ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹುಬ್ಬಳ್ಳಿ-ಕಾರಟಗಿ ನಡುವಿನ ರೈಲು ಸಂಚಾರಕ್ಕೆ ದಿನಗಣನೆ

|
Google Oneindia Kannada News

ಹುಬ್ಬಳ್ಳಿ, ಅಕ್ಟೋಬರ್ 05; ನೈಋತ್ಯ ರೈಲ್ವೆ ಹುಬ್ಬಳ್ಳಿ-ಕಾರಟಗಿ ನಡುವೆ ರೈಲು ಸಂಚಾರ ಆರಂಭಿಸಲು ಒಪ್ಪಿಗೆ ನೀಡಿದೆ. ಕಾರಟಗಿ ಪಟ್ಟಣದ ತನಕ ರೈಲು ಸಂಚಾರ ನಡೆಸಲು ಅನುಕೂವಾಗುವಂತೆ ಕೈಗೊಂಡಿದ್ದ ಕಾಮಗಾರಿಗಳು ಪೂರ್ಣಗೊಂಡಿವೆ.

ಸದ್ಯ ಗಂಗಾವತಿ-ಹುಬ್ಬಳ್ಳಿ ನಡುವೆ ಸಂಚಾರ ನಡೆಸುತ್ತಿರುವ ರೈಲನ್ನು ಕಾರಟಗಿ ತನಕ ಓಡಿಸಲು ನೈಋತ್ಯ ರೈಲ್ವೆ ಅನುಮತಿ ನೀಡಿದೆ. ರೈಲ್ವೆ ಸುರಕ್ಷತಾ ಆಯುಕ್ತರು ಮಾರ್ಗದಲ್ಲಿ ಸಂಚಾರಕ್ಕೆ ಒಪ್ಪಿಗೆ ಕೊಟ್ಟಿದ್ದರು. ಆದರೆ ಕೋವಿಡ್ ಪರಿಣಾಮ ರೈಲು ಸಂಚಾರ ವಿಳಂಬವಾಗಿತ್ತು.

ತುಮಕೂರು-ಬೆಂಗಳೂರು ರೈಲು ಪ್ರಯಾಣಿಕರಿಗೆ ಸಿಹಿಸುದ್ದಿ ತುಮಕೂರು-ಬೆಂಗಳೂರು ರೈಲು ಪ್ರಯಾಣಿಕರಿಗೆ ಸಿಹಿಸುದ್ದಿ

ಪ್ರಸ್ತುತ ಪ್ರತಿ ದಿನ ಸಂಚಾರ ನಡೆಸುತ್ತಿರುವ ರೈಲು ನಂಬರ್ 07303/ 07304 ಎಕ್ಸ್‌ಪ್ರೆಸ್ ರೈಲನ್ನು ಗಂಗಾವತಿಯಿಂದ 26 ಕಿ. ಮೀ. ದೂರದಲ್ಲಿರುವ ಕಾರಟಗಿ ತನಕ ಓಡಿಸಲಾಗುತ್ತದೆ. ಪರೀಕ್ಷಾರ್ಥ ಸಂಚಾರ ಪೂರ್ಣಗೊಂಡಿದ್ದು, ಉದ್ಘಾಟನಾ ಸಮಾರಂಭ ನಡೆಯಬೇಕಿದೆ.

ಬೆಂಗಳೂರು-ಧಾರವಾಡ ನಡುವೆ ವಂದೇ ಭಾರತ್ ರೈಲು ಸಂಚಾರ ಬೆಂಗಳೂರು-ಧಾರವಾಡ ನಡುವೆ ವಂದೇ ಭಾರತ್ ರೈಲು ಸಂಚಾರ

Soon Train To Run Between Hubballi And Karatagi

ಕೊಪ್ಪಳ ಸಂಸದ ಸಂಗಣ್ಣ ಕರಡಿ ರೈಲು ಮಾರ್ಗ ಲೋಕಾರ್ಪಣೆಗೆ ಉತ್ಸುಕರಾಗಿದ್ದಾರೆ. ರೈಲ್ವೆ ಇಲಾಖೆಯ ಜೊತೆ ಚರ್ಚಿಸಿ ರೈಲು ಸಂಚಾರದ ಉದ್ಘಾಟನೆಗೆ ದಿನಾಂಕವನ್ನು ನಿಗದಿ ಮಾಡಲಿದ್ದಾರೆ. ದರ, ವೇಳಾಪಟ್ಟಿ ಎಲ್ಲವೂ ಇನ್ನೂ ಅಂತಿಮಗೊಂಡಿಲ್ಲ.

ಬೆಂಗಳೂರು ಏರ್‌ಪೋರ್ಟ್‌ಗೆ ರೈಲು ಸಂಚಾರ ರದ್ದು! ಬೆಂಗಳೂರು ಏರ್‌ಪೋರ್ಟ್‌ಗೆ ರೈಲು ಸಂಚಾರ ರದ್ದು!

ನೈಋತ್ಯ ರೈಲ್ವೆ ವಲಯದ ಸಿಪಿಆರ್‌ಓ ಅನೀಶ್ ಹೆಗಡೆ ಈ ಕುರಿತು ಮಾಹಿತಿ ನೀಡಿದ್ದಾರೆ, "ನೈಋತ್ಯ ರೈಲ್ವೆ ಹುಬ್ಬಳ್ಳಿ-ಕಾರಟಗಿ ರೈಲು ಸಂಚಾರಕ್ಕೆ ಸಂಬಂಧಿಸಿದ ಎಲ್ಲಾ ಪರೀಕ್ಷೆಗಳನ್ನು ನಡೆಸಿ ಸಂಬಂಧ ಪಟ್ಟ ಪತ್ರ ಕಳಿಸಲಾಗಿದೆ. ಕೇಂದ್ರ ರೈಲ್ವೆ ಸಚಿವರಿಂದ ಒಪ್ಪಿಗೆ ಸಿಗುತ್ತಿದ್ದಂತೆ ಲೋಕಾರ್ಪಣೆ ದಿನಾಂಕ ನಿಗದಿಯಾಗಲಿದೆ" ಎಂದು ಹೇಳಿದ್ದಾರೆ.

ಮತ್ತೊಂದು ರೈಲು; ಕಾರಟಗಿ-ಬೆಂಗಳೂರು ನಡುವೆ ಮತ್ತೊಂದು ರೈಲು ಸಂಚಾರ ನಡೆಸಲು ಸಹ ಬೇಡಿಕೆ ಇದೆ. ರೈಲ್ವೆ ಇಲಾಖೆಗೆ ಈ ಕುರಿತು ಪ್ರಸ್ತಾವನೆ ಸಹ ಸಲ್ಲಿಕೆ ಮಾಡಲಾಗಿದೆ. ಒಪ್ಪಿಗೆ ಸಿಕ್ಕರೆ ಈ ರೈಲು ಸಹ ಸಂಚಾರವನ್ನು ಆರಂಭಿಸಲಿದೆ.

ಕರ್ನಾಟಕದಲ್ಲಿಯೇ ಅತಿ ಹೆಚ್ಚು ರೈಸ್ ಮಿಲ್‌ಗಳನ್ನು ಹೊಂದಿರುವ ಪಟ್ಟಣ ಕಾರಟಗಿ. 2017ರಲ್ಲಿ ಮೊದಲ ಬಾರಿಗೆ ಚಿಕ್ಕಬೆಣಕಲ್ ತನಕ ರೈಲು ಸಂಚಾರ ಆರಂಭವಾಯಿತು. ಚಿಕ್ಕಬೆಣಕಲ್-ಗಂಗಾವತಿ 13 ಕಿ. ಮೀ. ಮಾರ್ಗದಲ್ಲಿ 2019ರಲ್ಲಿ ರೈಲು ಓಡಿತು. ಈಗ ಗಂಗಾವತಿ-ಕಾರಟಗಿ 27 ಕಿ. ಮೀ. ಹಳಿ ಜೋಡಣೆ ಕಾರ್ಯ ಪೂರ್ಣಗೊಂಡು ಪ್ರಾಯೋಗಿಕ ಸಂಚಾರವೂ ನಡೆದಿದೆ.

ಹುಬ್ಬಳ್ಳಿ-ಗಂಗಾವತಿ ನಡುವೆ ಸಂಚಾರ ನಡೆಸುವ ರೈಲನ್ನು ಕಾರಟಗಿ ತನಕ ವಿಸ್ತರಣೆ ಮಾಡುವ ಪ್ರಸ್ತಾವನೆಗೆ ರೈಲ್ವೆ ಇಲಾಖೆ ಸಹ ಒಪ್ಪಿಗೆ ಕೊಟ್ಟಿದೆ. ರೈಲು ಸಂಚಾರದ ದಿನಾಂಕ ನಿಗದಿ ಪ್ರಕ್ರಿಯೆಗಳು ಮಾತ್ರ ಬಾಕಿ ಇದೆ.

ಗಂಗಾವತಿಯಿಂದ ಶ್ರೀರಾಮನಗರ, ಸಿದ್ದಾಪುರ ಮೂಲಕ ಕಾರಟಗಿ ತನಕ ರೈಲು ಮಾರ್ಗ ನಿರ್ಮಾಣ ಮಾಡಲಾಗಿದೆ. 2020ರಲ್ಲಿಯೇ ಮಾರ್ಗದ ಕಾಮಗಾರಿ ಪೂರ್ಣಗೊಂಡಿತ್ತು. 2021ರ ಮಾರ್ಚ್‌ನಲ್ಲಿ ಪರೀಕ್ಷಾರ್ಥ ಸಂಚಾರ ಪೂರ್ಣಗೊಂಡಿತ್ತು. ಆದರೆ ಲಾಕ್‌ಡೌನ್ ಕಾರಣ ರೈಲು ಸಂಚಾರ ಆರಂಭವಾಗಿಲ್ಲ.

ಕರ್ನಾಟಕ-ಆಂಧ್ರ ಪ್ರದೇಶ ಸಂಪರ್ಕಿಸುವ ಯೋಜನೆಯ ಭಾಗವಿದಾಗಿದೆ. ಮುನಿರಾಬಾರ್‌ನಿಂದ ರಾಯಚೂರು ಮೂಲಕ ಮೆಹಬೂಬ್ ನಗರಕ್ಕೆ ಸಂಪರ್ಕ ಕಲ್ಪಿಸುವ ಯೋಜನೆಯನ್ನು 1350 ಕೋಟಿ ರೂ. ವೆಚ್ಚದಲ್ಲಿ ಕೈಗೊಳ್ಳಲಾಗಿದೆ. ಯೋಜನೆ ಪೂರ್ಣವಾದರೆ ಹುಬ್ಭಳ್ಳಿ, ಕೊಪ್ಫಳದಿಂದ ಹೈದರಾಬಾದ್‌ಗೆ ನೇರ ಸಂಪರ್ಕ ಸಾಧ್ಯವಾಗಲಿದೆ.

ಗೂಡ್ಸ್ ರೈಲು ಸಂಚಾರ; ಕೊಪ್ಪಳ ಸಂಸದ ಸಂಗಣ್ಣ ಕರಡಿ ಕೇಂದ್ರ ರೈಲ್ವೆ ಇಲಾಖೆಗೆ ಪತ್ರ ಬರೆದಿದ್ದರು. ಪ್ರಮುಖ ವಾಣಿಜ್ಯ ಕೇಂದ್ರವಾದ ಗಂಗಾವತಿಗೆ ಗೂಡ್ಸ್ ರೈಲು ಸಂಚಾರ ಆರಂಭಿಸಬೇಕು ಎಂದು ಮನವಿಯನ್ನು ಮಾಡಿದ್ದರು.

ಭತ್ತ ಸೇರಿದಂತೆ ಇತರ ವ್ಯಾಪಾರಕ್ಕೆ ಗೂಡ್ಸ್‌ ರೈಲು ಸಂಚಾರ ಸಹಕಾರಿಯಾಗಲಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದರು. ಫೆಬ್ರವರಿ 14ರಂದು ಗೂಡ್ಸ್ ರೈಲು ಸಂಚಾರವನ್ನು ಸಹ ಆರಂಭಿಸಲಾಗಿದೆ. ಗಂಗಾವತಿಗೆ ಬಂದ ಮೊದಲ ಗೂಡ್ಸ್ ರೈಲು 1326 ಮೆಟ್ರಿಕ್ ಟನ್ ಭತ್ತವನ್ನು ಸಾಗಣೆ ಮಾಡಿತ್ತು.

Recommended Video

ದೆಹಲಿಯಲ್ಲಿ ಫ್ಲೈ ಓವರ್ ಕೆಳಗೆ‌ ನುಗ್ಗಿದ‌ ವಿಮಾನ:ವೈರಲ್ ವಿಡಿಯೋ | Oneindia Kannada

ಗಂಗಾವತಿಗೆ ಗೂಡ್ಸ್ ರೈಲು ಆಗಮಿಸಿದ ಸುದ್ದಿಯನ್ನು ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯಲ್ ಸಹ ಟ್ವೀಟ್ ಮಾಡಿದ್ದರು. ಹುಬ್ಬಳ್ಳಿಯಲ್ಲಿ ಯಾರ್ಡ್‌ಗಳ ನಿರ್ಮಾಣ ಕಾರ್ಯ ನಡೆಯುತ್ತಿರುವುದರಿಂದ ಕೆಲವು ರೈಲುಗಳ ಸಂಚಾರಕ್ಕೆ ಅಡ್ಡಿಯಾಗಿದೆ. ಶೀಘ್ರವೇ ಹುಬ್ಬಳ್ಳಿ-ಕಾರಟಗಿ ರೈಲು ಸಂಚಾರಕ್ಕೆ ದಿನಾಂಕ ನಿಗದಿಯಾಗುವ ನಿರೀಕ್ಷೆ ಇದೆ.

English summary
South western railway approved to run train between Hubballi and Karatagi. Date will be announced after Indian railways approval.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X