ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮತ್ತೆ ಅಹಿಂದ ಸಮಾವೇಶದ ಕುರಿತು ಸಿದ್ದರಾಮಯ್ಯರ ಮಹತ್ವದ ಹೇಳಿಕೆ

|
Google Oneindia Kannada News

ಹುಬ್ಬಳ್ಳಿ, ಫೆಬ್ರವರಿ 11: ತಾವು ಸದ್ಯ ಯಾವುದೇ ಅಹಿಂದ ಸಮಾವೇಶ ಮಾಡುವುದಿಲ್ಲ. ಕಾಂಗ್ರೆಸ್ ಪಕ್ಷ ಯಾವಾಗಲೂ ಹಿಂದುಳಿದವರ ಪರವಾಗಿದ್ದು, ಹೋರಾಟದ ಅವಶ್ಯಕತೆ ಇಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಸ್ವಕ್ಷೇತ್ರ ಬಾದಾಮಿಗೆ ಹೋಗುವ ವೇಳೆ ಹುಬ್ಬಳ್ಳಿಯಲ್ಲಿ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ಕುರುಬರಿಗೆ ಎಸ್​ಟಿ ಮೀಸಲು ನೀಡುವ ವಿಚಾರಕ್ಕೆ ಪ್ರತಿಕ್ರಿಯೆ ‌ನೀಡಿದ ಅವರು, ಕುಲಶಾಸ್ತ್ರ ಅಧ್ಯಯನದ ವರದಿ ಬಂದಿಲ್ಲ. ವರದಿ ಬರುವ ಮುನ್ನವೇ ಹೋರಾಟ ಬೇಡ ಅಂದಿದ್ದೆ ಎಂದು ತಿಳಿಸಿದರು.

ಸ್ವಪಕ್ಷಿಯರ ವಿರೋಧ; ಮಾಜಿ ಸಿಎಂ ಸಿದ್ದರಾಮಯ್ಯ ಅಹಿಂದ ಸಂಘಟನೆಗೆ ಬೀಳುತ್ತಾ ಬ್ರೇಕ್?ಸ್ವಪಕ್ಷಿಯರ ವಿರೋಧ; ಮಾಜಿ ಸಿಎಂ ಸಿದ್ದರಾಮಯ್ಯ ಅಹಿಂದ ಸಂಘಟನೆಗೆ ಬೀಳುತ್ತಾ ಬ್ರೇಕ್?

ನಾನು ಸಿಎಂ ಆಗಿದ್ದ ವೇಳೆ ನಾಲ್ಕು‌ ಜಿಲ್ಲೆಗಳಲ್ಲಿ ಕುರುಬರನ್ನು ಎಸ್​ಟಿಗೆ ಸೇರಿಸಬೇಕು ಎಂದು ಆದೇಶ ಮಾಡಿದ್ದೆ. ಎಸ್​ಟಿ ಮೀಸಲು ಹೋರಾಟದಲ್ಲಿ ನಾನು ರಾಜಕೀಯ ಮಾಡಲ್ಲ. ಇದು ಆರ್​ಎಸ್​ಎಸ್ ಪ್ರೇರಿತ ಹೋರಾಟವಾಗಿದ್ದು, ಈಶ್ವರಪ್ಪರನ್ನು ಆರ್​ಎಸ್​ಎಸ್​​ನವರು ಎತ್ತಿಕಟ್ಟಿ ಹೋರಾಟ ಮಾಡಿಸುತ್ತಿದ್ದಾರೆ ಎಂದು ಆರೋಪಿಸಿದರು.

Hubballi: Siddaramaiahs Statement On The Convention Of The Ahinda

ಸಿದ್ದರಾಮಯ್ಯ ಸಿಎಂ ಆಗಿದ್ದ ವೇಳೆ ಯಾವ ಸಾಧನೆ ಮಾಡಿಲ್ಲ ಎಂಬ ಸಚಿವ ಕೆ.ಎಸ್ ಈಶ್ವರಪ್ಪ ಟೀಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, ನಾನು ಸಿಎಂ‌ ಆಗಿದ್ದಾಗ ಏನು ಅಭಿವೃದ್ಧಿ ಮಾಡಿದ್ದೇನೆಂದು ರಾಜ್ಯದ ಜನರಿಗೆ ಗೊತ್ತಿದೆ. ಈಶ್ವರಪ್ಪ ಯಾರು? ನನಗೆ ಈಶ್ವರಪ್ಪ ಸರ್ಟಿಫಿಕೇಟ್ ಬೇಕಾಗಿಲ್ಲ. ಐ ಡೋಂಟ್ ಕೇರ್ ಈಶ್ವರಪ್ಪ ಎಂದು ತಿರುಗೇಟು ನೀಡಿದರು‌.

Recommended Video

ತಾಳವಾಡಿ ಹಾಗೂ ಊಟಿ ಕರ್ನಾಟಕಕ್ಕೆ ಸೇರಿಸುವಂತೆ ಒತ್ತಾಯ! | Vatal Nagaraj | Oneindia Kannada

ಉಪ ಚುನಾವಣೆಯಲ್ಲಿ ಜೆಡಿಎಸ್ ಸ್ಪರ್ಧೆ ಮಾಡಲ್ಲ ಅನ್ನುವ ವಿಚಾರಕ್ಕೆ ಪ್ರತಿಕ್ರಿಯೆ ‌ನೀಡಿದ ಮಾಜಿ ಸಿಎಂ, ಜೆಡಿಎಎಸ್​ಗೆ ಉತ್ತರ ಕರ್ನಾಟಕದಲ್ಲಿ‌ ನೆಲೆ ಇಲ್ಲ. ಜೆಡಿಎಸ್​ನವರು ಬಿಜೆಪಿಗೆ ಸಹಾಯ ಮಾಡಲು ಹೊರಟ್ಟಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರಿಗೆ ಕೊರೆತೆಯಿಲ್ಲ. ಚುನಾವಣೆ ಘೋಷಣೆಯಾದ ಕೂಡಲೇ ಕಾಂಗ್ರೆಸ್ ಅಭ್ಯರ್ಥಿ ಘೋಷಣೆ ಮಾಡುತ್ತೇವೆ ಎಂದರು.

English summary
Siddaramaiah, the leader of the opposition, said that the Congress party is always on behalf of the backward and there is no need for a fight.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X