ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹುಬ್ಬಳ್ಳಿ; ಚರಂಡಿ ನೀರಿನ ನಡುವೆಯೇ ದೇವರ ದರ್ಶನ ಪಡೆದ ಭಕ್ತರು

By ಹುಬ್ಬಳ್ಳಿ ಪ್ರತಿನಿಧಿ
|
Google Oneindia Kannada News

ಹುಬ್ಬಳ್ಳಿ, ಅಕ್ಟೋಬರ್ 9: ನಿನ್ನೆ ರಾತ್ರಿ‌ ಸುರಿದ ಮಳೆ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಭಾರಿ ಅವಾಂತರವನ್ನೇ ಸೃಷ್ಟಿ ಮಾಡಿದೆ. ನಗರದ ತುಳಜಾ ಭವಾನಿ ದೇವಸ್ಥಾನದಲ್ಲಿ ಮಳೆಯಿಂದ ಚರಂಡಿ ನೀರು ನುಗ್ಗಿ, ಕಸ ತುಂಬಿಕೊಂಡು ಭಕ್ತರು ಪರದಾಡುವ ಸ್ಥಿತಿ ನಿರ್ಮಾಣವಾಯಿತು.

ಭಾರಿ ಮಳೆಗೆ ಚನ್ನಪಟ್ಟಣದ ಹಲವೆಡೆ ಜಲಾವೃತ; ಯಾರ ಆದೇಶಕ್ಕೂ ಜಗ್ಗದ ಅಧಿಕಾರಿಗಳುಭಾರಿ ಮಳೆಗೆ ಚನ್ನಪಟ್ಟಣದ ಹಲವೆಡೆ ಜಲಾವೃತ; ಯಾರ ಆದೇಶಕ್ಕೂ ಜಗ್ಗದ ಅಧಿಕಾರಿಗಳು

ವಿಜಯ ದಶಮಿ ಹಾಗೂ ಬನ್ನಿ‌ ಹಬ್ಬದಂದು ಸಾವಿರಾರು ಭಕ್ತರು ದೇವಸ್ಥಾನಕ್ಕೆ ಬಂದು ದೇವರ ದರ್ಶನ ಪಡೆಯುತ್ತಾರೆ. ಆದರೆ ಚರಂಡಿ ‌ನೀರು ದೇವಸ್ಥಾನಕ್ಕೆ‌ ನುಗ್ಗಿದ್ದರಿಂದ ದೇವಸ್ಥಾನದ ಒಳಗೆ ಬರಲು ಪರದಾಡಿದರು. ಈ ಮಧ್ಯೆಯೂ ಮೊಳಕಾಲಿನವರೆಗಿನ ಆ ಚರಂಡಿ ನೀರಿನಲ್ಲಿಯೇ ನಿಂತು ದೇವರ ದರ್ಶನ ಪಡೆದುಕೊಂಡರು.‌

Temple In Hubballi Filled With Drain Water From Rain

ಮಹಾನಗರ ಪಾಲಿಕೆಯವರು ಸರಿಯಾಗಿ ಚರಂಡಿಗಳನ್ನು ಸ್ವಚ್ಛಗೊಳಿಸದಿರುವುದೇ ಪ್ಲಾಸ್ಟಿಕ್ ಹಾಗೂ ಕಸ ಕಟ್ಟಿಕೊಂಡು ಒಳಚರಂಡಿ‌ ನೀರು ದೇವಸ್ಥಾನಕ್ಕೆ ನುಗ್ಗಲು ಕಾರಣ. ಇದಕ್ಕೆ ಮಹಾನಗರ ಪಾಲಿಕೆ‌ ನಿರ್ಲಕ್ಷ್ಯವೇ ಈ ಅವಾಂತರಕ್ಕೆ ಕಾರಣ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

English summary
The rain that poured in last night has created a huge disturbance in the city of Hubballi. The city's Tulja Bhawani Temple filled with drainwater and debris.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X