ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹುಬ್ಬಳ್ಳಿ-ಧಾರವಾಡದಲ್ಲಿ ಕಾಣಿಸಿಕೊಂಡ ಚಿಕನ್ ಗುನ್ಯಾ

By Gururaj
|
Google Oneindia Kannada News

ಧಾರವಾಡ, ಆಗಸ್ಟ್ 10 : ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ಚಿಕನ್ ಗುನ್ಯಾ ಕಾಣಿಸಿಕೊಂಡಿದೆ. ನಗರ ಮತ್ತು ಗ್ರಾಮೀಣ ಪ್ರದೇಶಗಳ ಹಲವು ಬಡಾವಣೆಗಳಲ್ಲಿ ರೋಗ ಕಾಣಿಸಿಕೊಂಡಿದ್ದು, ಜನರು ಆತಂಕಗೊಂಡಿದ್ದಾರೆ.

ಕಳೆದ ಕೆಲವು ದಿನಗಳಿಂದ ಮೋಡ ಕವಿದ ವಾತಾವರಣ, ತುಂತುರು ಮಳೆ ಸುರಿಯುತ್ತಿದೆ. ಆದ್ದರಿಂದ, ಚಿಕನ್ ಗುನ್ಯಾ ಪ್ರಕರಣಗಳು ಹೆಚ್ಚುತ್ತಿವೆ. ಪ್ರತಿ ದಿನ 7 ರಿಂದ 8 ಜನರು ಜ್ವರದಿಂದಾಗಿ ಆಸ್ಪತ್ರೆಗೆ ಬಂದು ಹೋಗುತ್ತಿದ್ದಾರೆ.

ಚಿಕೂನ್ ಗುನ್ಯಾ ಮತ್ತು ಅಜ್ಜಿ ಕೊಟ್ಟ ಅಮೃತಬಳ್ಳಿ ಕಷಾಯ!ಚಿಕೂನ್ ಗುನ್ಯಾ ಮತ್ತು ಅಜ್ಜಿ ಕೊಟ್ಟ ಅಮೃತಬಳ್ಳಿ ಕಷಾಯ!

ಕೆಲವು ಬಡಾವಣೆಗಳಲ್ಲಿ ಚಿಕನ್ ಗುನ್ಯಾ ರೋಗಿಗಳ ಸಂಖ್ಯೆ ಹೆಚ್ಚಿದೆ. ಕೆಲವು ಬಡಾವಣೆಗಳಲ್ಲಿ ಅರ್ಧದಷ್ಟು ಜನರು ರೋಗದಿಂದ ಬಳಲುತ್ತಿದ್ದಾರೆ. ಜೆ.ಪಿ.ನಗರವನ್ನು ಪ್ರತಿಷ್ಠಿತ ಬಡಾವಣೆ ಎಂದು ಪರಿಗಣಿಸಲಾಗುತ್ತದೆ. ಆದರೆ, ಈ ಏರಿಯಾದಲ್ಲಿ ಹೆಚ್ಚು ಪ್ರಕರಣಗಳು ದಾಖಲಾಗಿವೆ.

Several cases of Chikungunya reported at Hubballi-Dharwad

ಹುಬ್ಬಳ್ಳಿ ತಾಲೂಕಿನ ಗಮನಗಟ್ಟಿ, ನವಲೂರಿನಲ್ಲಿ ಹೆಚ್ಚು ಪ್ರಕರಣಗಳು ಪತ್ತೆಯಾಗಿವೆ. ಧಾರವಾಡ ತಾಲೂಕಿನ ಅಮ್ಮಿನಬಾವಿ, ಉಪ್ಪಿನ ಬೆಟಗೇರಿ ಸೇರಿದಂತರ ವಿವಿಧ ಕಡೆ ಹಲವು ಪ್ರಕರಣಗಳು ಪತ್ತೆಯಾಗಿವೆ. ಹಲವು ಜನರು ಜ್ವರದಿಂದ ಬಳಲುತ್ತಿದ್ದಾರೆ.

ಗೊಲ್ಲರಕೊಪ್ಪಲಿನಲ್ಲಿ ಊರಿನ ತುಂಬಾ ಚಿಕೂನ್ ಗುನ್ಯಾ ಬಾಧಿತರು!ಗೊಲ್ಲರಕೊಪ್ಪಲಿನಲ್ಲಿ ಊರಿನ ತುಂಬಾ ಚಿಕೂನ್ ಗುನ್ಯಾ ಬಾಧಿತರು!

ಆರೋಗ್ಯ ಇಲಾಖೆ ನೀಡುವ ಮಾಹಿತಿಯಂತೆ ನಗರ ಪ್ರದೇಶದಲ್ಲಿ ಹೆಚ್ಚು ಪ್ರಕರಣದಳು ಪತ್ತೆಯಾಗಿವೆ. 8 ರಿಂದ 10 ಜನರು ಪ್ರತಿದಿನ ಆಸ್ಪತ್ರೆಗೆ ಆಗಮಿಸುತ್ತಿದ್ದಾರೆ.

ಮುಂಜಾಗ್ರತಾ ಕ್ರಮಗಳು

* ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳಿ
* ಮನೆಯ ಸುತ್ತ ಖಾಲಿ ಡಬ್ಬ, ಟಯರ್‌ ಮುಂತಾದವುಗಳಲ್ಲಿ ನೀರು ಎಲ್ಲದಂತೆ ಎಚ್ಚರ ವಹಿಸಿ
* ಸಂಪೂರ್ಣ ಮೈ ಮುಚ್ಚುವಂತೆ ಬಟ್ಟೆ ಧರಿಸಿ
* ಸೊಳ್ಳೆಗಳಿಂದ ಪಾರಾಗಲು ಕೈ-ಕಾಲುಗಳಿಗೆ ಲೋಶನ್ ಹಚ್ಚಿಕೊಳ್ಳಿ

English summary
Several cases of Chikungunya reported at Hubballi and Dharwad. The incessant rain is the reason behind the Chikungunya. According to Health Department officials the number of cases are more in city areas.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X