ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹುಬ್ಬಳ್ಳಿ; ಐಸೊಲೇಷನ್ ವಾರ್ಡ್ ಆಗುವತ್ತ ರೈಲ್ವೆ ಬೋಗಿಗಳು...

By ಹುಬ್ಬಳ್ಳಿ ಪ್ರತಿನಿಧಿ
|
Google Oneindia Kannada News

ಹುಬ್ಬಳ್ಳಿ, ಏಪ್ರಿಲ್ 02: ಕೊರೊನಾ ವೈರಸ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ತುರ್ತು ಪರಿಸ್ಥಿತಿ ನಿಭಾಯಿಸಲು ಕೇಂದ್ರದ ಸೂಚನೆಯಂತೆ ರೈಲ್ವೆ ಬೋಗಿಗಳನ್ನು ಐಸೋಲೇಶನ್ ವಾರ್ಡ್ ‍ಗಳನ್ನಾಗಿ ಮಾಡುವ ಕಾರ್ಯವನ್ನು ನೈಋತ್ಯ ರೈಲ್ವೇ ವಲಯ ಜಾರಿಗೆ ತರುತ್ತಿದೆ.

ರೈಲ್ವೆ ಸ್ಲೀಪರ್ ಕ್ಲಾಸ್ ಬೋಗಿಗಳನ್ನು ಕೋವಿಡ್ 19 ಐಸೊಲೇಷನ್ ವಾರ್ಡ್ ಆಗಿ ಪರಿವರ್ತನೆ ಮಾಡುವ ಕೆಲಸ ಹುಬ್ಬಳ್ಳಿ ಜಂಕ್ಷನ್ ನಲ್ಲಿ ಶುರುವಾಗಿದೆ. ಕೊರೊನಾ ವೈರಸ್ ನಿಯಂತ್ರಿಸಲು ಕೇಂದ್ರ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.

ಮೂರನೇ ಹಂತ ತಲುಪುತ್ತಿದೆ ಕೊರೊನಾ; ಆಸ್ಪತ್ರೆ ಆದವು ರೈಲ್ವೆ ಬೋಗಿ!ಮೂರನೇ ಹಂತ ತಲುಪುತ್ತಿದೆ ಕೊರೊನಾ; ಆಸ್ಪತ್ರೆ ಆದವು ರೈಲ್ವೆ ಬೋಗಿ!

ಬೋಗಿಗಳು ಸ್ವಚ್ಛವಾಗಿದ್ದು, ರೋಗಿಗಳು ಚೇತರಿಸಿಕೊಳ್ಳಲು ಆರೋಗ್ಯಕರ ಪರಿಸರ ನೀಡಬೇಕೆಂಬ ನಿರ್ದೇಶನವಿದೆ. ಕೋವಿಡ್ 19 ರೋಗಿಗಳನ್ನು ಈ ಐಸೋಲೇಶನ್ ಬೋಗಿಗಳಲ್ಲಿರಿಸಿ ಚಿಕಿತ್ಸೆ ನೀಡಲಾಗುವುದು. ಆರಂಭದಲ್ಲಿ 5,000 ಪ್ರಯಾಣಿಕರ ಬೋಗಿಗಳನ್ನು ಐಸೋಲೇಶನ್ ವಾರ್ಡ್ ‍ಗಳನ್ನಾಗಿ ಮಾರ್ಪಡಿಸಲು ಯೋಜಿಸಲಾಗಿದೆ. ರೈಲ್ವೆ ಬೋಗಿಗಳಲ್ಲಿ ಎಲ್ಲ ರೀತಿಯ ವ್ಯವಸ್ಥೆಯನ್ನು ಮಾಡಲಾಗುವುದಾಗಿ ತಿಳಿದುಬಂದಿದೆ.

Southwestern Railway Converting Rail Bogies To Corona Isolation Wards

ರೈಲು ಬೋಗಿಗಳನ್ನು ಕ್ವಾರಂಟೈನ್ ಹಬ್ ‍ಗಳಾಗಿ ಪರಿವರ್ತಿಸುವ ಯೋಜನೆಗೆ ರೈಲ್ವೆ ಇಲಾಖೆ ನಾನ್ ಎಸಿ ಕೋಚ್ ಆರಿಸಿಕೊಂಡಿದೆ. ಇದರಲ್ಲಿ 10 ಕ್ಯಾಬಿನ್ ಗಳಿದ್ದು, ಒಂದು ಬರ್ತ್ ಬಿಟ್ಟು ಉಳಿದ ಮೂರು ಬರ್ತ್ ತೆಗೆದು ಕೋಣೆಗಳಂತೆ ಸಿದ್ಧಗೊಳಿಸಲಾಗಿದೆ. ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ವೈದ್ಯರು ಸೇರಿದಂತೆ ವೈದ್ಯಕೀಯ ಸಿಬ್ಬಂದಿಗೆ ಪ್ರತ್ಯೇಕ ಕ್ಯಾಬಿನ್ ವ್ಯವಸ್ಥೆ ಮಾಡಲಾಗಿದೆ.

English summary
Southwestern railway started converting its railway bogies to corona isolation wards in hubballi
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X