• search
  • Live TV
ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕರ್ನಾಟಕಕ್ಕೆ 2 ರಿಂದ 3 ವಂದೇ ಭಾರತ್ ರೈಲಿಗಾಗಿ ಕೇಂದ್ರ ಸಚಿವರ ಬೇಡಿಕೆ

|
Google Oneindia Kannada News

ಹುಬ್ಬಳ್ಳಿ, ಸೆಪ್ಟೆಂಬರ್ 22; ಸದ್ಯ ವಂದೇ ಭಾರತ್ ಸೆಮಿ-ಹೈಸ್ಪೀಡ್ ರೈಲಿನ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ. ನೈಋತ್ಯ ರೈಲ್ವೆ ಬೆಂಗಳೂರು ಸಂಪರ್ಕಿಸುವ ಮೂರು ಮಾರ್ಗದಲ್ಲಿ ವಂದೇ ಭಾರತ್ ರೈಲು ಓಡಿಸಲು ಪ್ರಸ್ತಾವನೆ ಸಿದ್ಧಪಡಿಸಿದೆ. ರೈಲ್ವೆ ಮಂಡಳಿಗೆ ಸಹ ಇದನ್ನು ಸಲ್ಲಿಕೆ ಮಾಡಲಾಗಿದೆ.

ಧಾರವಾಡದ ಸಂಸದ ಮತ್ತು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮುಂದಿನ ದಿನಗಳಲ್ಲಿ ಕರ್ನಾಟಕಕ್ಕೆ 2 ರಿಂದ 3 ವಂದೇ ಭಾರತ್ ರೈಲನ್ನು ನೀಡಿ ಎಂದು ಕೇಂದ್ರದ ಕಲ್ಲಿದ್ದಲ್ಲು ಮತ್ತು ರೈಲ್ವೆ ಖಾತೆಯ ರಾಜ್ಯ ಸಚಿವ ರಾವ್ ಸಾಹೆಬ್ ದಾದಾರವ್ ಪಟೀಲ ದಾನ್ವೆ ಮುಂದೆ ಬೇಡಿಕೆ ಇಟ್ಟಿದ್ದಾರೆ.

Breaking; ಕಲಬುರಗಿ-ಕೊಲ್ಹಾಪುರ ರೈಲಿಗೆ ಹಸಿರು ನಿಶಾನೆ, ವೇಳಾಪಟ್ಟಿ Breaking; ಕಲಬುರಗಿ-ಕೊಲ್ಹಾಪುರ ರೈಲಿಗೆ ಹಸಿರು ನಿಶಾನೆ, ವೇಳಾಪಟ್ಟಿ

ಕಲಬುರಗಿ-ಶ್ರೀ ಛತ್ರಪತಿ ಶಾಹು ಮಹಾರಾಜ್ ಟರ್ಮಿನಸ್ ಕೊಲ್ಹಾಪುರ ನಡುವಿನ ನೂತನ ಎಕ್ಸ್‌ಪ್ರೆಸ್ ರೈಲಿಗೆ ಹಸಿರು ನಿಶಾನೆ ತೋರುವ ಕಾರ್ಯಕ್ರಮದಲ್ಲಿ ಉಭಯ ಕೇಂದ್ರ ಸಚಿವರ ಪಾಲ್ಗೊಂಡಿದ್ದರು. ಈ ಕಾರ್ಯಕ್ರಮದ ವೇದಿಕೆಯಲ್ಲಿಯೇ ಕಲ್ಲಿದ್ದಲು, ಗಣಿ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ವಂದೇ ಭಾರತ ರೈಲಿಗಾಗಿ ಬೇಡಿಕೆ ಸಲ್ಲಿಸಿದರು.

ತಿರುಪತಿ-ಬೆಂಗಳೂರು 'ವಂದೇ ಭಾರತ್' ವಿಶೇಷ ರೈಲು ಸೇವೆ ತಿರುಪತಿ-ಬೆಂಗಳೂರು 'ವಂದೇ ಭಾರತ್' ವಿಶೇಷ ರೈಲು ಸೇವೆ

ಪ್ರಹ್ಲಾದ್ ಜೋಶಿ ಮಾತನಾಡಿ, "ಸ್ವಚ್ಛತೆ, ಬಯೋ ಟಾಯಲೆಟ್, ವೈಫೈ ವ್ಯವಸ್ಥೆ, ಮೆಟ್ರೋ ರೈಲಿಗೆ ಸಂಪರ್ಕ ಹೀಗೆ ಒಟ್ಟಾರೆ ವಿಶ್ವ ದರ್ಜೆಯ ಸೇವೆಯನ್ನು ರೈಲ್ವೆ ಇಲಾಖೆ ನೀಡುತ್ತಿದೆ. ಪ್ರತಿ ವ್ಯಕ್ತಿಯ ಸಾರಿಗೆ ಸಂಪರ್ಕದ ವೆಚ್ಚ ಕಡಿಮೆಗೊಳಿಸುವುದೇ ನಮ್ಮ ಗುರಿಯಾಗಿದೆ. ಕರ್ನಾಟಕಕ್ಕೆ ಮುಂದಿನ ದಿನದಲ್ಲಿ 2 ರಿಂದ 3 ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ನೀಡಬೇಕೆಂದು" ಮನವಿ ಮಾಡಿದರು.

75 ವಂದೇ ಭಾರತ್ ವೇಗದ ರೈಲುಗಳ ಸಂಚಾರ75 ವಂದೇ ಭಾರತ್ ವೇಗದ ರೈಲುಗಳ ಸಂಚಾರ

ಪ್ರಹ್ಲಾದ್ ಜೋಶಿ ಬೇಡಿಕೆ ಏನು?

ಪ್ರಹ್ಲಾದ್ ಜೋಶಿ ಬೇಡಿಕೆ ಏನು?

ಹುಬ್ಬಳ್ಳಿ-ಬೆಂಗಳೂರು ನಡುವೆ ವಂದೇ ಭಾರತ್ ರೈಲು ಓಡಿಸುವಂತೆ ಕೇಂದ್ರ ಸಚಿವ, ಧಾರವಾಡ ಸಂಸದ ಪ್ರಹ್ಲಾದ್ ಜೋಶಿ ಮನವಿ ಮಾಡಿದ್ದಾರೆ. ಹುಬ್ಬಳ್ಳಿ ಹಾಗೂ ಬೆಂಗಳೂರು ನಡುವೆ ಜೋಡಿ ಮಾರ್ಗ ಇರುವುದರಿಂದ ವಂದೇ ಭಾರತ್ ರೈಲು ಓಡಿಸಲು ಅನೂಕೂಲಕರವಾದ ವಾತಾವರಣವಿದೆ.

ಹುಬ್ಬಳ್ಳಿ-ಬೆಂಗಳೂರು ನಡುವೆ ದಕ್ಷಿಣ ಹುಬ್ಬಳ್ಳಿ ಮತ್ತು ಹಾವೇರಿ ನಡುವೆ 45 ಕಿ. ಮೀ. ದೂರದಲ್ಲಿ ಹಳಿ ದ್ವಿಗುಣಗೊಳಿಸುವಿಕೆ ಬಾಕಿ ಇದೆ. ಈ ವರ್ಷದ ಅಂತ್ಯಕ್ಕೆ ಈ ಕಾಮಗಾರಿಯೂ ಪೂರ್ಣಗೊಳ್ಳಲಿದೆ ಎಂದು ನಿರೀಕ್ಷಿಸಲಾಗಿದೆ.

400 ವಂದೇ ಭಾರತ್ ರೈಲು ಸಂಚಾರ

400 ವಂದೇ ಭಾರತ್ ರೈಲು ಸಂಚಾರ

ಕೇಂದ್ರದ ಕಲ್ಲಿದ್ದಲ್ಲು ಮತ್ತು ರೈಲ್ವೆ ಖಾತೆಯ ರಾಜ್ಯ ಸಚಿವ ರಾವ್ ಸಾಹೆಬ್ ದಾದಾರವ್ ಪಟೀಲ ದಾನ್ವೆ ಮಾತನಾಡಿ, "2014ರ ನಂತರ ಭಾರತೀಯ ರೈಲ್ವೆಯಲ್ಲಿ ತುಂಬಾ ಬದಲಾವಣೆಯಾಗಿದೆ. ಸ್ವಚ್ಛತೆ, ವೇಗ, ಸುರಕ್ಷತೆಗೆ ಆದ್ಯತೆ ನೀಡಿ ಪ್ರಯಾಣಿಕ ಸ್ನೇಹಿ ವಾತಾವರಣಗೊಳಿಸಿದೆ. ಈ ವರ್ಷ 400 ವಂದೇ ಭಾರತ್ ರೈಲು ಓಡಿಸಲಾಗುತ್ತಿದೆ" ಎಂದರು.

"ಬುಲೆಟ್ ಟ್ರೇನ್, ಬ್ರಾಡಗೇಜ್ ಲೈನ್, ಎಲೆಕ್ಟ್ರಿಫಿಕೇಶನ್ ಕಾರ್ಯ ಭರದಿಂದ ಸಾಗಿದೆ. 2030 ರೊಳಗೆ ಬ್ರಾಡಗೇಜ್‍ನ ಎಲ್ಲಾ ಹಳಿಗೆ ಎಲೆಕ್ಟ್ರಿಫಿಕೇಶನ್ ಕಾಮಗಾರಿ ಪೂರ್ಣಗೊಳಿಸುವ ಗುರಿ ಹೊಂದಿದ್ದೇವೆ. ಇದೂವರೆಗೆ ರೈಲ್ವೆ ಸೇವೆ ಕಾಣದ ದೇಶದ ಪೂರ್ವ ಭಾಗಕ್ಕೆ ಹೆಚ್ಚಿನ ರೈಲು ಸಂಪರ್ಕ ಕಲ್ಪಿಸಲಾಗುತ್ತಿದೆ" ಎಂದು ತಿಳಿಸಿದರು.

ವಂದೇ ಭಾರತ್ ಪ್ರಸ್ತಾವಿತ ಮಾರ್ಗಗಳು

ವಂದೇ ಭಾರತ್ ಪ್ರಸ್ತಾವಿತ ಮಾರ್ಗಗಳು

ನೈಋತ್ಯ ರೈಲ್ವೆ ವಿಭಾಗ ಬೆಂಗಳೂರು ಸಂಪರ್ಕಿಸುವ ಮೂರು ಮಾರ್ಗದಲ್ಲಿ ವಂದೇ ಭಾರತ್‌ ರೈಲು ಸಂಚಾರ ನಡೆಸಲು ಪ್ರಸ್ತಾವನೆ ಸಿದ್ಧಪಡಿಸಿದೆ. ಇದರದಲ್ಲಿ ಬೆಂಗಳೂರು-ಕೊಯಮತ್ತೂರು, ಬೆಂಗಳೂರು-ಚೆನ್ನೈ, ಬೆಂಗಳೂರು-ಹುಬ್ಬಳ್ಳಿ ಮಾರ್ಗಗಳು ಸೇರಿವೆ.

ಬೆಂಗಳೂರು-ಹುಬ್ಬಳ್ಳಿ ಮಾರ್ಗದಲ್ಲಿ ವಂದೇ ಭಾರತ್ ಸೆಮಿ ಹೈಸ್ಪೀಡ್ ರೈಲು ಆರಂಭವಾದರೆ ಉತ್ತರ ಕರ್ನಾಟಕ ಮತ್ತು ರಾಜಧಾನಿಗೆ ಸಂಪರ್ಕ ಮತ್ತಷ್ಟು ಸುಲಭವಾಗಲಿದೆ. ಚೆನ್ನೈ, ಕೊಯಮತ್ತೂರಿಗೆ ವಿಮಾನದಲ್ಲಿ ಸಂಚಾರ ನಡೆಸುವ ಜನರಿಗೆ ರೈಲು ಸೇವೆ ಸಹಾಯಕವಾಗಲಿದೆ ಎಂದು ನಿರೀಕ್ಷಿಸಲಾಗಿದೆ.

ಪ್ರಯಾಣಿಕ ಸ್ನೇಹಿ ಸೌಲಭ್ಯಗಳು

ಪ್ರಯಾಣಿಕ ಸ್ನೇಹಿ ಸೌಲಭ್ಯಗಳು

ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲು ವೇಗಕ್ಕೆ ಪ್ರಸಿದ್ಧಿ ಪಡೆದಿದೆ. ಪ್ರಯಾಣ ಸೌಕರ್ಯಗಳು ಸಹ ಉತ್ತಮವಾಗಿದೆ. ಕೋಚ್‌ಗಳ ವಿನ್ಯಾಸ, ಬಳಕೆದಾರ ಸ್ನೇಹಿ ಸೌಲಭ್ಯಗಳು ರೈಲಿನಲ್ಲಿವೆ. ರೈಲಿನ ಬೋಗಿಗಳ ವಿನ್ಯಾಸ ಸಹ ಆತ್ಯಾಕರ್ಷಕವಾಗಿದೆ.

ಪ್ರಾಯೋಗಿಕ ಸಂಚಾರದ ವೇಳೆಯಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಅಹಮದಾಬಾದ್ ಮತ್ತು ಮುಂಬೈ ನಡುವೆ ಸಂಚಾರ ನಡೆಸಿತು. ಆಗ 52 ಸೆಕೆಂಡುಗಳಲ್ಲಿ ಗಂಟೆಗೆ 100 ಕಿ. ಮೀ. ವೇಗದಲ್ಲಿ ಓಡಿತ್ತು. ಪ್ರಾಯೋಗಿಕ ಸಂಚಾರ ಪೂರ್ಣಗೊಂಡ ಕಾರಣ ಆದಷ್ಟು ಬೇಗ 72 ರೈಲುಗಳ ಉತ್ಪಾದನೆಗೆ ಚಾಲನೆ ಸಿಗಲಿದೆ.

ಪ್ರಹ್ಲಾದ ಜೋಶಿ
Know all about
ಪ್ರಹ್ಲಾದ ಜೋಶಿ
English summary
Union minister and Dharwad MP Pralhad Joshi demand the Raosaheb Dadarao Danve minister of state of railways for 2 to 3 Vande bharat express train for Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X