ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜ.25ರಿಂದ ಬೆಂಗಳೂರು-ಹುಬ್ಬಳ್ಳಿ ನಡುವೆ ಮತ್ತೊಂದು ವಿಮಾನ ಹಾರಾಟ

|
Google Oneindia Kannada News

ಹುಬ್ಬಳ್ಳಿ, ಜನವರಿ 13 : ಬೆಂಗಳೂರು-ಹುಬ್ಬಳ್ಳಿ ನಡುವೆ ಮತ್ತೊಂದು ವಿಮಾನ ಹಾರಾಟ ಆರಂಭವಾಗಲಿದೆ. ಸ್ಟಾರ್ ಏರ್ ಜನವರಿ 25ರಿಂದ ಉಭಯ ನಗರಗಳ ನಡುವೆ ಸಂಪರ್ಕ ಕಲ್ಪಿಸಲಿದೆ.

ಕೇಂದ್ರ ವಿಮಾನಯಾನ ಸಂಸ್ಥೆ ವಿಮಾನ ಹಾರಾಟಕ್ಕೆ ಅವಕಾಶ ನೀಡಿದ್ದು, ಜನವರಿ 25ರಿಂದ ಬೆಂಗಳೂರು-ಹುಬ್ಬಳ್ಳಿ, ಹುಬ್ಬಳ್ಳಿ-ಬೆಂಗಳೂರು ನಡುವೆ ವಿಮಾನ ಸೇವೆಯನ್ನು ನೀಡಲಿದೆ.

ಹುಬ್ಬಳ್ಳಿ-ಬೆಂಗಳೂರು ನಡುವೆ ಸ್ಟಾರ್ ಏರ್ ವಿಮಾನ ಹಾರಾಟಹುಬ್ಬಳ್ಳಿ-ಬೆಂಗಳೂರು ನಡುವೆ ಸ್ಟಾರ್ ಏರ್ ವಿಮಾನ ಹಾರಾಟ

Star Air Hubballi Bengaluru flight from January 25

ಜ.25ರಿಂದ ಬೆಂಗಳೂರು-ಹುಬ್ಬಳ್ಳಿ-ತಿರುಪತಿ ವಿಮಾನ ಹಾರಾಟಜ.25ರಿಂದ ಬೆಂಗಳೂರು-ಹುಬ್ಬಳ್ಳಿ-ತಿರುಪತಿ ವಿಮಾನ ಹಾರಾಟ

ಬೆಂಗಳೂರು-ಹುಬ್ಬಳ್ಳಿ ನಡುವೆ 1299 ರೂ. ದರ ನಿಗದಿ ಮಾಡಲಾಗಿದೆ. ಹುಬ್ಬಳ್ಳಿ-ಬೆಂಗಳೂರು ನಡುವಿನ ದರ 1599 ರೂ. ದರ ನಿಗದಿ ಮಾಡಲಾಗಿದೆ. ಆನ್‌ಲೈನ್ ಮುಂಗಡ ಟಿಕೆಟ್ ಬುಕ್ಕಿಂಗ್ ಈಗಾಗಲೇ ಆರಂಭವಾಗಿದೆ.

ಹುಬ್ಬಳ್ಳಿ : ದುಬೈ, ದೋಹಾ, ಕುವೈತ್ ಮುಂತಾದ ಕಡೆಗೆ ವಿಮಾನ ಸೇವೆಹುಬ್ಬಳ್ಳಿ : ದುಬೈ, ದೋಹಾ, ಕುವೈತ್ ಮುಂತಾದ ಕಡೆಗೆ ವಿಮಾನ ಸೇವೆ

ವೇಳಾಪಟ್ಟಿ : ಬೆಂಗಳೂರಿನಿಂದ ಬೆಳಗ್ಗೆ 7.35ಕ್ಕೆ ಹೊರಡಲಿರುವ ವಿಮಾನ 8.35ಕ್ಕೆ ಹುಬ್ಬಳ್ಳಿಗೆ ತಲುಪಲಿದೆ. ಹುಬ್ಬಳ್ಳಿಯಿಂದ 11.45ಕ್ಕೆ ಹೊರಡಲಿರುವ ವಿಮಾನ 12.45ಕ್ಕೆ ಬೆಂಗಳೂರು ತಲುಪಲಿದೆ.

ಸ್ಟಾರ್ ಏರ್ ವಿಮಾನ ಸೇವೆ : ಬೆಂಗಳೂರು-ಹುಬ್ಬಳ್ಳಿ-ತಿರುಪತಿ ನಡುವೆ ಸ್ಟಾರ್ ಏರ್ ಜನವರಿ 25ರಿಂದ ವಿಮಾನ ಹಾರಾಟ ಆರಂಭಿಸಲಿದೆ. ಪ್ರತಿದಿನ ಈ ವಿಮಾನ ಹಾರಾಟ ನಡೆಸಲಿವೆ.

English summary
Star Air will operating Hubballi-Bengaluru, Bengaluru-Hubballi flight from January 25, 2019. It will soon operating flight to various city's of India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X