ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

"ಸೋನಿಯಾ, ರಾಹುಲ್, ಪ್ರಿಯಾಂಕಾ ಎಲ್ಲರೂ ನಕಲಿ ಗಾಂಧಿಗಳೇ"!

|
Google Oneindia Kannada News

ಹುಬ್ಬಳ್ಳಿ, ಡಿಸೆಂಬರ್.15: ದೇಶದಲ್ಲಿ ಇದೀಗ ಗಾಂಧಿ ಹಾಗೂ ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್ ಕುರಿತು ಚರ್ಚೆಗಳು ಶುರುವಾಗಿದೆ. ಈ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೊಸ ಬಾಂಬ್ ಸಿಡಿಸಿದ್ದಾರೆ. ರಾಹುಲ್ ಗಾಂಧಿ. ಸೋನಿಯಾ ಗಾಂಧಿ , ಪ್ರಿಯಾಂಕಾ ವಾದ್ರಾ ಎಲ್ಲರೂ ನಕಲಿ ಗಾಂಧಿಗಳೇ ಎಂದು ಕಿಡಿ ಕಾರಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾತನಾಡಿದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಕಾಂಗ್ರೆಸ್ ಪಕ್ಷದಲ್ಲಿ ಇರುವುವವರೆಲ್ಲ ನಕಲಿ ಗಾಂಧಿಗಳೆ ಎಂದು ವಾಗ್ದಾಳಿ ನಡೆಸಿದ್ದಾರೆ. ಇತ್ತೀಚಿಗಷ್ಟೇ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ನಾನೇನು ಸಾವರ್ಕರ್ ಅಲ್ಲ ಎಂದ ಹೇಳಿಕೆಗೆ ಕೆಂಡ ಕಾರಿದ್ದಾರೆ.

ಸಾವರ್ಕರ್ ಹೇಳಿಕೆ, ರಾಹುಲ್ ಗಾಂಧಿಗೆ ಪ್ರಹ್ಲಾದ ಜೋಶಿ ತಿರುಗೇಟುಸಾವರ್ಕರ್ ಹೇಳಿಕೆ, ರಾಹುಲ್ ಗಾಂಧಿಗೆ ಪ್ರಹ್ಲಾದ ಜೋಶಿ ತಿರುಗೇಟು

ರಾಹುಲ್ ಗಾಂಧಿ ಯಾವತ್ತೂ ಸಾವರ್ಕರ್ ಆಗಲು ಸಾಧ್ಯವಿಲ್ಲ. ರಾಹುಲ್ ಗಾಂಧಿ ಕೇವಲ ಉದ್ಧವ್ ಠಾಕ್ರೆ ಆಗಲಿಕ್ಕೆ ಮಾತ್ರ ಸಾಧ್ಯ ಎಂದು ಲೇವಡಿ ಮಾಡಿದರು. ರಾಹುಲ್ ಗಾಂಧಿ ಅನುಕೂಲಕ್ಕೆ ತಕ್ಕಂತೆ ಹೊಂದಾಣಿಕೆ ಮಾಡುಕೊಳ್ಳುತ್ತಾರೆ. ಆದರೆ ದೇಶಭಕ್ತ ವೀರ ಸಾವರ್ಕರ್ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುವುದು ತಪ್ಪು. ಬೇರೆಯವರ ಬಗ್ಗೆ ಯಾವಾಗಲೂ ಇದೇ ರೀತಿ ಮಾತನಾಡುತ್ತಾರೆ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ಪ್ರಲ್ದಾರ್ ಜೋಶಿ ಕಿಡಿ ಕಾರಿದರು.

Sonia, Rahul, Priyanka Are Fake Gandhis

ಸಂಸತ್ ಚಳಿಗಾಲ ಅಧಿವೇಶನ ಯಶಸ್ವಿಯಾಗಿ ಮುಗಿದಿದ್ದು, ಐತಿಹಾಸಿಕ ಕಾನೂನುಗೆ ಸಂಬಂಧಿಸಿದ ಬಿಲ್ ಗಳು ಪಾಸ್ ಆಗಿವೆ. ಎಲ್ಲ ಯಶಸ್ಸುಗಳನ್ನು ಕಾಂಗ್ರೆಸ್ ಹಾಗೂ ಇತರ ಪಕ್ಷಗಳಿಗೆ ಸಹಿಸಲಾಗುತ್ತಿಲ್ಲ ಎಂದು ದೂಷಿಸಿದರು.

ಕೇಂದ್ರ ಸರ್ಕಾರಕ್ಕೆ ಪೌರತ್ವ ಕಸಿದುಕೊಳ್ಳುವ ಉದ್ದೇಶವಿಲ್ಲ. ಬದಲಿಗೆ ನಮ್ಮ ದೇಶಕ್ಕೆ ಹೊಂದಿಕೊಂಡ ಜನರಿಗರ ಧಾರ್ಮಿಕವಾಗಿ ಅನ್ಯಾಯಕ್ಕೆ ಒಳಗಾದವರಿಗೆ ಪೌರತ್ವ ನೀಡಲಾಗುತ್ತಿದೆ. ಇದನ್ನು ಹೊರತುಪಡಿಸಿ ಯಾವುದೇ ಮುಸ್ಲಿಂ ಬಾಂಧವರನ್ನು ದೇಶದಿಂದ ಹೊರಹಾಕುವ ಪ್ರಶ್ನೆ ಇಲ್ಲ. ಯಾರ ನಾಗರೀಕತೆಯನ್ನ ಕಸಿದುಕೊಳ್ಳುವ ಪ್ರಶ್ನೆಯೂ ಇಲ್ಲ. ಆದರೆ, ಕಾಂಗ್ರೆಸ್ ಇದನ್ನ ಹಿಂದೂ‌ ಮುಸ್ಲಿಂ ಭೇದ ಎಂಬ ದುಷ್ಟ ಬೀಜ ಬಿತ್ತುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.

ಕ್ಷಮೆ ಕೇಳಲು ನಾನೇನು ಸಾವರ್ಕರ್ ಅಲ್ಲ; ರಾಹುಲ್ ಗಾಂಧಿಕ್ಷಮೆ ಕೇಳಲು ನಾನೇನು ಸಾವರ್ಕರ್ ಅಲ್ಲ; ರಾಹುಲ್ ಗಾಂಧಿ

ಈ ಹಿಂದೆ ಭಾರತದ ಪೌರತ್ವ ಬಯಸಿ ಬೇರೆ ಬೇರೆ ದೇಶಗಳಿಂದ ಬಂದವರಿಗೆ ಪೌರತ್ವ ನೀಡಲಾಗಿದೆ. ನಾಗರಿಕ ಸ್ಥಾನಮಾನ ಕೊಡುವುದು ಅವಶ್ಯವಾಗಿದ್ದು, ಕಾಂಗ್ರೆಸ್ ಹತಾಶೆಗೊಂಡು ಇದನ್ನೆಲ್ಲ ಸಹಿಸುತ್ತಿಲ್ಲ ಎಂದು ಪ್ರಲ್ಹಾದ್ ಜೋಶಿ ಕಿಡಿ ಕಾರಿದ್ದಾರೆ.

English summary
"Sonia, Rahul, Priyanka Are Fake Gandhis". Congress Leaders Not Endure The Citizenship Act. Says Central Minsiter Prahlad Joshi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X