ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹುಬ್ಬಳ್ಳಿಯ ನೈಋತ್ಯ ರೈಲ್ವೆ ಕ್ಯಾರೇಜ್ ನಲ್ಲಿ ರೆಡಿಯಾಗುತ್ತಿದೆ ಮಾಸ್ಕ್, ನಿಲುವಂಗಿ

By ಹುಬ್ಬಳ್ಳಿ ಪ್ರತಿನಿಧಿ
|
Google Oneindia Kannada News

ಹುಬ್ಬಳ್ಳಿ, ಮಾರ್ಚ್ 27: ಕೊರೊನಾ ವೈರಸ್ ದಿನದಿಂದ ದಿನಕ್ಕೆ ವ್ಯಾಪಿಸುತ್ತಿದ್ದು, ಮುಂಜಾಗ್ರತಾ ಕ್ರಮವಾಗಿ ನೈಋತ್ಯ ರೈಲ್ವೇ ವಲಯ ಸೇರಿದಂತೆ ದೇಶಾದ್ಯಂತ ರೈಲ್ವೇ ಸೇವೆ ಸ್ಥಗಿತಗೊಂಡಿದೆ. ಇದೀಗ ನೈಋತ್ಯ ರೈಲ್ವೇ ವಲಯದಿಂದ ಕ್ಯಾರೇಜ್ ರಿಪೇರಿ ವರ್ಕ್‌ಶಾಪ್ ನಲ್ಲಿ ಮಾಸ್ಕ್ ಮತ್ತು ಸುರಕ್ಷಿತ ನಿಲುವಂಗಿಗಳನ್ನು ತಯಾರಿಸುವ ಕೆಲಸ ನಡೆದಿದೆ.

ಕೊವಿಡ್-19 ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಪ್ರಸ್ತುತ ಸವಾಲಿನ ಸಂದರ್ಭವನ್ನು ನಿಭಾಯಿಸುವ ಸಲುವಾಗಿ, ಇಲ್ಲಿ ವೈದ್ಯಕೀಯ ವಿಭಾಗ, ವೈದ್ಯರು ಮತ್ತು ಅರೆವೈದ್ಯಕೀಯ ಸಿಬ್ಬಂದಿಗಳ ಬಳಕೆಗೆ ಫೇಸ್ ಮಾಸ್ಕ್ ತಯಾರಿಸಲಾಗುತ್ತಿದೆ.

Masks Are Preparing In Hubballi Railway Carriage

ಸಾಮಾನ್ಯವಾಗಿ ಕಾರ್ಯಾಗಾರದ ವಿಭಾಗದಲ್ಲಿ ಬೆರ್ತ್ ಕವರ್‌ ಹೊಲಿಯುವುದು, ರೈಲು ಬೋಗಿಗಳ ಪರದೆ ತಯಾರಿಕೆ ಇತ್ಯಾದಿಗಳ ಕೆಲಸಕ್ಕೆ ಬಳಸಲಾಗುತ್ತಿದೆ. ಇದೀಗ ಬ್ಯಾಂಡ್‌ಗಳೊಂದಿಗೆ ಹತ್ತಿ ಬಟ್ಟೆಯನ್ನು ಬಳಸಿ ಮುಖವಾಡಗಳನ್ನು ತಯಾರಿಸಲಾಗುತ್ತಿದೆ ಮತ್ತು ಮರುಬಳಕೆ ಮಾಡಬಹುದಾದ ಮಾಸ್ಕ ಗಳ ತಯಾರಿಕೆ ನಡೆದಿದೆ. ಇಂದಿನ ಬಿಕ್ಕಟ್ಟನ್ನು ಎದುರಿಸಲು ಡೀಸೆಲ್ ಲೊಕೊ ಶೆಡ್ ಮತ್ತು ಹುಬ್ಬಳ್ಳಿಯ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸೌತ್ ವೆಸ್ಟರ್ನ್ ರೈಲ್ವೆ ಜನರಲ್ ಮ್ಯಾನೇಜರ್ ಎ.ಕೆ.ಸಿಂಗ್ ಮಾಹಿತಿ ನೀಡಿದ್ದಾರೆ.

Masks Are Preparing In Hubballi Railway Carriage
English summary
Masks and suits which are using for covid 19 are preparing in hubballi railway carriage
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X