ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಿರಹಟ್ಟಿ ಜಾತ್ರೆ ನಂತರ ಮುಂದಿನ ಹೋರಾಟದ ಬಗ್ಗೆ ತೀರ್ಮಾನ: ದಿಂಗಾಲೇಶ್ವರ ಶ್ರೀ

By ಹುಬ್ಬಳ್ಳಿ ಪ್ರತಿನಿಧಿ
|
Google Oneindia Kannada News

ಹುಬ್ಬಳ್ಳಿ, ಮೇ 12: ಮುಂದಿನ ಹೋರಾಟದ ಬಗ್ಗೆ ಜಾತ್ರೆ ನಂತರದಲ್ಲಿ ನಿರ್ಧರಿಸಲಾಗುವುದು ಎಂದು ಫಕೀರ ದಿಂಗಾಲೇಶ್ವರ ಶ್ರೀಗಳು ಹೇಳಿದರು. ಅವರು ಈ ಕುರಿತು ಗದಗ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ ಅವರು, ಮೇ.16 ಮತ್ತು 17ಕ್ಕೆ ಶಿರಹಟ್ಟಿ ಮಠದ ಜಾತ್ರೆ ಇರುವುದರಿಂದ ಈಗ ನಾವು ಜಾತ್ರೆಯ ತಯಾರಿಯಲ್ಲಿದ್ದೇವೆ. ಜಾತ್ರೆಯ ನಂತರ ಭಾವೈಕ್ಯತೆ ವಿಚಾರವಾಗಿ ಮತ್ತೇ ಪ್ರಸ್ತಾಪಿಸುತ್ತೇವೆ ಎಂದರು.

ಜನ ಪ್ರಜ್ಞಾವಂತರಿದ್ದಾರೆ: ಇನ್ನು ಸಚಿವ ಸಿ.ಸಿ.ಪಾಟೀಲರ ವಿರುದ್ಧ ಧರಣಿ ವಿಷಯಕ್ಕೆ ಸಂಬಂಧಿಸಿದಂತೆ ಭಕ್ತರ ಕೆಲವು ಜೊತೆಗೆ ಒಂದು ಸುತ್ತಿನ ಸಭೆ ಮಾಡಿದ್ದೇನೆ. ಸಿ.ಸಿ.ಪಾಟೀಲರ ವಿರುದ್ಧ ಸ್ವಾಮಿಗಳು ಪ್ರಚಾರ ಮಾಡಿ, ಎಲೆಕ್ಷನ್‌ನಲ್ಲಿ
ಸೋಲಿಸಲಿದ್ದಾರೆ ಅನ್ನೋ ವದಂತಿಗೆ ಏನು ಹೇಳಬೇಕು? ಸ್ವಾಮಿಗಳು ಯಾರನ್ನೂ ಗೆಲ್ಲಿಸಲು ಸೋಲಿಸಲು ಹೋಗಲ್ಲ.

ಜನ ಪ್ರಜ್ಞಾವಂತರಿದ್ದಾರೆ. ಯಾರನ್ನು ಸೋಲಿಸಬೇಕು, ಯಾರನ್ನು ಗೆಲ್ಲಿಸಬೇಕು ಎನ್ನುವ ಬಗ್ಗೆ ಜನರೇ ತೀರ್ಮಾನ ಮಾಡುತ್ತಾರೆ ಎಂದರುಜಾತ್ರೆ ನಂತ ಎರಡನೇ ಸುತ್ತನ ಸಭೆ ನಡೆಸಿ ಹೋರಾಟದ ಬಗ್ಗೆ ನಿರ್ಧಾರ ಕೈಗೊಳ್ಳಲಿದ್ದೇನೆ ಎಂದರು.

Protest against CC Patill will be decided after Shiratti Jatra: Dingaleshwar Seer

ಜಾತ್ರೆ ನಂತರ ಎರಡನೇ ಸುತ್ತಿನ ಸಭೆ ನಡೆಸಿ ಹೋರಾಟದ ಬಗ್ಗೆ ನಿರ್ಧಾರ ಕೈಗೊಳ್ಳಲಿದ್ದೇನೆ ಎಂದರು. ಫಕೀರ ದಿಂಗಾಲೇಶ್ವರ ಶ್ರೀಗಳು ಕೆಲ ದಿನಗಳ ಹಿಂದಷ್ಟೆ ರಾಜ್ಯದಲ್ಲಿ ನಡೆದಿದೆ ಎನ್ನಲಾದ ಪರ್ಸೆಂಟೇಜ್ ವ್ಯವಹಾರದ ಬಗ್ಗೆ ಹಾಗೂ ಮುಖ್ಯಂಮಂತ್ರಿ ಬೊಮ್ಮಾಯಿ ಅವರು ಲಿಂ.ತೋಂಟದ ಸಿದ್ಧಲಿಂಗ ಶ್ರೀಗಳ ಜನ್ಮ ದಿನವನ್ನು ಭಾವೈಕ್ಯ ದಿನವಾಗಿ ಘೋಷಿಸಿದ ವಿಚಾರಕ್ಕೆ ವಿರೋಧ ವ್ಯಕ್ತಪಡಿಸಿದ್ದರು.

English summary
Protest against CC Patill will be decided after Shiratti Jatra said Dingaleshwar Seer. Shirahatti Jatra is scheduled on May 16 and 17.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X