• search
 • Live TV
ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಹುಬ್ಬಳ್ಳಿ-ಬೆಂಗಳೂರು ನಡುವೆ ಸೂಪರ್ ಫಾಸ್ಟ್ ರೈಲು ಸಂಚಾರ

|
Google Oneindia Kannada News

ಹುಬ್ಬಳ್ಳಿ, ಮಾರ್ಚ್ 28: ಬೆಂಗಳೂರು-ಹುಬ್ಬಳ್ಳಿ ನಡುವೆ ಸೂಪರ್ ಫಾಸ್ಟ್ ರೈಲು ಸಂಚಾರ ಆರಂಭವಾಗಲಿದೆ. ಕೇಂದ್ರ ಸಚಿವರು ಸಹ ರೈಲು ಸಂಚಾರಕ್ಕೆ ಒಪ್ಪಿಗೆ ನೀಡಿದ್ದು, ಶೀಘ್ರದಲ್ಲೇ ಸಂಚಾರ ಪ್ರಾರಂಭವಾಗಲಿದೆ.

ಕೇಂದ್ರ ಸಚಿವ, ಧಾರವಾಡದ ಬಿಜೆಪಿ ಸಂಸದ ಪ್ರಹ್ಲಾದ್ ಜೋಶಿ ಈ ಕುರಿತು ಮಾಹಿತಿ ನೀಡಿದರು. "ಹುಬ್ಬಳ್ಳಿ-ಬೆಂಗಳೂರು ನಡುವೆ ಸೂಪರ್ ಫಾಸ್ಟ್ ರೈಲು ಆರಂಭಿಸಲಾಗುತ್ತದೆ. ಆರು ತಿಂಗಳೊಳಗೆ ಚಾಲನೆ ನೀಡಲಾಗುತ್ತದೆ" ಎಂದರು.

ದಾವಣಗೆರೆ; ಉದ್ಘಾಟನೆಗೆ ಸಜ್ಜಾದ ರೈಲು ನಿಲ್ದಾಣದ ವಿಶೇಷತೆಗಳು ದಾವಣಗೆರೆ; ಉದ್ಘಾಟನೆಗೆ ಸಜ್ಜಾದ ರೈಲು ನಿಲ್ದಾಣದ ವಿಶೇಷತೆಗಳು

"ಹುಬ್ಬಳ್ಳಿಯಿಂದ ಬೆಂಗಳೂರು ತಲುಪಲು ಸದ್ಯ 8 ತಾಸು ಬೇಕಾಗುತ್ತಿದೆ. ಸೂಪರ್ ಫಾಸ್ಟ್ ರೈಲು ಆರಂಭವಾದರೆ ನಾಲ್ಕೂವರೆ ತಾಸಿನಲ್ಲಿ ತಲುಪಬಹುದಾಗಿದೆ" ಎಂದು ಪ್ರಹ್ಲಾದ್ ಜೋಶಿ ಹೇಳಿದರು.

ಕೋಲಾರ ವಿಶೇಷ; ಉದ್ಘಾಟನೆ ಭಾಗ್ಯ ಕಂಡಿಲ್ಲ ಈ ರೈಲು ನಿಲ್ದಾಣ! ಕೋಲಾರ ವಿಶೇಷ; ಉದ್ಘಾಟನೆ ಭಾಗ್ಯ ಕಂಡಿಲ್ಲ ಈ ರೈಲು ನಿಲ್ದಾಣ!

"ಸೂಪರ್ ಫಾಸ್ಟ್ ರೈಲು ಆರಂಭವಾದರೆ ಜನರ ಸಮಯ ಉಳಿತಾಯವಾಗಲಿದೆ. ಕೇಂದ್ರ ರೈಲ್ವೆ ಸಚಿವ ಪಿಯೂಷ್ ಘೋಯೆಲ್ ಮೌಖಿಕವಾಗಿ ರೈಲು ಸಂಚಾರಕ್ಕೆ ಒಪ್ಪಿಗೆ ನೀಡಿದ್ದಾರೆ. ಮುಂದಿನ 6 ತಿಂಗಳಿನಲ್ಲಿ ರೈಲು ಸಂಚಾರ ಆರಂಭಿಸಲಾಗುತ್ತದೆ" ಎಂದು ಸಚಿವರು ಭರವಸೆ ನೀಡಿದರು.

ಶೀಘ್ರದಲ್ಲೇ ದಾವಣಗೆರೆ-ಹುಬ್ಬಳ್ಳಿ ಡೆಮು ರೈಲು ಸಂಚಾರ ಶೀಘ್ರದಲ್ಲೇ ದಾವಣಗೆರೆ-ಹುಬ್ಬಳ್ಳಿ ಡೆಮು ರೈಲು ಸಂಚಾರ

ಮುಂಜಾನೆ ವಿಮಾನ; "ಹುಬ್ಬಳ್ಳಿ-ಬೆಂಗಳೂರು ನಡುವೆ ಬೆಳಗಿನ ಜಾವ ವಿಮಾನ ಹಾರಾಟ ಆರಂಭವಾಗಲಿದೆ" ಎಂದು ಪ್ರಹ್ಲಾದ್ ಜೋಶಿ ಹೇಳಿದರು.

   ಯಡಿಯೂರಪ್ಪನನ್ನು ತರಾಟೆಗೆ ತೆಗೆದುಕೊಂಡ ಸಿದ್ದರಾಮಯ್ಯ | Oneindia Kannada

   "ಬೆಂಗಳೂರಿನಿಂದ ಹುಬ್ಬಳ್ಳಿಗೆ ಬೆಳಗಿನ ಜಾವ ವಿಮಾನವಿಲ್ಲ. ಈ ಸಂಬಂಧ ಟ್ರೂ ಜೆಟ್ ಜೊತೆ ಮಾತುಕತೆ ನಡೆಸಲಾಗಿದೆ. ಜೂನ್ ತಿಂಗಳಿನಿಂದ ಬಹುಶಃ ವಿಮಾನ ಸೇವೆ ಆರಂಭವಾಗಲಿದೆ" ಎಂದು ಹೇಳಿದರು.

   English summary
   Dharwad BJP MP Prahlad Joshi said that super fast train will run between Hubballi and Bengaluru soon.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X