ಲಿಂ ಅಭ್ಯರ್ಥಿಯಾಗಿದ್ದಾರೆ.

ಕೊರೋನಾ ವೇಳೆ ಜನರ ಸಂಕಷ್ಟ ಕಂಡು ವಿದೇಶಾಂಗ ಇಲಾಖೆ ಆಯ್ಕೆ ಮಾಡಿಕೊಂಡೆ: ರಾಜ್ಯದ ಐಎಎಸ್ ಟಾಪರ್ ಹೇಳಿಕೆಕೊರೋನಾ ವೇಳೆ ಜನರ ಸಂಕಷ್ಟ ಕಂಡು ವಿದೇಶಾಂಗ ಇಲಾಖೆ ಆಯ್ಕೆ ಮಾಡಿಕೊಂಡೆ: ರಾಜ್ಯದ ಐಎಎಸ್ ಟಾಪರ್ ಹೇಳಿಕೆ

ತಹಸಿನ್ ಬಾನು ದವಡಿ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ್ದು, ಅವರ ತಂದೆ ಖಾದರ್‌ ಭಾಷಾ ರೈಲ್ವೆ ಇಲಾಖೆಯಲ್ಲಿ ಗಾರ್ಡ್ ಆಗಿ 8 ವರ್ಷಗಳ ಹಿಂದೆ ನಿವೃತ್ತಿಯಾಗಿದ್ದಾರೆ. ತಾಯಿ ಹಸೀನಾ ಬೇಗಂ ಗೃಹಿಣಿ. ಇಂದು ತಹಸಿನ್ ಭಾನು ದವಡಿ ಯುಪಿಎಸ್‌ಸಿಯಲ್ಲಿ ಆಯ್ಕೆಯಾಗಿ ಮೊದಲ ಬಾರಿಗೆ ತವರೂರಿಗೆ ಆಗಮಿಸಿದರು. ಈ ವೇಳೆ ಕುಟುಂಬಸ್ಥರಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಪಾಲಕರು ತಮ್ಮ ಮಗಳ ಸಾಧನೆ ಮೆಚ್ಚಿ ಸಿಹಿ ತಿನ್ನಿಸಿ ಸಂಭ್ರಮಿಸಿದರು.

ಕಷ್ಟದಲ್ಲೂ ಓದಿಗೆ ಪೋಷಕರ ನೆರವು

"ಮಧ್ಯಮ ವರ್ಗದ ಕುಟುಂಬವಾದ್ದರಿಂದ ಕಷ್ಟದ ಸಂದರ್ಭದಲ್ಲಿಯೂ ನನ್ನ ಪೋಷಕರು ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿದ ತುಂಬಾ ಹಣ ಖರ್ಚು ಮಾಡಿದ್ದಾರೆ. ನನ್ನ ಹೆತ್ತವರೇ ನನಗೆ ಪ್ರೇರಣೆ. ವೈದ್ಯಕೀಯ ವೃತ್ತಿ ಪಡೆಯಬೇಕೆಂಬ ಗುರಿಯಿತ್ತು. ಸಾಧ್ಯವಾಗದ ಕಾರಣ ಬಿಎಸ್‌ಸಿ ಅಗ್ರಿಕಲ್ಚರ್‌ನಲ್ಲಿ ಪದವಿ ಪಡೆದುಕೊಂಡೆ. ಪ್ರತಿನಿತ್ಯ ಸತತ ಪರೀಕ್ಷಾ ಪೂರ್ವತಯಾರಿ ನಡೆಸುತ್ತಿದ್ದೆ. ಕೇವಲ ಓದು ಮಾತ್ರವಲ್ಲ, ಅದರ ಜೊತೆಗೆ ಸಾಮಾಜಿಕ ಜ್ಞಾನ ನನಗೆ ಸಹಕಾರಿಯಾಯಿತು" ಎಂದು ತಹಸಿನ್ ಬಾನು ದವಡಿ ತಿಳಿಸಿದರು.

"ಐಎಎಸ್‌ ಅಧಿಕಾರಿಯಾಗಬೇಕೆಂದುಕೊಂಡಿದ್ದೆ, ರ್‍ಯಾಂಕ್‌ ಕಡಿಮೆ ಬಂದಿರುವುದರಿಂದ ಈ ಬಾರಿ ಅದು ಸಾಧ್ಯವಿಲ್ಲ, ಮುಂದಿನ ಬಾರಿ ಪ್ರಯತ್ನಿಸುತ್ತೇನೆ. ಶೈಕ್ಷಣಿಕ ವಿಭಾಗದಲ್ಲಿ ಕೆಲಸ ಮಾಡುವ ಹಂಬಲವಿದೆ" ಎಂದು ತಿಳಿಸಿದರು.

ಒಡಹುಟ್ಟಿದವರೇ ಪ್ರೇರಣೆ

ಒಡಹುಟ್ಟಿದವರೇ ಪ್ರೇರಣೆ

"ನನಗೆ ನನ್ನ ಕುಟುಂದವರ ಸ್ಫೂರ್ತಿ, ನನ್ನ ಅಕ್ಕಂದಿರು ಪದವಿ ಮತ್ತು ಸ್ನಾತಕೋತ್ತರ ಪದವಿ ಪಡೆದುಕೊಂಡಿದ್ದಾರೆ. ಒಬ್ಬರು ಟೀಚರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ನಮ್ಮ ಅಣ್ಣ ಗೋಗ್ರೇಜ್‌ನಲ್ಲಿ ಇಂಜಿನಿಯರ್‌ ಆಗಿದ್ದಾರೆ, ನಾನು ಕೊನೆಯ ಮಗಳು. ಮನೆಯವರಿಂದ ಸಂಪೂರ್ಣ ಸ್ವಾತಂತ್ರ್ಯ ಮತ್ತು ಬೆಂಬಲ ಸಿಕ್ಕಿದೆ ಎಂದು" ತಹಸಿನ್ ಬಾನು ದವಡಿ ಕುಟುಂಬಸ್ಥರ ಪ್ರೋತ್ಸಾಹದ ಬಗ್ಗೆ ವಿವರಿಸಿದರು.

ಸಿಲಬಸ್‌ ಪ್ರಕಾರ ಓದಬೇಕು

ಸಿಲಬಸ್‌ ಪ್ರಕಾರ ಓದಬೇಕು

"ಅಲ್ಪಸಂಖ್ಯಾತರ ಸಚಿವಾಲಯದ ಭಾರತದಾದ್ಯಂತ 100 ಮಂದಿಯನ್ನು ಆಯ್ಕೆ ಮಾಡಿ ಯುಪಿಎಸ್‌ಸಿಗೆ ಕೋಚಿಂಗ್‌ ನೀಡುತ್ತಾರೆ. ನಾನು ಆ ಪರೀಕ್ಷೆಯನ್ನು ತೆಗೆದುಕೊಂಡು ಉತ್ತೀರ್ಣವಾಗಿದ್ದೆ. ಮುಂಬೈನಲ್ಲಿ ಕೋಚಿಂಗ್‌ ಆಯ್ಕೆ ಮಾಡಿಕೊಂಡಿದ್ದೆ. ಯುಪಿಎಸ್‌ಸಿ ಹೊರಗಿನಿಂದ ನೋಡಲು ತುಂಬಾ ಕಷ್ಟ ಎನಿಸುತ್ತದೆ. ಸಾಕಷ್ಟು ಓದಬೇಕು ಎಂಬ ಭಾವನೆಯಿದೆ. ಆದರೆ ಸಾಮಾನ್ಯ ಜ್ಞಾನದ ಬಗ್ಗೆ ಅರಿವು ಹಾಗೂ ಯುಒಇಎಸ್‌ಸಿ ನೀಡುವ ಸಿಲಬಸ್‌ ಪ್ರಕಾರ ಓದಿದರೆ ಕ್ಲಿಯರ್ ಮಾಡಬಹುದು. ಆದರೆ ಇದು ಆತ್ಮವಿಶ್ವಾಸ ಮತ್ತು ಮನಸ್ಥಿತಿಯ ಮೇಲೆ ಅವಲಂಭಿತವಾಗಿರುತ್ತದೆ, ಮನಸ್ಥಿತಿ ಸರಿಯಾಗಿದ್ದರೆ ಎಲ್ಲವನ್ನು ಸಾಧಿಸಬಹುದು" ಎಂದು ತಹಸಿನ್ ಬಾನು ದವಡಿ ತಿಳಿಸಿದರು.

ಯುಪಿಎಸ್‌ಸಿ ಬಗ್ಗೆ ಜಾಗೃತಿ ಕಡಿಮೆ

ಯುಪಿಎಸ್‌ಸಿ ಬಗ್ಗೆ ಜಾಗೃತಿ ಕಡಿಮೆ

ಯುಪಿಎಸ್‌ಸಿ ಪರೀಕ್ಷೆಯಲ್ಲಿ ಪ್ರತಿವರ್ಷ ಉತ್ತೀರ್ಣರಾಗುವವರ ಮುಸ್ಲಿಂ ಸಮುದಾಯದವರ ಸಂಖ್ಯೆ ಕಡಿಮೆ ಏಕೆ ಎಂಬ ಪ್ರಶ್ನೆಗೆ ಉತ್ತರಿಸಿದ ತಹಸಿನ್, "ದೇಶದ ಜನಸಂಖ್ಯೆಗೆ ಹೋಲಿಸಿದರೆ ಈ ಬಾರಿ ಆಯ್ಕೆಯಾಗಿರುವ ಪ್ರಮಾಣ ತುಂಬಾ ಕಡಿಮೆ. ದೇಶದಲ್ಲಿ ಶೇ.14 ರಷ್ಟು ಮುಸ್ಲಿಂಮರಿದ್ದಾರೆ. ಆದರೆ ಯುಪಿಎಸ್‌ಸಿಯಲ್ಲಿ ಕೇವಲ 23 ಮಂದಿ ಆಯ್ಕೆಯಾಗಿದ್ದಾರೆ. ಈ ಬಾರಿ ಕೇವಲ ಶೇ. 3 ರಷ್ಟು ಮಂದಿ ಮಾತ್ರ ಮುಸ್ಲಿಂ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಇದಕ್ಕೆ ಜಾಗೃತಿಯ ಕೊರತೆ ಕಾರಣ. ಯುಪಿಎಸ್‌ಸಿ ಎಂದರೆ ಏನು ಅಂತಾ ಕೆಲವರಿಗೆ ಗೊತ್ತಿಲ್ಲ, ಕೆಲವರು ಇದು ನಮ್ಮಿಂದ ಸಾಧ್ಯವಿಲ್ಲ ಎಂದೇ ಭಾವಿಸಿದ್ದಾರೆ" ಎಂದು ತಹಸಿನ್ ಬಾನು ದವಡಿ ಹೇಳಿದರು.

English summary
Here is the Union public service commission (UPSC) success story of Thahseen Banu from Hubballi: He secured All India Rank 482. Know more:
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X