ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಇತಿಹಾಸ ನಿರ್ಮಾಣ ಮಾಡಲಿದೆ ಸಿದ್ದಾರೂಢ ಸ್ವಾಮೀಜಿ ರೈಲು ನಿಲ್ದಾಣ

|
Google Oneindia Kannada News

ಹುಬ್ಬಳ್ಳಿ, ನವೆಂಬರ್ 19 : ಕರ್ನಾಟಕ ಸರ್ಕಾರ ಹುಬ್ಬಳ್ಳಿ ರೈಲು ನಿಲ್ದಾಣವನ್ನು 'ಶ್ರೀ ಸಿದ್ದಾರೂಢ ಸ್ವಾಮೀಜಿ ರೈಲು ನಿಲ್ದಾಣ' ಎಂದು ಮರು ನಾಮಕರಣಗೊಳಿಸಿ ಆದೇಶ ಹೊರಡಿಸಿದೆ. ಕೆಲವೇ ದಿನಗಳಲ್ಲಿ ಈ ನಿಲ್ದಾಣ ವಿಶ್ವಮಟ್ಟದ ದಾಖಲೆ ಮಾಡಲು ಸಿದ್ಧವಾಗುತ್ತಿದೆ.

ಕೇಂದ್ರ ಸರ್ಕಾರ ಹುಬ್ಬಳ್ಳಿ ರೈಲು ನಿಲ್ದಾಣಕ್ಕೆ ಸಿದ್ದಾರೂಢ ಸ್ವಾಮೀಜಿ ಹೆಸರಿಡಲು ಒಪ್ಪಿಗೆ ನೀಡಿತ್ತು. ಕರ್ನಾಟಕ ಸರ್ಕಾರ ಬುಧವಾರ 'ಶ್ರೀ ಸಿದ್ದಾರೂಢ ಸ್ವಾಮೀಜಿ ರೈಲು ನಿಲ್ದಾಣ' ಎಂದು ನಾಮಕರಣ ಮಾಡಿ ಅಧಿಸೂಚನೆ ಹೊರಡಿಸಿದೆ.

ವಿಶ್ವದ ಅತಿ ಉದ್ದದ ಪ್ಲಾಟ್ ಫಾರ್ಮ್ ಜನವರಿಯಲ್ಲಿ ಲೋಕಾರ್ಪಣೆವಿಶ್ವದ ಅತಿ ಉದ್ದದ ಪ್ಲಾಟ್ ಫಾರ್ಮ್ ಜನವರಿಯಲ್ಲಿ ಲೋಕಾರ್ಪಣೆ

ಈ ರೈಲು ನಿಲ್ದಾಣದಲ್ಲಿ ವಿಶ್ವದಲ್ಲೇ ಅತಿ ಉದ್ದ ಫ್ಲಾಟ್ ಫಾರ್ಮ್‌ ನಿರ್ಮಾಣವಾಗುತ್ತಿದೆ. ನಿರ್ಮಾಣ ಕಾಮಗಾರಿ ವೇಗವಾಗಿ ನಡೆಯುತ್ತಿದ್ದು, 2021ರ ಜನವರಿಯಲ್ಲಿ ಅದು ಪೂರ್ಣಗೊಳ್ಳುವ ನಿರೀಕ್ಷೆ ಇದೆ.

ಸಬರ್ಬನ್ ರೈಲು ಯೋಜನೆ: ಮೊದಲ ಹಂತದ 3 ಮಾರ್ಗ ನಿರ್ಮಾಣಕ್ಕೆ ಒಪ್ಪಿಗೆ ಸಬರ್ಬನ್ ರೈಲು ಯೋಜನೆ: ಮೊದಲ ಹಂತದ 3 ಮಾರ್ಗ ನಿರ್ಮಾಣಕ್ಕೆ ಒಪ್ಪಿಗೆ

Siddharoodha Swamiji Railway Station Set To Create Record

ಪ್ರಸ್ತುತ ಉತ್ತರ ಪ್ರದೇಶದ ಗೋರಖ್‌ಪುರ್‌ನಲ್ಲಿರುವ 1336 ಮೀಟರ್ ಉದ್ದದ ರೈಲು ಪ್ಲಾಟ್‌ ಫಾರ್ಮ್‌ ವಿಶ್ವದ ಅತಿ ಉದ್ದದ ರೈಲು ಪ್ಲಾಟ್‌ ಫಾರ್ಮ್‌ ಎಂಬ ಹೆಗ್ಗಳಿಕೆ ಪಡೆದಿದೆ. ಹುಬ್ಬಳ್ಳಿ ರೈಲು ನಿಲ್ದಾಣ ಈ ದಾಖಲೆ ಮುರಿಯಲಿದೆ.

ಬೆಂಗಳೂರು ಸಬ್ ಅರ್ಬನ್ ರೈಲು; ವೆಚ್ಚ ಹಂಚಿಕೆ ಲೆಕ್ಕ ಬೆಂಗಳೂರು ಸಬ್ ಅರ್ಬನ್ ರೈಲು; ವೆಚ್ಚ ಹಂಚಿಕೆ ಲೆಕ್ಕ

ಭಾರತೀಯ ರೈಲ್ವೆ ಈ ಕುರಿತು ಟ್ವೀಟ್ ಮಾಡಿದೆ. "ವಿಶ್ವದ ಅತಿ ಉದ್ದ ಪ್ಲಾಟ್ ಫಾರ್ಮ್ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ" ಎಂದು ಹೇಳಿದ್ದು, ಚಿತ್ರಗಳನ್ನು ಸಹ ಟ್ವೀಟ್ ಮಾಡಿದೆ. ಜನವರಿಯಲ್ಲಿ ಕಾಮಗಾರಿ ಪೂರ್ಣಗೊಳ್ಳುವ ಗುರಿ ಹೊಂದಲಾಗಿದೆ.

Siddharoodha Swamiji Railway Station Set To Create Record

Recommended Video

Corona ನಿಯಂತ್ರಿಸಲು ಸರ್ಕಾರ ತೆಗೆದುಕೊಂಡ ಕಠಿಣ ನಿರ್ಧಾರ | Oneindia Kannada

ಹುಬ್ಬಳ್ಳಿ ರೈಲು ನಿಲ್ದಾಣದ 1ನೇ ಪ್ಲಾಟ್ ಫಾರ್ಮ್ 550 ಮೀಟರ್ ಉದ್ದವಿದೆ. ನೈಋತ್ಯ ರೈಲ್ವೆ ಇದನ್ನು 1505 ಮೀಟರ್‌ಗೆ ವಿಸ್ತರಣೆ ಮಾಡುವ ಕಾಮಗಾರಿಯನ್ನು ಕೈಗೊಂಡಿದೆ. 90 ಕೋಟಿ ವೆಚ್ಚದಲ್ಲಿ ಈ ನಿರ್ಮಾಣ ಕಾಮಗಾರಿಯನ್ನು ಕೈಗೊಳ್ಳಲಾಗಿದೆ.

English summary
Shri Siddharoodha Swamiji railway station Hubballi all set to create record. World's longest platform is being constructed at this station. Work may complete in 2021.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X