ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪಿಪಿಇ ಕಿಟ್ ಉತ್ಪಾದನೆ ಆರಂಭಿಸಿದ ನೈಋತ್ಯ ರೈಲ್ವೆ

|
Google Oneindia Kannada News

ಹುಬ್ಬಳ್ಳಿ, ಏಪ್ರಿಲ್ 28 : ದೇಶದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಳ ವಾಗುತ್ತಲೇ ಇದೆ. ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುವಾಗ ಬಳಕೆ ಮಾಡುವ ಪಿಪಿಇ ಕಿಟ್‌ಗಳಿಗೆ ಬೇಡಿಕೆ ಹೆಚ್ಚುತ್ತಲೇ ಇದೆ. ನೈಋತ್ಯ ರೈಲ್ವೆ ಸಹ ಕಿಟ್ ತಯಾರಿಯಲ್ಲಿ ತೊಡಗಿದೆ.

ನೈಋತ್ಯ ರೈಲ್ವೆಯ ಹುಬ್ಬಳ್ಳಿ ಮತ್ತು ಮೈಸೂರು ವರ್ಕ್ ಶಾಪ್‌ಗಳಲ್ಲಿ ಕೊರೊನಾ ವಾರಿಯರ್ಸ್‌ಗೆ ರಕ್ಷಣೆ ನೀಡುವ ವೈಯಕ್ತಿಕ ಸುರಕ್ಷಾ ಸಾಧನ (ಪಿಪಿಇ) ಕಿಟ್ ತಯಾರು ಮಾಡಲಾಗುತ್ತಿದೆ. ಡಿಆರ್‌ಡಿಓ ನೀಡಿದ ಸೂಚನೆಯಂತೆ, ಕಿಟ್ ತಯಾರಿ ನಡೆಯುತ್ತಿದೆ.

ಪಿಪಿಇ ಕಿಟ್ ಉತ್ಪಾದನೆ; ದೇಶಕ್ಕೆ ಮಾದರಿಯಾದ ಬೆಂಗಳೂರು ಪಿಪಿಇ ಕಿಟ್ ಉತ್ಪಾದನೆ; ದೇಶಕ್ಕೆ ಮಾದರಿಯಾದ ಬೆಂಗಳೂರು

ಜಗದಾರಿಯಲ್ಲಿ ಇರುವ ರೈಲ್ವೆ ವರ್ಕ್‌ಶಾಪ್‌ನಿಂದ ಮಾದರಿ ಕಿಟ್ ಮೈಸೂರು ಮತ್ತು ಹುಬ್ಬಳ್ಳಿಗೆ ಬಂದಿತ್ತು. ನೈಋತ್ಯ ರೈಲ್ವೆಯ ಹುಬ್ಬಳ್ಳಿ ಘಟಕದ 12, ಮೈಸೂರು ಘಟಕದ 8 ಜನರು ವಿಡಿಯೋ ಕಾನ್ಫರೆನ್ಸ್ ಮೂಲಕ ಕಿಟ್ ತಯಾರಿ ತರಬೇತಿ ಪಡೆದಿದ್ದಾರೆ.

 ದಾವಣಗೆರೆ ವೈದ್ಯಕೀಯ ವಿದ್ಯಾರ್ಥಿಗಳಿಂದ ಪಿಪಿಇ ಕಿಟ್ ಗೆ ಮನವಿ ದಾವಣಗೆರೆ ವೈದ್ಯಕೀಯ ವಿದ್ಯಾರ್ಥಿಗಳಿಂದ ಪಿಪಿಇ ಕಿಟ್ ಗೆ ಮನವಿ

ಕರ್ನಾಟಕದ ಎರಡು ವರ್ಕ್ ಶಾಪ್‌ಗಳಲ್ಲಿ ತಯಾರಾದ ಪಿಪಿಇ ಕಿಟ್‌ಗಳಿಗೆ ಡಿಆರ್‌ಡಿಓ ಮತ್ತು ಕೇಂದ್ರ ಆರೋಗ್ಯ ಸಚಿವಾಲಯ ಒಪ್ಪಿಗೆ ನೀಡಿದೆ. ಇದೇ ಗುಣಮಟ್ಟವನ್ನು ಕಾಪಾಡಿಕೊಳ್ಳುವಂತೆ ಸೂಚನೆಯನ್ನು ನೀಡಲಾಗಿದೆ.

ರಾಜ್ಯ ಸರ್ಕಾರಕ್ಕೆ 3 ಸಾವಿರ ಪಿಪಿಇ ಕಿಟ್ ನೀಡಿದ ಟಿವಿಎಸ್ ಮೋಟರ್ಸ್ ರಾಜ್ಯ ಸರ್ಕಾರಕ್ಕೆ 3 ಸಾವಿರ ಪಿಪಿಇ ಕಿಟ್ ನೀಡಿದ ಟಿವಿಎಸ್ ಮೋಟರ್ಸ್

ಪಿಪಿಇ ಕಿಟ್ ಉತ್ಪಾದನೆ

ಪಿಪಿಇ ಕಿಟ್ ಉತ್ಪಾದನೆ

2020ರ ಮಾರ್ಚ್ ತನಕ ದೇಶದಲ್ಲಿ ಪಿಪಿಇ ಕಿಟ್ ತಯಾರು ಆಗುತ್ತಿರಲಿಲ್ಲ. ಆದರೆ, ಕಿಟ್‌ಗೆ ಬೇಡಿಕೆ ಹೆಚ್ಚಿದಾಗ ಮೇಕ್ ಇನ್ ಇಂಡಿಯಾ ಯೋಜನೆಯಡಿ ಕಿಟ್ ತಯಾರಿ ಆರಂಭಿಸಲಾಯಿತು. ಡಿಆರ್‌ಡಿಓ ಪಿಪಿಇ ಕಿಟ್ ಗುಣಮಟ್ಟ ಹೇಗಿರಬೇಕು ಎಂಬ ಮಾರ್ಗಸೂಚಿಯನ್ನು ಪ್ರಕಟಿಸಿದೆ.

ನೈಋತ್ಯ ರೈಲ್ವೆಯಿಂದ ತಯಾರಿ

ನೈಋತ್ಯ ರೈಲ್ವೆಯಿಂದ ತಯಾರಿ

ನೈಋತ್ಯ ರೈಲ್ವೆ 21/4/2020ರಿಂದ ಪಿಪಿಇ ಕಿಟ್ ತಯಾರಿ ಆರಂಭಿಸಿದೆ. ಹುಬ್ಬಳ್ಳಿ ಮತ್ತು ಮೈಸೂರಿನ ವರ್ಕ್‌ ಶಾಪ್‌ನಲ್ಲಿ ಕಿಟ್ ತಯಾರಾಗುತ್ತಿದ್ದು. ಒಟ್ಟು 20 ಸಿಬ್ಬಂದಿಗಳು ಈ ಕಾರ್ಯದಲ್ಲಿ ತೊಡಗಿದ್ದಾರೆ. ವಿಡಿಯೋ ಕಾನ್ಫರೆನ್ಸ್ ಮೂಲಕ ಸಿಬ್ಬಂದಿಗಳಿಗೆ ತರಬೇತಿ ನೀಡಲಾಗಿದೆ.

ಎಷ್ಟು ಕಿಟ್ ತಯಾರಿ?

ಎಷ್ಟು ಕಿಟ್ ತಯಾರಿ?

ಹುಬ್ಬಳ್ಳಿ ವರ್ಕ್‌ಶಾಪ್‌ನಲ್ಲಿ ಇದುವರೆಗೂ 450, ಮೈಸೂರು ವರ್ಕ್ ಶಾಪ್‌ನಲ್ಲಿ 200 ಕಿಟ್‌ಗಳನ್ನು ಇದುವರೆಗೂ ತಯಾರು ಮಾಡಲಾಗಿದೆ. ಏಪ್ರಿಲ್ ಅಂತ್ಯಕ್ಕೆ 900 ಮತ್ತು ಮೇ ಅಂತ್ಯದ ವೇಳೆಗೆ 3,900 ಕಿಟ್ ತಯಾರಿ ಮಾಡುವ ಗುರಿ ಹೊಂದಲಾಗಿದೆ.

ಪಂಜಾಬ್‌ನಿಂದ ಕಚ್ಚಾ ವಸ್ತು

ಪಂಜಾಬ್‌ನಿಂದ ಕಚ್ಚಾ ವಸ್ತು

ಪಂಜಾಬ್‌ನಿಂದ ಪಿಪಿಇ ಕಿಟ್ ತಯಾರು ಮಾಡಲು ಬೇಕಾದ ಕಚ್ಚಾವಸ್ತುಗಳು ರೈಲಿನಲ್ಲಿ ಬರುತ್ತಿವೆ. ಸೌತ್ ಇಂಡಿಯನ್ ಟೆಕ್ಸ್‌ಟೈಲ್ ಆರ್ಗನೈಸೇಶನ್ ಪಿಪಿಇ ಕಿಟ್‌ಗಳ ಬಟ್ಟೆಯ ಗುಣಮಟ್ಟವನ್ನು ಅಳತೆ ಮಾಡುತ್ತದೆ. ಮೈಸೂರು ಮತ್ತು ಹುಬ್ಬಳ್ಳಿಯಲ್ಲಿ ತಯಾರಾದ ಕಿಟ್‌ಗಳು ಗುಣಮಟ್ಟ ಪರೀಕ್ಷೆಯಲ್ಲಿ ಪಾಸ್ ಆಗಿವೆ.

English summary
South Western Railways have started manufacturing PPE kits. SWR workshops at Hubballi and Mysuru have successfully replicated the high quality PPE suits.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X