ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಾಬ್ರಿ ಮಸೀದಿ ಧ್ವಂಸ ಮರುಸೃಷ್ಟಿ, ಮುತಾಲಿಕ್ ಏನಂದ್ರು?

|
Google Oneindia Kannada News

ಹುಬ್ಬಳ್ಳಿ, ಡಿಸೆಂಬರ್ 18: ಆರ್ ಎಸ್ ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಅವರ ಶಾಲೆಯಲ್ಲಿ ವಿದ್ಯಾರ್ಥಿಗಳಿಂದ ಬಾಬ್ರಿ ಮಸೀದಿ ಧ್ವಂಸ ಮರುಸೃಷ್ಟಿ ಮಾಡಿಸಿದ್ದಕ್ಕೆ ಪ್ರಭಾಕರ ಭಟ್ ಮೇಲೆ ಪ್ರಕರಣ ದಾಖಲಿಸಿದ್ದು, ಮೂರ್ಖತನದ ಪರಮಾವಧಿ ಎಂದು ಶ್ರೀರಾಮ ಸೇನಾ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.

ಧಾರವಾಡದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 'ಬಾಬ್ರಿ ಮಸೀದಿ ದ್ವಂಸ ಮರುಸೃಷ್ಟಿ ಮಾಡಿದ್ದಕ್ಕೆ ಹಲವಾರು ಸಂಘ ಸಂಸ್ಥೆಗಳು ಕಲ್ಲಡ್ಕ ಪ್ರಬಾಕರ್ ಭಟ್ ಮೇಲೆ ಕೇಸ್ ಹಾಕಿ ಕೋಮು ಗಲಭೆಗೆ ಮುಂದಾಗುತ್ತಿದ್ದಾರೆ. ಇದರಿಂದ ಹಿಂದೂ ಸಂಘಟನೆಗಳನ್ನು ಕೆಣಕುವ ಕೆಲಸಕ್ಕೆ ಮುಂದಾಗಿದ್ದಾರೆ. ಇತಿಹಾಸವನ್ನು ಮಕ್ಕಳಿಗೆ ತಿಳಿಸಿ ಹೇಳುವದರಲ್ಲಿ ತಪ್ಪೆನಿದೆ. ಅದು ಯಾವುದೆ ರೀತಿಯ ಕೋಮು ಗಲಬೆಗೆ ಪ್ರಚೋದನಾ ಕಾರಣ ಅಲ್ಲ ಎಂದು ಸ್ಪಷ್ಟಪಡಿಸಿದ ಅವರು ಬಾಬರ್ ಬಂದು ದೇವಸ್ಥಾನ ಒಡೆದಿರುವದು ಸತ್ಯವಾದ‌ ವಿಷಯವಾಗಿದೆ. ನಡೆದ ಘಟನೆಯನ್ನು ಮಕ್ಕಳಿಗೆ ವಿದ್ಯಾರ್ಥಿಗಳಿಗೆ ತಿಳಿಸುವದರಲ್ಲಿ ತಪ್ಪೆನಿದೆ' ಎಂದು ಪ್ರಶ್ನಿಸಿದರು.

Shriram Sena Leader Pramod Muthalik Speaks About Babri At Hubli

'ಪಿಎಪ್ಐ ಪಕ್ಷದವರು ಭಟ್ ಅವರ ಮೇಲೆ ಕೇಸ್ ಹಾಕಿ ಕೋಮುಗಲಬೇಗೆ ಮುಂದಾಗಿದ್ದಾರೆ. ಇದನ್ನು ಸಹಜ ಘಟನೆಯೆಂದು ತಗೆದುಕೊಳ್ಳಬೇಕೆ ಹೊರತು ಕೊಮುಭಾವನೆ ತಗೆದುಕೊಳ್ಳಬಾರದು' ಎಂದು ಅವರು ಹೇಳಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಕಲ್ಲಡ್ಕದ ಶ್ರೀರಾಮ ಶಾಲೆಯ ಕ್ರೀಡೋತ್ಸವದಲ್ಲಿ ಮಕ್ಕಳಿಂದ ಬಾಬ್ರಿ ಮಸೀದಿ ದ್ವಂಸದ ಮರುಸೃಷ್ಟಿ ಮಾಡಿಸಲಾಗಿತ್ತು. ಅಯೋಧ್ಯೆ ತೀರ್ಪಿನ ನಂತರ ಬಾಬ್ರಿ ಮಸೀದಿ ಕುರಿತಂತೆ ಯಾವುದೇ ಪ್ರಚೋದನಾತ್ಮಕ ಕೆಲಸಗಳನ್ನು ಯಾರೂ ಮಾಡುವಂತಿಲ್ಲ ಎಂದು ಸುಪ್ರೀಂಕೋರ್ಟ ಸೂಚಿಸಿತ್ತು. ಆದರೆ, ಕಲ್ಲಡ್ಕ ಶಾಲೆಯ ಘಟನೆ ಖಂಡಿಸಿ ಹಲವು ಸಂಘಟನೆಗಳು ರಾಜ್ಯಾದ್ಯಂತ ಪ್ರಕರಣಗಳನ್ನು ದಾಖಲಿಸಿವೆ.

English summary
Shriram Sena Leader Pramod Muthalik Speaks About Babri At Hubli.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X