ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೂರು ನಗರದಲ್ಲಿ ಫಿವರ್ ಕ್ಲಿನಿಕ್ ಆರಂಭಿಸಿದ ನೈಋತ್ಯ ರೈಲ್ವೆ

|
Google Oneindia Kannada News

ಹುಬ್ಬಳ್ಳಿ, ಏಪ್ರಿಲ್ 21 : ಕೋವಿಡ್ - 19 ವಿರುದ್ಧದ ಹೋರಾಟಕ್ಕೆ ಭಾರತೀಯ ರೈಲ್ವೆ ತನ್ನದೇ ಆದ ಕೊಡುಗೆ ನೀಡುತ್ತಿದೆ. ನೈಋತ್ಯ ರೈಲ್ವೆ ವಲಯ ಮೂರು ನಗರಗಳಲ್ಲಿ ಫಿವರ್ ಕ್ಲಿನಿಕ್ ಸ್ಥಾಪನೆ ಮಾಡಿದೆ.

Recommended Video

ಬೆಂಗಳೂರಿನಲ್ಲಿ ರಸ್ತೆಗೇನಾದ್ರು ಇಳಿದ್ರೆ ಯಮ‌ ಮಾತ್ರ ನಿಮ್ಮನ್ನ ಬಿಡೋದಿಲ್ಲ | Oneindia kannada

ಹುಬ್ಬಳ್ಳಿ, ಬೆಂಗಳೂರು ಮತ್ತು ಮೈಸೂರಿನಲ್ಲಿ ನೈಋತ್ಯ ರೈಲ್ವೆ ಫಿವರ್ ಕ್ಲಿನಿಕ್ ಸ್ಥಾಪನೆ ಮಾಡಿದೆ. ಇಲ್ಲಿ ಓರ್ವ ವೈದ್ಯ, ನರ್ಸ್, ಪ್ಯಾರಾಮೆಡಿಕಲ್ ಸಿಬ್ಬಂದಿ, ಫಾರ್ಮಾಸಿಸ್ಟ್ ಇದ್ದಾರೆ. ಪಿಪಿಇ ಕಿಟ್ ಸೌಲಭ್ಯದೊಂದಿಗೆ ಕೆಲಸ ಮಾಡಲಿದ್ದಾರೆ.

ಕೊರೊನಾ ವಿರುದ್ಧ ಹೋರಾಟ; 21 ಸಾವಿರ ಮಾಸ್ಕ್ ತಯಾರಿಸಿದ ನೈಋತ್ಯ ರೈಲ್ವೆ ಕೊರೊನಾ ವಿರುದ್ಧ ಹೋರಾಟ; 21 ಸಾವಿರ ಮಾಸ್ಕ್ ತಯಾರಿಸಿದ ನೈಋತ್ಯ ರೈಲ್ವೆ

ಜ್ವರ, ಕೆಮ್ಮು, ನೆಗಡಿಯಂತಹ ಲಕ್ಷಣ ಹೊಂದಿರುವವರನ್ನು ಈ ಕ್ಲಿನಿಕ್‌ಗಳಲ್ಲಿ ತಪಾಸಣೆ ಮಾಡಲಾಗುತ್ತದೆ. ಇದರ ಜೊತೆಗೆ ಹುಬ್ಬಳ್ಳಿಯಲ್ಲಿರುವ ಕೇಂದ್ರೀಯ ಆಸ್ಪತ್ರೆಯಲ್ಲಿ 149 ಬೆಡ್, 8 ಐಸಿಯು ಬೆಡ್ ಮತ್ತು ವೆಂಟಿಲೇಟರ್‌ನೊಂದಿಗೆ 6 ಐಸಿಯು ಬೆಡ್‌ಗಳ ವ್ಯವಸ್ಥೆ ಮಾಡಲಾಗಿದೆ.

ಉದ್ಯೋಗಿಗಳ ಓಡಾಟಕ್ಕೆ ವಿಶೇಷ ರೈಲು ಓಡಿಸುತ್ತಿದೆ ನೈರೈತ್ಯ ರೈಲ್ವೆ ಉದ್ಯೋಗಿಗಳ ಓಡಾಟಕ್ಕೆ ವಿಶೇಷ ರೈಲು ಓಡಿಸುತ್ತಿದೆ ನೈರೈತ್ಯ ರೈಲ್ವೆ

South Western Railway Opens Fever Clinics

ಬೆಂಗಳೂರಿನಲ್ಲಿ 50 ಬೆಡ್, 6 ಐಸಿಯು ಬೆಡ್, 3 ವೆಂಟಿಲೇಟರ್ ಐಸಿಯು ಬೆಡ್‌ಗಳ ವ್ಯವಸ್ಥೆಯನ್ನು ಮಾಡಲಾಗಿದೆ. ಮೈಸೂರಿನಲ್ಲಿ 101 ಬೆಡ್, 6 ಐಸಿಯು ಬೆಡ್, 4 ವೆಂಟಿಲೇಟರ್ ಐಸಿಯು ಬೆಡ್ ವ್ಯವಸ್ಥೆಗಳನ್ನು ಮಾಡಲಾಗಿದ್ದು, ರೋಗಿಗಳಿಗೆ ಚಿಕಿತ್ಸೆ ನೀಡಲು ಸಿದ್ಧವಾಗಿವೆ.

ಕೊರೊನಾ : ರೈಲ್ವೆ ನಿರ್ಮಿಸುತ್ತಿರುವ ವಾರ್ಡ್‌ಗಳು ಎಷ್ಟು ಗೊತ್ತಾ? ಕೊರೊನಾ : ರೈಲ್ವೆ ನಿರ್ಮಿಸುತ್ತಿರುವ ವಾರ್ಡ್‌ಗಳು ಎಷ್ಟು ಗೊತ್ತಾ?

ನೈಋತ್ಯ ರೈಲ್ವೆ ಇತರ ಪ್ರದೇಶಗಳಲ್ಲಿಯೂ ಫಿವರ್ ಕ್ಲಿನಿಕ್ ಸ್ಥಾಪನೆ ಮಾಡಲು ಮುಂದಾಗಿದೆ. ಈ ಕ್ಲಿನಿಕ್ ಸೌಲಭ್ಯವನ್ನು ರಾಜ್ಯ ಸರ್ಕಾರ ಸೂಚಿಸಿದ ಸಾರ್ವಜನಿಕರೂ ಬಳಸಿಕೊಳ್ಳಬಹುದಾಗಿದೆ ಎಂದು ನೈಋತ್ಯ ರೈಲ್ವೆ ಹೇಳಿದೆ.

ಲಾಕ್ ಡೌನ್ ಪರಿಣಾಮ ಪ್ರಯಾಣಿಕ ರೈಲು ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಆದರೆ, ಅಗತ್ಯ ವಸ್ತುಗಳನ್ನು ಪೂರೈಕೆ ಮಾಡಲು ಗೂಡ್ಸ್ ರೈಲುಗಳನ್ನು ಓಡಿಸಲಾಗುತ್ತಿದೆ. ಮತ್ತೊಂದು ಕಡೆ ವಿಶೇಷ ರೈಲುಗಳನ್ನು ಸರಕು ಸಾಗಣೆ ಮಾಡಲಾಗುತ್ತಿದೆ.

ನೈಋತ್ಯ ರೈಲ್ವೆಯ ವರ್ಕ್‌ ಶಾಪ್‌ಗಳು ಕಾರ್ಯ ನಿರ್ವಹಣೆ ಮಾಡುತ್ತಿದೆ. ಕೊರೊನಾ ವಿರುದ್ಧದ ಹೋರಾಟಕ್ಕೆ ಕೈ ಜೋಡಿಸಿದ್ದು, ಇದುವರೆಗೂ 21, 510 ಮಾಸ್ಕ್ ಮತ್ತು 4,317 ಲೀಟರ್ ಸ್ಯಾನಿಟೈಸರ್ ತಯಾರು ಮಾಡಲಾಗಿದೆ.

English summary
South Western Railway administration has opened fever clinics in Hubballi, Mysuru and Bengaluru. Fever clinics are also planned to be set up at other locations for diagnosis of Covid -19.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X