ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜೀವಂತವಿದ್ದಾಗಲೇ ಕೊಳೆಯುತ್ತಿದೆ ದೇಹ; ಹುಬ್ಬಳ್ಳಿ ಯುವಕನಿಗೆ ವಿಚಿತ್ರ ಕಾಯಿಲೆ

By ಹುಬ್ಬಳ್ಳಿ ಪ್ರತಿನಿಧಿ
|
Google Oneindia Kannada News

ಹುಬ್ಬಳ್ಳಿ, ಏಪ್ರಿಲ್ 10: ಜೀವಂತವಾಗಿ ಕೊಳೆಯುವ ವಿಚಿತ್ರ ಕಾಯಿಲೆಯಿಂದ ಯುವಕನೊಬ್ಬ ಬಳಲುತ್ತಿರುವ ಸಂಗತಿ ಹಳೆ ಹುಬ್ಬಳ್ಳಿಯ ಆನಂದ ನಗರದ ಬೆಳಕಿಗೆ ಬಂದಿದೆ.

Recommended Video

ಈ ವ್ಯಕ್ತಿ ನಾಯಿಗೆ ಊಟಾ ಹಾಕಿದ್ದಕ್ಕೆ ಏನು ಮಾಡಿದ ನೋಡಿ | Oneindia kannada

ಇರ್ಫಾನ್ ಮನಿಯಾರ (22) ರೋಗಕ್ಕೆ ತುತ್ತಾದ ಯುವಕ. ಈತ ವಿಚಿತ್ರವಾದ ಚರ್ಮರೋಗ ಸಮಸ್ಯೆಯಿಂದ ಬಳಲುತ್ತಿದ್ದಾನೆ. ಎರಡು ತಿಂಗಳ ಹಿಂದೆ ಕುತ್ತಿಗೆಯ ಭಾಗದಲ್ಲಿ ಮೊಡವೆಗಳು ಕಾಣಿಸಿಕೊಂಡಿದ್ದವು. ಇದಕ್ಕೆಂದು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ. ಎಷ್ಟೇ ಚಿಕಿತ್ಸೆ ಪಡೆದರೂ ಗುಣಮುಖವಾಗದ ಕಾರಣ ಮನೆಯಲ್ಲೇ ಉಳಿದುಕೊಂಡಿದ್ದ.

ತನ್ನ ಮೇಲೆ 3 ರೈಲು ಹಾದುಹೋದರೂ ಬದುಕುಳಿದ, 'ಅಪ್ಪ ಬಂದ್ರು' ಎಂದು ಎದ್ದುಕುಳಿತ!ತನ್ನ ಮೇಲೆ 3 ರೈಲು ಹಾದುಹೋದರೂ ಬದುಕುಳಿದ, 'ಅಪ್ಪ ಬಂದ್ರು' ಎಂದು ಎದ್ದುಕುಳಿತ!

ದಿನೇ ದಿನೇ ಈತನ ದೇಹದಲ್ಲಿ ಹುಣ್ಣು ಜಾಸ್ತಿಯಾಗುತ್ತಿದ್ದು, ವೈದ್ಯರಿಗೂ ನಿಖರ ಕಾರಣ ತಿಳಿದುಬಂದಿಲ್ಲ. ಕಾಲು ಸಂಪೂರ್ಣ ಕೊಳೆಯುವ ಸ್ಥಿತಿ ತಲುಪಿದೆ. ಇದೀಗ ಕೆಲ ದಿನಗಳಿಂದ ಸಮಸ್ಯೆ ಹೆಚ್ಚಾಗಿ ದೇಹದ ಭಾಗಗಳಲ್ಲಿ ಕೊಳೆಯುವ ಲಕ್ಷಣಗಳು ಕಾಣಿಸಿಕೊಂಡಿವೆ. ದೇಶಾದ್ಯಂತ ಲಾಕ್ ಡೌನ್ ವಿಧಿಸಿರುವ ಹಿನ್ನೆಲೆಯಲ್ಲಿ ಸರ್ಕಾರಿ ಆಸ್ಪತ್ರೆಗಳ ಒಪಿಡಿ ಕೂಡ ಬಂದ್ ಆಗಿವೆ. ಹೀಗಾಗಿ ಈ ಯುವಕನ ಕುಟುಂಬ ಕೈಚೆಲ್ಲಿ ಕುಳಿತಿತ್ತು.

Strange Skin Disease To Young Man In Hubballi

ಇದೀಗ ಈ ಕುಟುಂಬದ ಸಹಾಯಕ್ಕೆ ಅಂಗನವಾಡಿ ಶಿಕ್ಷಕಿ ಹಾಗೂ ಕಾಂಗ್ರೆಸ್ ಮುಖಂಡ ಇಮ್ರಾನ್ ಎಲಿಗಾರ ಬಂದಿದ್ದು, ಯುವಕನನ್ನು ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಕುಟುಂಬಕ್ಕೆ ಆಧಾರವಾಗಿದ್ದ ಒಬ್ಬನೇ ಮಗನಿಗೆ ವಿಚಿತ್ರವಾದ ಈ ಚರ್ಮರೋಗ ಕಾಣಿಸಿಕೊಂಡಿರುವುದು ಕುಟುಂಬದ ಆತಂಕಕ್ಕೆ ಕಾರಣವಾಗಿದೆ.

English summary
A young man Irfan maniyar from hubballi is suffering from strange skin disease. His body is rotting day by day
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X