ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊರೊನಾ: ಹಲವು ರೈಲು ರದ್ದು ಮಾಡಿದ ನೈಋತ್ಯ ರೈಲ್ವೆ

|
Google Oneindia Kannada News

ಹುಬ್ಬಳ್ಳಿ, ಮಾರ್ಚ್ 20 : ಕೊರೊನಾ ಹರಡುವುದನ್ನು ತಡೆಯಲು ನೈಋತ್ಯ ರೈಲ್ವೆ ಹಲವು ರೈಲುಗಳ ಸಂಚಾರವನ್ನು ರದ್ದುಗೊಳಿಸಿದೆ. ಮಾರ್ಚ್ 20ರ ಶುಕ್ರವಾರದಿಂದ ಮಾರ್ಚ್ 31ರ ತನಕ ರೈಲುಗಳ ಸಂಚಾರ ಇರುವುದಿಲ್ಲ.

ಈಗಾಗಲೇ ಪೂರ್ವ, ಪಶ್ಚಿಮ, ಸೆಂಟ್ರಲ್ ರೈಲ್ವೆ ವಲಯಗಳು ಪ್ರಯಾಣಿಕರ ಕೊರತೆ ಹಿನ್ನಲೆಯಲ್ಲಿ ಹಲವು ರೈಲುಗಳನ್ನು ರದ್ದುಗೊಳಿಸಿವೆ. ಈಗ ನೈಋತ್ಯ ರೈಲ್ವೆ ಸಹ ರೈಲುಗಳನ್ನು ರದ್ದುಗೊಳಿಸಿದ್ದು, ಮುಂಗಡ ಟಿಕೆಟ್ ಬುಕ್ ಮಾಡಿದವರಿಗೆ ಎಸ್‌ಎಂಎಸ್‌ ಮೂಲಕ ಮಾಹಿತಿ ನೀಡುತ್ತಿದೆ.

ಕೊರೊನಾ; 22 ರೈಲು ಸ್ಥಗಿತ, ಫ್ಲಾಟ್‌ ಫಾರಂ ಟಿಕೆಟ್ ದರ ಭಾರಿ ಹೆಚ್ಚಳ ಕೊರೊನಾ; 22 ರೈಲು ಸ್ಥಗಿತ, ಫ್ಲಾಟ್‌ ಫಾರಂ ಟಿಕೆಟ್ ದರ ಭಾರಿ ಹೆಚ್ಚಳ

ಆನ್‌ಲೈನ್ ಮೂಲಕ ಮುಂಗಡ ಟಿಕೆಟ್ ಬುಕ್ ಮಾಡಿದ ಪ್ರಯಾಣಿಕರ ಖಾತೆಗೆ ಟಿಕೆಟ್ ಹಣ ಜಮಾವಣೆಯಾಗಲಿದೆ. ಕೌಂಟರ್‌ನಲ್ಲಿ ಮುಂಗಡ ಟಿಕೆಟ್ ಪಡೆದ ಪ್ರಯಾಣಿಕರ ಮೊಬೈಲ್‌ಗೆ ಸಂದೇಶ ಕಳಿಸಲಾಗುತ್ತದೆ. ಅವರು ಹಣ ವಾಪಸ್ ಪಡೆಯಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ.

ರೈಲ್ವೆಗೆ ಕೊರೊನಾ ಹೊಡೆತ; ವಾರಕ್ಕೆ 450 ಕೋಟಿ ನಷ್ಟ ರೈಲ್ವೆಗೆ ಕೊರೊನಾ ಹೊಡೆತ; ವಾರಕ್ಕೆ 450 ಕೋಟಿ ನಷ್ಟ

South Western Railway Cancelled Several Trains Till March 31

ರದ್ದಾಗಿರುವ ರೈಲುಗಳ ವಿವರ : ಹುಬ್ಬಳ್ಳಿ-ಕೆಎಸ್‌ಆರ್ ಬೆಂಗಳೂರು ಜನಶತಾಬ್ದಿ ರೈಲಿನ ಸಂಚಾರವನ್ನು ಎರಡೂ ಮಾರ್ಗದಿಂದ ರದ್ದುಗೊಳಿಸಲಾಗಿದೆ.

ಕಲಬುರಗಿ: ಕೊರೊನಾ ಪರೀಕ್ಷೆಗೆ ಶನಿವಾರ ಲ್ಯಾಬ್ ಆರಂಭ ಕಲಬುರಗಿ: ಕೊರೊನಾ ಪರೀಕ್ಷೆಗೆ ಶನಿವಾರ ಲ್ಯಾಬ್ ಆರಂಭ

ವಾರಕ್ಕೊಮ್ಮೆ ಸಂಚಾರ ನಡೆಸುವ ಯಶವಂತಪುರ-ಪಂಢರಪುರ ಮತ್ತು ಮೈಸೂರು-ಸಾಯಿನಗರ ಶಿರಡಿ ಎಕ್ಸ್‌ಪ್ರೆಸ್ ರೈಲುಗಳ ಸಂಚಾರ ಕೂಡ ರದ್ದಾಗಿದೆ.

ಬೆಳಗಾವಿ-ಮೈಸೂರು ನಡುವೆ ಸಂಚರಿಸುವ ವಿಶ್ವಮಾನವ ಎಕ್ಸ್‌ಪ್ರೆಸ್ ಸಂಚಾರವನ್ನು ಎರಡೂ ಮಾರ್ಗದಿಂದ ರದ್ದು ಪಡಿಸಲಾಗಿದೆ.

ಪ್ರತಿದಿನ ಸಂಚಾರ ನಡೆಸುವ ಮೈಸೂರು-ಯಲಹಂಕ ಮಾಲ್ಗುಡಿ ಎಕ್ಸ್‌ಪ್ರೆಸ್, ಮೈಸೂರು-ಬೆಂಗಳೂರು ರಾಜರಾಣಿ ಎಕ್ಸ್‌ಪ್ರೆಸ್, ವಾರದಲ್ಲಿ 4 ದಿನ ಸಂಚಾರ ನಡೆಸುವಶ ಶಿವಮೊಗ್ಗ-ಯಶವಂತಪುರ ತತ್ಕಾಲ್ ಎಕ್ಸ್‌ಪ್ರೆಸ್ ಸ್ಪೆಷಲ್ ರೈಲುಗಳು ಸಂಚರಿಸುವುದಿಲ್ಲ.

ವಾರಕ್ಕೊಮ್ಮೆ ಸಂಚಾರ ನಡೆಸುವ ಮೈಸೂರು-ರೇಣಗುಂಟಾ ಎಕ್ಸ್‌ಪ್ರೆಸ್, ಯಶವಂತಪುರ-ಮಂಗಳೂರು ಎಕ್ಸ್‌ಪ್ರೆಸ್ ರೈಲುಗಳ ಸಂಚಾರವನ್ನು ರದ್ದು ಮಾಡಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

English summary
South Western railway cancelled several trains till March 31, 2020 due to the coronavirus outbreak.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X