ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರೈಲಿನ ಕಥೆ ಹೇಳಲಿದೆ ಹುಬ್ಬಳ್ಳಿಯ ಪಾರಂಪರಿಕ ರೈಲು ವಸ್ತು ಸಂಗ್ರಹಾಲಯ

By ಹುಬ್ಬಳ್ಳಿ ಪ್ರತಿನಿಧಿ
|
Google Oneindia Kannada News

ಹುಬ್ಬಳ್ಳಿ, ಜುಲೈ 27: ನೈಋತ್ಯ ರೈಲ್ವೆ ವಲಯವು ಹುಬ್ಬಳ್ಳಿಯಲ್ಲಿ ನಿರ್ಮಿಸಿರುವ "ಹುಬ್ಬಳ್ಳಿ ರೈಲ್ವೆ ಮ್ಯೂಸಿಯಂ" ಇದೀಗ ರೈಲಿನ ಇತಿಹಾಸವನ್ನು ಸಾರಿ ಹೇಳಲು ಸಜ್ಜಾಗಿದೆ. ರೈಲು ವಸ್ತು ಸಂಗ್ರಹಾಲಯದ ನಿರ್ಮಾಣದ ಕಾರ್ಯ ಮುಗಿದಿದ್ದು, ಕೊರೊನಾ ವೈರಸ್ ಕಾರಣದಿಂದಾಗಿ ಮ್ಯೂಸಿಯಂ ತೆರೆಯುವ ದಿನವಿನ್ನೂ ನಿಗದಿಯಾಗಿಲ್ಲ.

Recommended Video

Karnataka Government ಒಂದು ವರ್ಷದ ಸಾಧನೆ ಕುರಿತ ಪುಸ್ತಕ ಬಿಡಗಡೆ | Oneindia Kannada

ನೈಋತ್ಯ ರೈಲ್ವೆ ವಲಯ (ಎಸ್‌ಡಬ್ಲುಆರ್) ಪಾರಂಪರಿಕ ರೈಲು ವಸ್ತು ಸಂಗ್ರಹಾಲಯವನ್ನು ಹುಬ್ಬಳ್ಳಿ ರೈಲ್ವೆ ನಿಲ್ದಾಣದ ಎರಡನೇ ಪ್ರವೇಶದ ಪಕ್ಕದಲ್ಲಿಯೇ ಸ್ಥಾಪಿಸಿದೆ. ಎರಡು ಹಳೆಯ ಕಟ್ಟಡಗಳಿದ್ದ ಜಾಗದಲ್ಲೇ ಈ ವಸ್ತುಸಂಗ್ರಹಾಲಯ ನಿರ್ಮಿತವಾಗಿದೆ.

"ವಿಶ್ವದ ಅತಿ ಉದ್ದದ ರೈಲ್ವೆ ಫ್ಲಾಟ್ ಫಾರ್ಮ್" ಆಗಲಿದೆ ಹುಬ್ಬಳ್ಳಿ ರೈಲ್ವೆಸ್ಟೇಷನ್

ರೈಲಿನ ಇತಿಹಾಸವನ್ನು ವಿವಿಧ ರೂಪಗಳಲ್ಲಿ ಈ ವಸ್ತು ಸಂಗ್ರಹಾಲಯ ತೆರೆದಿಟ್ಟಿದೆ. ರೈಲು ಆರಂಭವಾದಾಗಿನಿಂದ ಇಲ್ಲಿವರೆಗೂ ಆಗಿರುವ ಬದಲಾವಣೆಗಳು, ತಂತ್ರಜ್ಞಾನದ ಜೊತೆ ರೈಲ್ವೆ ವಿಭಾಗವೂ ಬೆಳೆದು ಬಂದ ಬಗೆ, ವಿವಿಧ ರೀತಿಯ ರೈಲುಗಳು, ಬೋಗಿಗಳು, ಹಳೆಯ ಕಾಲದ ಸಿಗ್ನಲ್‌ಗಳು, ವಿದ್ಯುತ್‌ ಉಪಕರಣಗಳು, ಪ್ರಸ್ತುತ ರೈಲ್ವೆ ಮಾದರಿಗಳು, ಹೊಸ ತಂತ್ರಜ್ಞಾನಗಳ, ಹಂತ ಹಂತದ ಬೆಳವಣಿಗೆಗಳು... ಇವೆಲ್ಲವೂ ಮ್ಯೂಸಿಯಂನಲ್ಲಿವೆ. ರೈಲಿನ ಹಿನ್ನೆಲೆಯನ್ನು ತಿಳಿಸುವ ಪುಸ್ತಕ, ಛಾಯಾಚಿತ್ರಗಳೂ ಇವೆ.

SWR to Open the Newly Built Hubballi Railway Museum soon

ಪ್ರಸ್ತುತ ದೇಶದಲ್ಲಿ ಭಾರತೀಯ ರೈಲ್ವೆಯ 11 ವಸ್ತು ಸಂಗ್ರಹಾಲಯಗಳಿದ್ದು, ಹುಬ್ಬಳ್ಳಿಯ ಈ ವಸ್ತು ಸಂಗ್ರಹಾಲಯ ದೇಶದ 12ನೇ ಹಾಗೂ ಕರ್ನಾಟಕದ ಎರಡನೇ ರೈಲ್ವೆ ಮ್ಯೂಸಿಯಂ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಮೈಸೂರು ರೈಲ್ವೆ ಮ್ಯೂಸಿಯಂ ಮೊದಲ ಮ್ಯೂಸಿಯಂ ಆಗಿದೆ.

English summary
South Western Railway will soon open the ‘Hubballi Rail Museum’ which is built near second entrance of the hubballi railway station,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X