ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Just in: ಹುಬ್ಬಳ್ಳಿಯಿಂದ ವಾರಣಾಸಿಗೆ ವಿಶೇಷ ರೈಲು

|
Google Oneindia Kannada News

ಹುಬ್ಬಳ್ಳಿ, ಆ.9: ಹೆಚ್ಚುವರಿ ಸಂಚಾರ ದಟ್ಟಣೆಯನ್ನು ನಿಯಂತ್ರಿಸಲು ಬೇಡಿಕೆ ಮೇರೆಗೆ ಹುಬ್ಬಳ್ಳಿಯಿಂದ ವಾರಣಾಸಿಗೆ ಒಂದೇ ಮಾರ್ಗದ ವಿಶೇಷ ಎಕ್ಸ್‌ಪ್ರೆಸ್ ರೈಲು ಸಂಚಾರವನ್ನು ನೈರುತ್ಯ ರೈಲ್ವೆ ಒದಗಿಸಿದೆ.

ರೈಲು ಸಂಖ್ಯೆ 07305 ಶ್ರೀ ಸಿದ್ದಾರೂಡ ಸ್ವಾಮಿ ಹುಬ್ಬಳ್ಳಿ- ಬನಾರಸ್ ವಿಶೇಷ ಎಕ್ಸ್‌ಪ್ರೆಸ್ ರೈಲು ಆ.10ರಂದು ಸಂಜೆ 6.15ಕ್ಕೆ ಹುಬ್ಬಳ್ಳಿಯ ಶ್ರೀ ಸಿದ್ಧಾರೂಡ ಸ್ವಾಮೀಜಿ ನಿಲ್ದಾಣದಿಂದ ಹೊರಟು ಆ.12ರಂದು ಬೆಳಗ್ಗೆ 8.40ಕ್ಕೆ ಬನಾರಸ್ ನಿಲ್ದಾಣ ತಲುಪುತ್ತದೆ.

ಈ ರೈಲು ಗದಗ, ಬಾದಾಮಿ, ಬಾಗಲಕೋಟೆ, ಆಲಮಟ್ಟಿ, ವಿಜಯಪುರ, ಸೊಲ್ಲಾಪುರ, ದೌಂಡ, ಅಹ್ಮದ್‌ನಗರ, ಕೋಪರಗಾವ್, ಮನ್ಮಾಡ್, ಭೂಸವಾಲ್, ಖಂಡ್ವಾ, ಇಟಾರ್ಸಿ, ಪಿಪರಿಯಾ, ನರಸಿಂಗಪುರ್, ಜಬಲ್ಪುರ್, ಕಟನಿ ಜಂಕ್ಷನ್, ಮೈಹಾರ, ಸತನಾ, ಮಾಣಿಕಪುರ, ಪ್ರಯಾಗರಾಜ್, ಮಿರ್ಜಾಪುರ ಮೂಲಕ ವಾರಣಾಸಿ ತಲುಪುತ್ತದೆ.

Running of one way express special train from Hubballi to varanasi

ಈ ರೈಲಿನಲ್ಲಿ ಐದು ಹವಾನಿಯಂತ್ರಿ 3ಟೈರ್ ಬೋಗಿಗಳು, 11 ಸ್ಲೀಪರ್ ಬೋಗಿಗಳು, 4 ಸಾಮಾನ್ಯ ದ್ವಿತೀಯ ದರ್ಜೆ ಬೋಗಿಗಳು, ಎರಡು ದಿವ್ಯಾಂಗ ಸ್ನೇಹಿ ಕಂಪಾರ್ಟ್‌ಮೆಂಟ್‌ಗಳನ್ನು ಒಳಗೊಂಡಿರುತ್ತದೆ ಎಂದು ರೈಲ್ವೆ ಇಲಾಖೆ ಪ್ರಕಟಣೆ ತಿಳಿಸಿದೆ.

Recommended Video

Arvind Kejriwal: ಪುಕ್ಸಟ್ಟೆ ಕೊಡಿ ಇಲ್ಲದಿದ್ರೆ ಆಮ್ ಆದ್ಮಿಗೆ ದಾರಿಬಿಡಿ | *Politics | OneIndia Kannada

English summary
South Western Railway has decided to run Train No. 07305 Shree Siddharoodha Swamiji Hubballi – Banaras One-way Express Special on train on demand (TOD) to clear extra rush.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X