ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗೂಟದ ಕಾರಲ್ಲಿ ಓಡಾಡಿದ್ದೇ ಜಗದೀಶ್ ಶೆಟ್ಟರ್ ಸಾಧನೆ

|
Google Oneindia Kannada News

ಹುಬ್ಬಳ್ಳಿ, ಏಪ್ರಿಲ್ 11: ಬಿಜೆಪಿ ಮುಖಂಡ ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಯಾಗಿದ್ದಾಗ ಇಬ್ಬರು ಉಪಮುಖ್ಯಮಂತ್ರಿಗಳನ್ನು ನೇಮಿಸಿಕೊಂಡು ಮೂರೂ ಜನ ಕೆಂಪು ಗೂಟದ ಕಾರಿನಲ್ಲಿ ಓಡಾಡಿದ್ದು ಬಿಟ್ಟರೆ ರಾಜ್ಯಕ್ಕಾಗಲೀ, ಹುಬ್ಬಳ್ಳಿಗಾಗಲೀ ಏನನ್ನೂ ಮಾಡಿಲ್ಲ ಎಂದು ಸಮಾಜ ಪರಿವರ್ತನಾ ಸಮುದಾಯದ ಸಂಚಾಲಕ ಎಸ್. ಆರ್. ಹಿರೇಮಠ್ ಟೀಕಿಸಿದರು.

ಭ್ರಷ್ಟ ಭಾಸ್ಕರ್ ರಾವ್ ಅವರನ್ನು ಲೋಕಾಯುಕ್ತರನ್ನಾಗಿ ನೇಮಿಸಿದ್ದು, ಹುಬ್ಬಳ್ಳಿ ವಿಮಾನ ನಿಲ್ದಾಣದ 670 ಎಕರೆ ಜಮೀನು ಅಧಿಗ್ರಹಣ ಮತ್ತು ಪ್ರಹ್ಲಾದ ಜೋಶಿ ಅವರೊಂದಿಗೆ ಸೇರಿಕೊಂಡು ಮಾಡಿದ ಕರ್ನಾಟಕ ಜಿಮಖಾನದ ಖಾಸಗೀಕರಣವೇ ಅವರ ಸಾಧನೆ ಎಂದು ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ವ್ಯಂಗ್ಯವಾಡಿದರು.

ಮೂರೂ ಬಿಟ್ಟ ಪಕ್ಷಗಳಿಂದ ಮಾನಗೆಟ್ಟ ರಾಜಕಾರಣ: ಎಎಪಿಮೂರೂ ಬಿಟ್ಟ ಪಕ್ಷಗಳಿಂದ ಮಾನಗೆಟ್ಟ ರಾಜಕಾರಣ: ಎಎಪಿ

ಮುಖ್ಯಮಂತ್ರಿ ಸಿದ್ದರಾಮಯ್ಯ ಲೋಕಾಯುಕ್ತವನ್ನೇ ದುರ್ಬಲಗೊಳಿಸಿ ಬಿಜೆಪಿಯ ದಾಖಲೆಯನ್ನು ಮುರಿಯುತ್ತಿದ್ದಾರೆ. ಇಂತಹ ಎಲ್ಲ ಭ್ರಷ್ಟರನ್ನೂ ಸಂಪೂರ್ಣವಾಗಿ ಹೊಡೆದೋಡಿಸಬೇಕು ಎಂದು ಆಗ್ರಹಿಸಿದರು,

social activist S R Hiremath to support AAP Candidate in hubli

ಹುಬ್ಬಳ್ಳಿಯಲ್ಲಿ 21 ವಿವಿಧ ಪಕ್ಷಗಳು ಆಮ್ ಆದ್ಮಿ ಪಕ್ಷಕ್ಕೆ ಬೆಂಬಲ ಸೂಚಿಸಿವೆ. ಅವಳಿ ನಗರಕ್ಕೆ ಒಳಿತು ಮಾಡಬೇಕೆಂಬ ಉದ್ದೇಶದಿಂದ ತಮ್ಮ ಉದ್ಯೋಗವನ್ನೇ ಬಿಟ್ಟು ಬಂದಿರುವ ಸಂತೋಷ್ ನರಗುಂದ ಅವರನ್ನು ಗೆಲ್ಲಿಸಬೇಕಿದೆ.

ಜೆಸಿಬಿ (ಜನತಾದಳ, ಕಾಂಗ್ರೆಸ್ ಮತ್ತು ಬಿಜೆಪಿ) ಪಕ್ಷಗಳು ಭ್ರಷ್ಟಾಚಾರದಲ್ಲಿ ಒಬ್ಬರನ್ನೊಬ್ಬರು ಮೀರಿಸುತ್ತಾರೆ. ಇದಕ್ಕೆ ಸಮಗ್ರ ಬದಲಾವಣೆಯ ಅಗತ್ಯವಿದೆ. ಸಂತೋಷ್ ನರಗುಂದ ಅಂತಹ ಬದಲಾವಣೆ ತರಬಲ್ಲ ಅರ್ಹ ವ್ಯಕ್ತಿ ಎಂದರು.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಬಿಜೆಪಿ ಅಭ್ಯರ್ಥಿಗಳ ಮೊದಲ ಅಧಿಕೃತ ಪಟ್ಟಿ ಪ್ರಕಟ

ಎಎಪಿಯ ರಾಜ್ಯ ಸಹ-ಸಂಚಾಲಕ ಶಿವಕುಮಾರ ಚೆಂಗಲರಾಯ, ತಮ್ಮ ಹೋರಾಟದಿಂದ ಭ್ರಷ್ಟರ ಎದೆಯಲ್ಲಿ ನಡುಕ ಹುಟ್ಟಿಸಿದ ಎಸ್.ಆರ್. ಹಿರೇಮಠ್, ಜನ ಸಂಗ್ರಾಮ ಪರಿಷತ್ ಸಂಚಾಲಕರಾದ ರಾಘವೇಂದ್ರ ಕುಷ್ಟಗಿ ಮತ್ತು ಪರ್ಯಾಯ ರಾಜಕಾರಣಕ್ಕಾಗಿ ಹೋರಾಡುತ್ತಿರುವ 21 ಜನಪರ ಸಂಘಟನೆಗಳ ಪ್ರಮುಖರ ಬೆಂಬಲದಿಂದ ಪಕ್ಷದ ಪ್ರಚಾರಕ್ಕೆ ಆನೆ ಬಲ ಬಂದಿದೆ ಎಂದರು.

social activist S R Hiremath to support AAP Candidate in hubli

ಕವಿಮನೆ ಕಲುಷಿತ ಮಾಡಬೇಡಿ
ಗುರುಮನೆ-ಕವಿಮನೆಗಳಿಗೆ ಭೇಟಿ ನೀಡಿ ಅವುಗಳನ್ನು ಕಲುಷಿತ ಮಾಡಬೇಡಿ ಎಂದು ರಾಘವೇಂದ್ರ ಕುಷ್ಟಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರಿಗೆ ರಾಘವೇಂದ್ರ ಕುಷ್ಟಗಿ ಮನವಿ ಮಾಡಿದರು.

ವರಕವಿ ಬೇಂದ್ರೆ ಕುರುಡು ಕಾಂಚಾಣದ ಅನಾಹುತಗಳನ್ನು ನಮಗೆ ಸ್ಪಷ್ಟವಾಗಿ ತಿಳಿಸಿದ್ದಾರೆ. ಅದೇ ರೀತಿ ನಮ್ಮ ಸಂತರು, ಬಸವಣ್ಣ, ಶಿಶುನಾಳ ಶರೀಫ, ಸಿದ್ಧಾರೂಡರು, ಮಠಾಧಿಪತಿಗಳು ಎಲ್ಲರೂ ಉತ್ತರ ಕರ್ನಾಟಕದವರಿಗೆ ಪರಸ್ಪರ ಪ್ರೀತಿ ಹಂಚಿಕೊಳ್ಳುವುದನ್ನು ಕಲಿಸಿದ್ದಾರೆ. ಇಲ್ಲಿ ನಿಮ್ಮ ಕಾಂಚಾಣದ ಪ್ರಭಾವ ಬೀರಲು ಬಂದು ನಮಗೆ ಅವಮಾನ ಮಾಡಬೇಡಿ.

2 ಕೋಟಿ ಜನರಿಗೆ ಉದ್ಯೋಗ ಸೃಷ್ಟಿಸುವುದಾಗಿ ಬಿಜೆಪಿಯವರು ನೀಡಿದ ವಾಗ್ದಾನ ಏನಾಯಿತು? ನಾವು 15 ಲಕ್ಷ ರೂಪಾಯಿ ವಿಷಯ ಮರೆತಾಗಿದೆ. 'ಜೆ.ಸಿ.ಬಿ' ಎನ್ನುವುದು ಒಂದು ಮನೆ ಮೂರು ಬಾಗಿಲು ಅಷ್ಟೇ ಎಂದು ಟೀಕಿಸಿದರು.

ಮಾಜಿ ಲೋಕಾಯುಕ್ತ ನ್ಯಾ.ಸಂತೋಷ ಹೆಗ್ಡೆ ಅವರು ಮಾಡಿದ ಒಳ್ಳೆಯ ಕೆಲಸವನ್ನೆಲ್ಲಾ ತೊಳೆದುಹಾಕಿ, 700 ಭ್ರಷ್ಟ ಅಧಿಕಾರಿಗಳಿಗೆ ಬಡ್ತಿ ನೀಡಲಾಗಿದೆ. ದೇಶದ ಜಿಡಿಪಿಯ ಶೇ 68 ವರಮಾನವು ಶೇ 1ರಷ್ಟಿರುವ ಶ್ರೀಮಂತರ ಪಾಲಾಗುತ್ತಿದೆ. ಮೂರೂ ಪಕ್ಷಗಳು ಕಾರ್ಪೊರೆಟ್ ಕಂಪನಿಗಳ ಏಜೆಂಟರು. ಸಂತೋಷ್ ನರಗುಂದ್ ಅವರಂತಹ ವ್ಯಕ್ತಿಗಳು ವಿಧಾನ ಸಭೆ ಪ್ರವೇಶಿಸಿದಲ್ಲಿ ನಿಜವಾದ ಅರ್ಥದಲ್ಲಿ ವಿರೋಧ ಪಕ್ಷ ಎಂಬುದು ರಾಜ್ಯಕ್ಕೆ ಸಿಗುತ್ತದೆ. ಮಿಕ್ಕವರು ಈಗಾಗಲೇ ಒಳ ಒಪ್ಪಂದ ಮಾಡಿಕೊಂಡು ತೋರ್ಪಡಿಕೆಗೆ ಕೆಸರೆರಚಾಟದಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿದರು.

ಸಂತೋಷ್ ನರಗುಂದ ಮಾತನಾಡಿ, ಹುಬ್ಬಳ್ಳಿ-ಧಾರವಾಡದಲ್ಲಿ ಕಳೆದ 24 ವರ್ಷದಿಂದ ಜಗದೀಶ್ ಶೆಟ್ಟರ್ ಗೆಲ್ಲುತ್ತಿದ್ದಾರೆ. ಆದರೆ ಇಲ್ಲಿನ ಜನರಿಗೆ ಕುಡಿಯಲು ನೀರಿಲ್ಲ. ರಸ್ತೆ, ಫುಟ್‌ಪಾತ್‌ಗಳಿಲ್ಲ. ಕೆರೆಗಳು ಬತ್ತಿವೆ. ರೈತರಿಗೆ ನೀರಿಲ್ಲ. ಶೇ 40ರಷ್ಟು ಜನರು ಕೊಳೆಗೇರಿಯಲ್ಲಿ ವಾಸವಿದ್ದಾರೆ. ಯುವಕರು ಉದ್ಯೋಗವಿಲ್ಲದೆ ತಮ್ಮ ಹಳ್ಳಿಗಳಿಂದ ವಲಸೆ ಹೋಗುತ್ತಿದ್ದಾರೆ. ಇಂತಹ 24 ಋಣಾತ್ಮಕ ಅಂಶದ ಪಟ್ಟಿಯೇ ಜಗದೀಶ್ ಶೆಟ್ಟರ್ ಅವರ ಕೊಡುಗೆ ಎಂದರು.

English summary
samaj parivarthan samudaya founder president S.R. hiremath has expressed his support to the Aam Aadmi Party candidate in hubli Santhosh Naragund. He accused Former Chief Minister who represent hubli from more than 2 decades has done nothing to the development of district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X