ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹಬ್ಬದ ವಿಶೇಷ, ಪ್ಯಾಸೆಂಜರ್ ರೈಲುಗಳು ಜೂನ್ ತನಕ ವಿಸ್ತರಣೆ

|
Google Oneindia Kannada News

ಹುಬ್ಬಳ್ಳಿ, ಮಾರ್ಚ್ 22: ನೈಋತ್ಯ ರೈಲ್ವೆ ಸದ್ಯ ಸಂಚಾರ ನಡೆಸುತ್ತಿರುವ ಹಬ್ಬದ ವಿಶೇಷ ರೈಲು ಮತ್ತು ಪ್ಯಾಸೆಂಜರ್ ವಿಶೇಷ ರೈಲುಗಳ ವೇಳಾಪಟ್ಟಿಯನ್ನು ವಿಸ್ತರಣೆ ಮಾಡಿದೆ. ಮಾರ್ಚ್ ಅಂತ್ಯಕ್ಕೆ ರೈಲುಗಳ ಸಂಚಾರ ಕೊನೆಗೊಳ್ಳಬೇಕಿತ್ತು.

ಹಬ್ಬದ ವಿಶೇಷ ಎಕ್ಸ್‌ಪ್ರೆಸ್ ರೈಲು ಮತ್ತು ಪ್ಯಾಸೆಂಜರ್ ರೈಲುಗಳ ಸಂಚಾರವನ್ನು ಜೂನ್ ತನಕ ವಿಸ್ತರಣೆ ಮಾಡಲಾಗಿದೆ. ಯಾವ-ಯಾವ ರೈಲುಗಳ ಸೇವೆ ವಿಸ್ತರಣೆ ಮಾಡಲಾಗಿದೆ ಎಂಬ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.

ಶೀಘ್ರದಲ್ಲೇ ದಾವಣಗೆರೆ-ಹುಬ್ಬಳ್ಳಿ ಡೆಮು ರೈಲು ಸಂಚಾರ ಶೀಘ್ರದಲ್ಲೇ ದಾವಣಗೆರೆ-ಹುಬ್ಬಳ್ಳಿ ಡೆಮು ರೈಲು ಸಂಚಾರ

ಹುಬ್ಬಳ್ಳಿ-ಸಿಕಂದರಾಬಾದ್ ರೈಲು ಮಾರ್ಚ್ 31 ರಿಂದ ಜೂನ್ 30ರ ತನಕ ಸಂಚಾರ ನಡೆಸಲಿದೆ. ಹುಬ್ಬಳ್ಳಿ-ವಾರಣಾಸಿ ರೈಲು ಮಾರ್ಚ್ 26ರಿಂದ ಜೂನ್ 25ರ ತನಕ ಸಂಚಾರ ನಡೆಸಲಿದೆ. ಹುಬ್ಬಳ್ಳಿ-ದಾದರ್ ರೈಲು ಸೇವೆಯನ್ನು ಮಾರ್ಚ್ 31ರಿಂದ ಜೂನ್ 30ರ ತನಕ ವಿಸ್ತರಣೆ ಮಾಡಲಾಗಿದೆ.

ಬೆಂಗಳೂರಿನಿಂದ ಹೊರಟ ಐಷಾರಾಮಿ ಗೋಲ್ಡನ್ ಚಾರಿಯಟ್ ರೈಲು ಬೆಂಗಳೂರಿನಿಂದ ಹೊರಟ ಐಷಾರಾಮಿ ಗೋಲ್ಡನ್ ಚಾರಿಯಟ್ ರೈಲು

SWR Extended Festival Special And Special Express Train

ಕೆಎಸ್ಆರ್ ಬೆಂಗಳೂರು-ಧಾರವಾಡ ರೈಲು ಮಾರ್ಚ್ 30ರಿಂದ ಜೂನ್ 30ರ ತನಕ ಓಡಲಿದೆ. ಮೈಸೂರು-ಬಾಗಲಕೋಟೆ ರೈಲು ಮಾರ್ಚ್ 30ರಿಂದ ಜೂನ್ 30ರ ತನಕ ಸಂಚಾರ ನಡೆಸಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ದಿ. ಸುರೇಶ್ ಅಂಗಡಿ ಕನಸಿನ ಯೋಜನೆ ಶೀಘ್ರವೇ ಪೂರ್ಣ ದಿ. ಸುರೇಶ್ ಅಂಗಡಿ ಕನಸಿನ ಯೋಜನೆ ಶೀಘ್ರವೇ ಪೂರ್ಣ

ಮಾರ್ಚ್ 30ರಿಂದ ಜೂನ್ 30ರ ತನಕ ಯಶವಂತಪುರ-ಹೊಸಪೇಟೆ ರೈಲು ಓಡಲಿದೆ. ಹುಬ್ಬಳ್ಳಿ-ಬಳ್ಳಾರಿ ರೈಲು ಮಾರ್ಚ್ 31 ರಿಂದ ಜೂನ್ 30ರ ತನಕ ಸಂಚಾರ ನಡೆಸಲಿದೆ. ಹುಬ್ಬಳ್ಳಿ-ಸೊಲ್ಹಾಪುರ ರೈಲು ಮಾರ್ಚ್ 30 ರಿಂದ ಜೂನ್ 30ರ ತನಕ ಸಂಚಾರ ನಡೆಸಲಿದೆ.

Recommended Video

ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ದಿನಕ್ಕೊಂದು ಟ್ವಿಸ್ಟ್-ಶಂಕಿತರ ಪತ್ತೆಗೆ ಸೈಬರ್ ಎಕ್ಸ್ ಪರ್ಟ್ಸ್ ಮೊರೆ ಹೋದ ಎಸ್ಐಟಿ | Oneindia Kannada

ಧಾರವಾಡ-ಕೆಎಸ್ಆರ್ ಬೆಂಗಳೂರು ರೈಲು ಏಪ್ರಿಲ್ 1 ರಿಂದ ಜುಲೈ 1ರ ತನಕ ಸಂಚರಿಸಲಿದೆ. ಬಾಗಲಕೋಟೆ-ಮೈಸೂರು, ಹೊಸಪೇಟೆ-ಯಶವಂತಪುರ, ಧಾರವಾಡ-ಮೈಸೂರು ರೈಲು ಮಾರ್ಚ್ 31ರಿಂದ ಜುಲೈ 1ರ ತನಕ ಸಂಚಾರ ನಡೆಸಲಿವೆ.

English summary
South western railway extended the festival special and special express train from March end to July 2021.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X