ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Hubballi Violence : ಹುಬ್ಬಳ್ಳಿ ಗಲಭೆ; ನಿಷೇಧಾಜ್ಞೆ ಏಪ್ರಿಲ್ 20ರ ತನಕ ವಿಸ್ತರಣೆ

|
Google Oneindia Kannada News

ಹುಬ್ಬಳ್ಳಿ, ಏಪ್ರಿಲ್ 17; ಯುವಕ ವಾಟ್ಸಪ್‌ನಲ್ಲಿ ಎಡಿಟ್‌ ಮಾಡಿದ ಪ್ರಚೋದನಾಕಾರಿ ಪೋಸ್ಟರ್‌ ಹಾಕಿದ್ದರಿಂದ ಹುಬ್ಬಳ್ಳಿಯಲ್ಲಿ ಗಲಭೆ ಉಂಟಾಗಿತ್ತು. ಸೆಕ್ಷನ್ 144 ಅನ್ವಯ ಜಾರಿಗೊಳಿಸಲಾದ ನಿಷೇಧಾಜ್ಞೆಯನ್ನು ಏಪ್ರಿಲ್ 20ರ ತನಕ ವಿಸ್ತರಣೆ ಮಾಡಲಾಗಿದೆ.

ಹುಬ್ಬಳ್ಳಿಯಲ್ಲಿ ಪೊಲೀಸರ ಮೇಲೆ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ 40 ಜನರನ್ನು ವಶಕ್ಕೆ ಪಡೆಯಲಾಗಿದೆ. ಘಟನೆ ಕುರಿತು 6 ಎಫ್‌ಐಆರ್ ದಾಖಲು ಮಾಡಲಾಗಿದೆ. ವಿಚಾರಣೆ ಬಳಿಕ ಬಂಧಿತರನ್ನು ಬಳ್ಳಾರಿ, ಬೆಳಗಾವಿಗೆ ಜೈಲಿಗೆ ಕಳಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

ಹುಬ್ಬಳ್ಳಿ ಗಲಭೆ; ಪ್ರಚೋದನಕಾರಿ ಸ್ಟೇಟಸ್, ಯುವಕನ ಬಂಧನಹುಬ್ಬಳ್ಳಿ ಗಲಭೆ; ಪ್ರಚೋದನಕಾರಿ ಸ್ಟೇಟಸ್, ಯುವಕನ ಬಂಧನ

ಸದ್ಯ ಹುಬ್ಬಳ್ಳಿಯ ಹಳೇ ಹುಬ್ಬಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈಗ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಲಾಭೂರಾಮ್‌ ಮಾತನಾಡಿ, "ಮುಂಜಾಗ್ರತಾ ಕ್ರಮವಾಗಿ ಏಪ್ರಿಲ್ 20ರ ತನಕ ನಿಷೇಧಾಜ್ಞೆ ಮುಂದುವರೆಸಲಾಗಿದೆ" ಎಂದರು.

ಹುಬ್ಬಳ್ಳಿ; ಪೊಲೀಸರ ಮೇಲೆ ಕಲ್ಲು ತೂರಾಟ, 144 ಸೆಕ್ಷನ್ ಜಾರಿಹುಬ್ಬಳ್ಳಿ; ಪೊಲೀಸರ ಮೇಲೆ ಕಲ್ಲು ತೂರಾಟ, 144 ಸೆಕ್ಷನ್ ಜಾರಿ

Section 144 Extended Till April 20th At Hubballi

ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ ಪ್ರಕರಣಲ್ಲಿ ಕೆಲವು ಯುವಕರನ್ನು ಸಹ ವಶಕ್ಕೆ ಪಡೆಯಲಾಗಿದೆ. ಅವರ ಕುಟುಂಬಸ್ಥರು, ತಾಯಂದಿರು ಪೊಲೀಸ್ ಠಾಣೆ ಮುಂದೆ ಬಂದು ಮಕ್ಕಳನ್ನು ಬಿಡುಗಡೆ ಮಾಡಿ ಎಂದು ಪೊಲೀಸರ ಜೊತೆ ವಾಗ್ವಾದ ನಡೆಸುತ್ತಿದ್ದಾರೆ.

ಹುಬ್ಬಳ್ಳಿ; ವೈಮಾನಿಕ ತರಬೇತಿ ಕೇಂದ್ರಕ್ಕೆ ಸೇರಲು ಅರ್ಹತೆಗಳು ಹುಬ್ಬಳ್ಳಿ; ವೈಮಾನಿಕ ತರಬೇತಿ ಕೇಂದ್ರಕ್ಕೆ ಸೇರಲು ಅರ್ಹತೆಗಳು

Section 144 Extended Till April 20th At Hubballi

ಈ ಹಿನ್ನಲೆಯಲ್ಲಿ ವಶಕ್ಕೆ ಪಡೆದವರ ವಿಚಾರಣೆಯನ್ನು ಶೀಘ್ರವೇ ಪೂರ್ಣಗೊಳಿಸಿ ಪೊಲೀಸರು ಅವರನ್ನು ಬಳ್ಳಾರಿ, ಬೆಳಗಾವಿ ಜೈಲಿಗೆ ಕಳಿಸಲು ತೀರ್ಮಾನಿಸಿದ್ದಾರೆ. ಸಿಸಿಟಿಟಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಇನ್ನೂ ಉಳಿದವರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.

ಪ್ರಹ್ಲಾದ್ ಜೋಶಿ ಪ್ರತಿಕ್ರಿಯೆ; ಶನಿವಾರ ರಾತ್ರಿ ಹುಬ್ಬಳ್ಳಿಯಲ್ಲಿ ನಡೆದ ಗಲಭೆ ಬಗ್ಗೆ ಧಾರವಾಡ ಸಂಸದ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಪ್ರತಿಕ್ರಿಯೆ ನೀಡಿದ್ದಾರೆ. "ನಿನ್ನೆ ಮಧ್ಯರಾತ್ರಿ ಹಳೇ ಹುಬ್ಬಳ್ಳಿಯಲ್ಲಿ ನಡೆದ ಗಲಭೆ ಖಂಡನೀಯ. ಈ ರೀತಿ ಕಾನೂನನ್ನು ಕೈಗೆತ್ತಿಕೊಂಡು ದೇವಸ್ಥಾನಗಳ ಮತ್ತು ಕಾನೂನು ಪಾಲನೆಗೆ ಇರುವ ಪೋಲಿಸ ಠಾಣೆಗಳ ಮೇಲೆ, ಪೋಲಿಸರ ಮೇಲೆ ಮತ್ತು ಪೋಲಿಸ ವಾಹನಗಳ ಮೇಲೆ ಪ್ರತಿಭಟನೆ ಸ್ವರೂಪದಲ್ಲಿ ಹಿಂಸಾತ್ಮಕ ದಾಳಿ ಮಾಡಿರುವದು ಅಕ್ಷಮ್ಯ ಅಪರಾಧ" ಎಂದು ಫೇಸ್ ಬುಕ್ ಪೋಸ್ಟ್ ಹಾಕಿದ್ದಾರೆ.

"ಈ ಗಲಭೆಯ ತನಿಖೆ ಮಾಡಿ ಸರಕಾರ ಸಮಾಜದಲ್ಲಿ ಅಶಾಂತಿಯನ್ನುಂಟು ಮಾಡಿದವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸುತ್ತೇನೆ. ಇದೊಂದು ಪೂರ್ವನಿಯೋಜಿತ ಕೃತ್ಯ ಎಂಬುದರ ಬಗ್ಗೆಯೂ ತನಿಖೆಯನ್ನು ಸರ್ಕಾರ ಮಾಡಿ ಈ ರೀತಿ ಘಟನೆ ಮರಕಳಿಸದಂತೆ ಜಾಗೃತಿ ವಹಿಸಬೇಕು ಮತ್ತು ಪ್ರತಿಯೋಬ್ಬರು ನಗರದಲ್ಲಿ ಶಾಂತಿ, ಸಾಮರಸ್ಯವನ್ನು ಕಾಪಾಡಬೇಕೆಂದು ವಿನಂತಿಸುತ್ತೇನೆ" ಎಂದು ಸಚಿವರು ಹೇಳಿದ್ದಾರೆ.

ಅಘೋಷಿತ ಬಂದ್; ಶನಿವಾರ ರಾತ್ರಿ ಗಲಭೆ ನಡೆದ ಪ್ರದೇಶದಲ್ಲಿ ಭಾನುವಾರ ಅಘೋಷಿತ ಬಂದ್ ವಾತಾವರಣ ನಿರ್ಮಾಣವಾಗಿದೆ. ಜನರು ಭಯದಿಂದ ಇಂದು ಅಂಗಡಿಗಳನ್ನು ತೆರೆದಿಲ್ಲ. ಈ ಘಟನೆ ಪೂರ್ವ ನಿಯೋಜಿತ ಎಂದು ಎಲ್ಲರೂ ಅಭಿಪ್ರಾಯಪಡುತ್ತಿದ್ದಾರೆ.

ಏಕಾಏಕಿ ಇಷ್ಟು ಪ್ರಮಾಣದ ಕಲ್ಲುಗಳು ಸಿಗಲು ಸಾಧ್ಯವಿಲ್ಲ. ಇದೊಂದು ಪೂರ್ವ ನಿಯೋಜಿತ ಕೃತ್ಯವಾಗಿದ್ದು, ಕಲ್ಲುಗಳನ್ನು ಮೊದಲೇ ಸಂಗ್ರಹ ಮಾಡಲಾಗಿತ್ತು ಎಂದು ಪೊಲೀಸರು ಸಹ ಅನುಮಾನಿಸಿದ್ದಾರೆ. ಪ್ರಕರಣದ ಕುರಿತು ಪೊಲೀಸರ ತನಿಖೆ ಮುಂದುವರೆದಿದೆ.

ಅಭಿಷೇಕ್ ಹಿರೇಮಠ ಎಂಬ ಯುವಕ ವಾಟ್ಸಪ್‌ನಲ್ಲಿ ಎಡಿಟ್‌ ಮಾಡಿದ ಪ್ರಚೋದನಾಕಾರಿ ಪೋಸ್ಟರ್‌ ಸ್ಟೇಟಸ್ ಹಾಕಿದ್ದು ಗಲಭೆಗೆ ಕಾರಣವಾಯಿತು. ಆಸ್ಪತ್ರೆ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ. ಬಳಿಕ ಪೊಲೀಸರ ಮೇಲೆ ಕಲ್ಲು ತೂರಾಟ ನಡೆದಿದ್ದು, ನಾಲ್ವರು ಗಾಯಗೊಂಡಿದ್ದಾರೆ.

ಮಸೀದಿ ಮೇಲೆ ಭಗವಾಧ್ವಜ ಹಾರಿಸಿದ ಎಡಿಟ್ ಮಾಡಿದ ಪೋಸ್ಟರ್ ಸ್ಟೇಟಸ್ ಹಾಕಿಕೊಂಡಿದ್ದ ಅಭಿಷೇಕ್ ತಲೆ ಕೆಟ್ಟರೆ ಇಲ್ಲೂ ಭಗವಾಧ್ವಜ ಹಾರಿಸುವೆ. ಜೈ ಶ್ರೀರಾಮ್, ಹಿಂದೂ ಸಾಮ್ರಾಟ್ ಎಂದು ಬರೆದುಕೊಂಡಿದ್ದ. ಸ್ಟೇಟಸ್ ಹಾಕಿಕೊಂಡಿದ್ದ ಯುವಕನನ್ನು ಬಂಧಿಸಲಾಗಿದೆ.

ಈ ವಿವಾದಿತ ಸ್ಟೇಟಸ್ ಹುಬ್ಬಳ್ಳಿ ಅಂಜುಮನ್ ಸಮಿತಿಗೆ ತಿಳಿದ ಬಳಿಕ ಹಳೇ ಹುಬ್ಬಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜನರು ಗುಂಪು ಸೇರಿದ್ದರು. ಆಗ ಪೊಲೀಸರು ಮತ್ತು ಒಂದು ಕೋವಿನ ಜನರ ನಡುವೆ ವಾಗ್ವಾದ ನಡೆದಿತ್ತು. ಬಳಿಕ ಕಲ್ಲು ತೂರಾಟವಾಗಿತ್ತು.

English summary
Labhu Ram police commissioner of Hubballi-Dharwada said that section 144 extended in Hubballi till 20th April. Section 144 was imposed after mob pelted stones on police on Saturday night.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X