• search
 • Live TV
ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕಿಮ್ಸ್ ಆಸ್ಪತ್ರೆಗೆ ಖಾಸಗಿ ಕಂಪನಿಯಿಂದ 200 ವೆಂಟಿಲೇಟರ್ ಕೊಡುಗೆ

By Lekhaka
|

ಹುಬ್ಬಳ್ಳಿ, ನವೆಂಬರ್ 05: ಕೊರೊನಾ ಪ್ರಕರಣಗಳು ಹೆಚ್ಚುತ್ತಿದ್ದ ಸಮಯದಲ್ಲಿ ಉತ್ತಮ ಸೇವೆ ನೀಡಿ ಮೆಚ್ಚುಗೆ ಪಡೆದಿದ್ದ ಕಿಮ್ಸ್ ಆಸ್ಪತ್ರೆಯಲ್ಲಿ ನಂತರ ವೆಂಟಿಲೇಟರ್ ಕೊರತೆ ಸಮಸ್ಯೆ ಬಹುವಾಗಿ ಕಾಡಿತ್ತು. ಈ ಕಾರಣವಾಗಿ ಪ್ರತಿದಿನವೂ ಸಾವನ್ನಪ್ಪುವವರ ಸಂಖ್ಯೆಯೂ ಹೆಚ್ಚಿತ್ತು. ಆದರೆ ಈ ಸಮಸ್ಯೆಗೀಗ ಅಂತ್ಯ ಸಿಕ್ಕಿದೆ.

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಮನವಿ ಮೇರೆಗೆ ಖಾಸಗಿ ಕಂಪನಿ ಏಕಸ್ ಕಿಮ್ಸ್ ಗೆ 200 ಪೋರ್ಟೆಬಲ್ ವೆಂಟಿಲೇಟರ್ ಗಳನ್ನು ನೀಡಿದೆ. ಜಿಲ್ಲೆಯಲ್ಲಿ ಸದ್ಯಕ್ಕೀಗ ಕೊರೊನಾ ಪ್ರಕರಣಗಳ ಸಂಖ್ಯೆ ಇಳಿಮುಖವಾಗಿದೆ. ಆದರೂ ವೆಂಟಿಲೇಟರ್ ಗಳ ಅಗತ್ಯವಂತೂ ಇದ್ದೇ ಇದೆ. ಪ್ರಸ್ತುತ ಬೇರೆ ರೋಗಿಗಳಿಗೆ ಈ ವೆಂಟಿಲೇಟರ್ ಗಳನ್ನು ಬಳಕೆ ಮಾಡಿಕೊಳ್ಳಲು ಕಿಮ್ಸ್ ತೀರ್ಮಾನಿಸಿದೆ. ಜೊತೆಗೆ ಮುಂದೆ ದಾಖಲಾಗುವ ಸೋಂಕಿತರಿಗೆ ವೆಂಟಿಲೇಟರ್ ಸಮಸ್ಯೆ ಇರುವುದಿಲ್ಲ.

ಹುಬ್ಬಳ್ಳಿ ಕಿಮ್ಸ್ ನ 165ಕ್ಕೂ ಹೆಚ್ಚು ವೈದ್ಯಕೀಯ ಸಿಬ್ಬಂದಿಗೆ ಕೊರೊನಾ

ಕೊರೊನಾ ಸೋಂಕು ಕಾಣಿಸಿಕೊಂಡ ಆರಂಭಿಕ ದಿನಗಳಲ್ಲಿ ಕಿಮ್ಸ್ ನಲ್ಲಿ ವೆಂಟಿಲೇಟರ್ ಕೊರತೆ ಕಾಣಿಸಿಕೊಂಡಿತ್ತು. ಜುಲೈ ಹಾಗೂ ಆಗಸ್ಟ್ ತಿಂಗಳಿನಲ್ಲಿ ರೋಗಿಗಳಿಗೆ ಬೆಡ್ ಗಳು ಕೂಡ ಸಿಗುತ್ತಿರಲಿಲ್ಲ. ಈ ಕುರಿತು ಕಿಮ್ಸ್ ಆಡಳಿತ ಮಂಡಳಿ ಸರ್ಕಾರದ ಗಮನಕ್ಕೆ ತಂದರೂ ಸೂಕ್ತ ಸಮಯದಲ್ಲಿ ವೆಂಟಿಲೇಟರ್ ನೀಡಲು ಸಾಧ್ಯವಾಗಿರಲಿಲ್ಲ. ಇದರಿಂದ ಸರಣಿ ಸಾವುಗಳೇ ಸಂಭವಿಸಿದ್ದವು. ಸದ್ಯಕ್ಕೆ ಈ ಸಮಸ್ಯೆಗೆ ಮುಕ್ತಿ ಸಿಕ್ಕಿದೆ. ಆದರೆ ಈ ಕೆಲಸ ಮುಂಚಿತವಾಗಿ ಆಗಿದ್ದರೆ ಇನ್ನಷ್ಟು ಜೀವಗಳನ್ನು ಉಳಿಸಬಹುದಿತ್ತು.

ಕೋವಿಡ್ ಸಂದರ್ಭದಲ್ಲಿ ಹಲವು ಕಾರ್ಪೊರೇಟ್ ಕಂಪನಿಗಳು ಸಾರ್ವಜನಿಕ ಹೊಣೆಗಾರಿಕೆ ನಿಧಿಯಡಿ ಸಹಾಯ ಮಾಡಿವೆ. ಕೋಲ್ ಇಂಡಿಯಾ 5 ಕೋಟಿ ರೂ, ಐಒಸಿಎಲ್ 50 ಲಕ್ಷ, ಏಕಸ್ ನಾಲ್ಕು ವೆಂಟಲೇಟರ್ ಗಳನ್ನು ಕಿಮ್ಸ್ ಗೆ ನೀಡಿತ್ತು. ಇದೀಗ ಸಂಸ್ಥೆ ತಾನೇ ತಯಾರಿಸಿರುವ 200 ಪೋರ್ಟೆಬಲ್ ವೆಂಟಿಲೇಟರ್ ಗಳನ್ನು ನೀಡಿದೆ ಎಂದು ಪ್ರಹ್ಲಾದ್ ಜೋಶಿ ತಿಳಿಸಿದ್ದಾರೆ.

ಜಿಲ್ಲೆಯ ಕೊರೊನಾ ಪ್ರಕರಣಗಳು: ಹುಬ್ಬಳ್ಳಿಯಲ್ಲಿ ನವೆಂಬರ್ 4ರ ವರದಿಯಂತೆ ಒಟ್ಟು ಸೋಂಕಿತರ ಸಂಖ್ಯೆ 20865 ಆಗಿದ್ದು, ಇದರಲ್ಲಿ 19948 ಮಂದಿ ಗುಣಮುಖರಾಗಿದ್ದಾರೆ. 346 ಸಕ್ರಿಯ ಪ್ರಕರಣಗಳಿದ್ದು, ಜಿಲ್ಲೆಯಲ್ಲಿ ಒಟ್ಟು 571 ಮಂದಿ ಕೊರೊನಾ ಸೋಂಕಿನಿಂದಾಗಿ ಮೃತಪಟ್ಟಿದ್ದಾರೆ.

   Vinay Kulkarni ಬಂಧನ ವಿಚಾರ, BJP ಅಧಿಕಾರದ ದುರ್ಬಳಕೆ ಮಾಡಿಕೊಳ್ಳುತ್ತಿದೆ DK Shivakumar | Oneindia Kannada

   English summary
   At the request of Union Minister Prahlad Joshi, private company has provided 200 portable ventilators to KIMS
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X