ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಮ್ಮ ಬೇಕು ಎಂದು ಹಟ ಮಾಡಿದ್ದಕ್ಕೆ ಬಾಲಕನಿಗೆ ಬರೆ ಎಳೆದ ಆಯಾ, ಶಿಕ್ಷಕ

By ಹುಬ್ಬಳ್ಳಿ ಪ್ರತಿನಿಧಿ
|
Google Oneindia Kannada News

ಹುಬ್ಬಳ್ಳಿ, ಆಗಸ್ಟ್.30:ಅಮ್ಮ ಬೇಕು...ಎಂದು ಹಟ ಹಿಡಿದ ನಾಲ್ಕು ವರ್ಷದ ಬಾಲಕನ ಬೆನ್ನಿಗೆ ನರ್ಸರಿ ಶಾಲೆಯ ಶಿಕ್ಷಕ ಹಾಗೂ ಆಯಾ ಬರೆ ಎಳೆದ ಅಮಾನವೀಯ ಘಟನೆ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ನಡೆದಿದೆ.

ನಗರದ ಹೆಗ್ಗೇರಿ ಪ್ರದೇಶದ ಬಾಲಾಜಿ ನರ್ಸರಿ ಶಾಲೆಯಲ್ಲಿ ಈ ಘಟನೆ ನಡೆದಿದ್ದು, "ಅಮ್ಮ ಬೇಕು ಎಂದು ಹಟ ಮಾಡಿದ್ದಕ್ಕೆ ಶಾಲೆಯ ಶಿಕ್ಷಕ ಹಾಗೂ ಆಯಾ ನನ್ನ ಮಗನ ಬೆನ್ನ ಮೇಲೆ ಬರೆ ಎಳೆದಿದ್ದಾರೆ" ಎಂದು ಬಾಲಕನ ತಾಯಿ ಕಾವೇರಿ ಆರೋಪಿಸಿದ್ದಾರೆ.

ಇವರೆಂಥಾ ಶಿಕ್ಷಕರು? ಹಣ ಕದ್ದರೆಂದು ರಾಘಾಪುರದಲ್ಲಿ ವಿದ್ಯಾರ್ಥಿಗಳ ಮೇಲೆ ಹಲ್ಲೆಇವರೆಂಥಾ ಶಿಕ್ಷಕರು? ಹಣ ಕದ್ದರೆಂದು ರಾಘಾಪುರದಲ್ಲಿ ವಿದ್ಯಾರ್ಥಿಗಳ ಮೇಲೆ ಹಲ್ಲೆ

ಹೆಗ್ಗೇರಿಯಲ್ಲಿ ಕಳೆದ ಮೂರು ವರ್ಷಗಳ ಹಿಂದೆಯಷ್ಟೇ ಸತೀಶ ನಾಯ್ಡು ಎಂಬುವವರು ಈ ನರ್ಸರಿ ಶಾಲೆಯನ್ನು ಆರಂಭಿಸಿದ್ದು, 35 ಕ್ಕೂ ಹೆಚ್ಚು ಮಕ್ಕಳು ಶಾಲೆಯಲ್ಲಿ ಕಲಿಯುತ್ತಿದ್ದಾರೆ. ಅಲ್ಲದೆ ಕಾವೇರಿ ಎಂಬ ಮಹಿಳೆ ಈಗಷ್ಟೇ ಒಂದು ವಾರದ ಹಿಂದೆ ತನ್ನ ಮಗನನ್ನು ಶಾಲೆಗೆ ಸೇರಿಸಿದ್ದಾರೆ.

Teacher beaten a four-year-old boy in Hubballi

ಆದರೆ ಶಾಲೆಗೆ ಪ್ರತಿನಿತ್ಯ ಆಗಮಿಸುವ ಬಾಲಕ ಪ್ರತಿದಿನ ಅಮ್ಮ ಬೇಕು... ಅಂತ ಹಟ ಮಾಡಿದ್ದನಂತೆ. ಈ ಹಿನ್ನೆಲೆಯಲ್ಲಿ ಕುಪಿತಗೊಂಡ ಶಾಲೆಯ ಆಯಾ ಬಾಲಕನ ಬೆನ್ನಿಗೆ ಬರೆ ಎಳೆದು ಗಾಯಗೊಳಿಸಿದ್ದಾಳೆ ಎಂದು ಬಾಲಕನ ತಾಯಿ ಆರೋಪಿಸಿದ್ದಾಳೆ.

 ಮಕ್ಕಳು ಅಳ್ತಾರೆ ಅಂತ ಬಾಯಿಗೆ ಖಾರದಪುಡಿ ಹಾಕಿದ ಅಂಗನವಾಡಿ ಶಿಕ್ಷಕಿ ಮಕ್ಕಳು ಅಳ್ತಾರೆ ಅಂತ ಬಾಯಿಗೆ ಖಾರದಪುಡಿ ಹಾಕಿದ ಅಂಗನವಾಡಿ ಶಿಕ್ಷಕಿ

ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನ್ನ ಮೇಲೆ ಬಂದಿರುವ ಆರೋಪವನ್ನು ಶಿಕ್ಷಕ ಸತೀಶ ನಾಯ್ಡು ಹಾಗೂ ಆಯಾ ಅಲ್ಲಗಳೆದಿದ್ದು, ಆ ರೀತಿ ನಡೆದುಕೊಂಡಿಲ್ಲ ಎಂದಿದ್ದಾರೆ. ಆದರೆ ಈ ಕುರಿತಂತೆ ಬಾಲಕನ ತಾಯಿ ಕಾವೇರಿ ಶಿಕ್ಷಕ ಸತೀಶ ಹಾಗೂ ಆಯಾ ಮೇಲೆ ಹಳೇಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

 ಬ್ಲೇಡ್‌ನಿಂದ ಬಾಲಕನ ಕತ್ತುಕೊಯ್ದ ಅಂಗನವಾಡಿ ಶಿಕ್ಷಕಿ ಬ್ಲೇಡ್‌ನಿಂದ ಬಾಲಕನ ಕತ್ತುಕೊಯ್ದ ಅಂಗನವಾಡಿ ಶಿಕ್ಷಕಿ

ಪ್ರಕರಣ ದಾಖಲಿಸಿಕೊಂಡಿರುವ ಹಳೇ ಹುಬ್ಬಳ್ಳಿ ಠಾಣೆಯ ಪೊಲೀಸರು ಈ ಕುರಿತು ತನಿಖೆ ನಡೆಸುತ್ತಿದ್ದಾರೆ.

English summary
Teacher beaten a four-year-old boy in Hubballi. Incident took place at Balaji Nursery School in the Heggeri area. Boy's mother Kaveri complaint to against teacher at Hale hubli police station.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X