ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹುಬ್ಬಳ್ಳಿ ರೈಲ್ವೆ ನಿಲ್ದಾಣದಿಂದ ಪ್ರೀ-ಪೇಯ್ಡ್ ಆಟೋ ಸೇವೆ ಆರಂಭ

|
Google Oneindia Kannada News

ಹುಬ್ಬಳ್ಳಿ, ಜನವರಿ 12 : ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ಪ್ರೀ-ಪೇಯ್ಡ್ ಆಟೋ ಸೇವೆಯನ್ನು ಆರಂಭಿಸಲಾಗಿದೆ. ರೈಲ್ವೆ ನಿಲ್ದಾಣಕ್ಕೆ ಬರುವ ಪ್ರಯಾಣಿಕರಿಂದ ಕೆಲವು ಆಟೋ ಚಾಲಕರು 150 ರಿಂದ 200 ರೂ. ದರ ಪಡೆದು ಶೋಷಣೆ ನಡೆಸುತ್ತಿದ್ದರು.

ಬೆಂಗಳೂರು ಮೂಲದ ಪ್ರಿ-ಪೇಯ್ಡ್ ಆಟೋ ಮತ್ತು ಟ್ಯಾಕ್ಸಿ ಸರ್ವಿಸ್ (ಪಿಎಎಟಿಎಸ್) ಈ ಸೌಲಭ್ಯವನ್ನು ಆರಂಭಿಸಿದೆ. ಸ್ಥಳೀಯ ಮತ್ತು ರೈಲ್ವೆ ಪೊಲೀಸರ ಉಸ್ತುವಾರಿಯಲ್ಲಿ ಪ್ರೀ-ಪೇಯ್ಡ್ ಆಟೋ ಸೇವೆಯ ಮುಂದುವರೆಯಲದೆ.

ಆಟೋ ಚಾಲಕನ ಅಭಿಮಾನಕ್ಕೆ ಕರಗಿದ ಡಿ. ಕೆ. ಶಿವಕುಮಾರ್!ಆಟೋ ಚಾಲಕನ ಅಭಿಮಾನಕ್ಕೆ ಕರಗಿದ ಡಿ. ಕೆ. ಶಿವಕುಮಾರ್!

ಪ್ರಾಯೋಗಿಕವಾಗಿ ಬೆಳಗ್ಗೆ 5 ರಿಂದ ರಾತ್ರಿ 10 ರ ತನಕ ಪ್ರೀ-ಪೇಯ್ಡ್ ಆಟೋ ಸೇವೆ ಲಭ್ಯವಿರುತ್ತದೆ. 1.6 ಕಿ.ಮೀ.ಗೆ 28 ರೂಪಾಯಿ ಚಾರ್ಜ್ ಮಾಡುತ್ತಾರೆ. ನಗರದ ಎಲ್ಲಾ ಭಾಗಗಳು ಸೇರಿದಂತೆ ಎಸ್‌ಡಿಎಂ ಮೆಡಿಕಲ್ ಕಾಲೇಜ್ ತನಕ ಪ್ರೀ-ಪೇಯ್ಡ್ ಆಟೋದಲ್ಲಿ ಸಂಚಾರ ನಡೆಸಬಹುದು.

ಹುಬ್ಬಳ್ಳಿ ಹೋಟೆಲ್ ನಲ್ಲಿ 60ರೂ ಬಿಲ್ ಗೆ ನಡೆಯಿತು ಮಾರಾಮಾರಿಹುಬ್ಬಳ್ಳಿ ಹೋಟೆಲ್ ನಲ್ಲಿ 60ರೂ ಬಿಲ್ ಗೆ ನಡೆಯಿತು ಮಾರಾಮಾರಿ

Hubballi Railway Station

ಪ್ರಯಾಣಿಕರಿಂದ ಸಿಗುವ ಪ್ರತಿಕ್ರಿಯೆ ನೋಡಿಕೊಂಡು ಸೇವೆಯನ್ನು 24*7 ವಿಸ್ತರಣೆ ಮಾಡಲಾಗುತ್ತದೆ. ಮುಂಜಾನೆ ಮತ್ತು ರಾತ್ರಿ ರೈಲ್ವೆ ನಿಲ್ದಾಣಕ್ಕೆ ಆಗಮಿಸುವ ಪ್ರಯಾಣಿಕರು ಆಟೋಗಳಿಗೆ ಹೆಚ್ಚಿನ ಹಣ ಕೊಟ್ಟು ಸಂಚಾರ ನಡೆಸಬೇಕಿತ್ತು.

ತಾಳಗುಪ್ಪ-ಹುಬ್ಬಳ್ಳಿ ರೈಲು ಮಾರ್ಗದ ಸಮೀಕ್ಷೆಗೆ ಒಪ್ಪಿಗೆ ತಾಳಗುಪ್ಪ-ಹುಬ್ಬಳ್ಳಿ ರೈಲು ಮಾರ್ಗದ ಸಮೀಕ್ಷೆಗೆ ಒಪ್ಪಿಗೆ

ರಾತ್ರಿ ಮತ್ತು ಮುಂಜಾನೆ ರೈಲ್ವೆ ನಿಲ್ದಾಣಕ್ಕೆ ಆಗಮಿಸುವ ಪ್ರಯಾಣಿಕರನ್ನು ಆಟೋ ಚಾಲಕರು ಶೋಷಣೆ ಮಾಡುತ್ತಿದ್ದರು. ಇದನ್ನು ಕಂಡಿದ್ದ ವಿಧಾನ ಪರಿಷತ್ ಸದಸ್ಯ, ಜೆಡಿಎಸ್ ನಾಯಕ ಬಸವರಾಜ ಹೊರಟ್ಟಿ ಪ್ರೀ ಪೇಯ್ಡ್ ಆಟೋ ಸೇವೆಯನ್ನು ಆರಂಭಿಸುವಂತೆ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಅವರನ್ನು ಒತ್ತಾಯಿಸಿದ್ದರು.

English summary
Prepaid auto service started at Hubballi railway station. People to pay 28 Rs for 1.6 Km. Service available from morning 5 am to night 10 pm.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X