ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹುಬ್ಬಳ್ಳಿಯಲ್ಲಿ ಸಿಎಎಗಾಗಿ ಮನೆ ಮನೆಗೆ ಹೋದ ಕೇಂದ್ರ ಸಚಿವ

By ಹುಬ್ಬಳ್ಳಿ ಪ್ರತಿನಿಧಿ
|
Google Oneindia Kannada News

ಹುಬ್ಬಳ್ಳಿ, ಜನವರಿ 06: ಪೌರತ್ವ ತಿದ್ದುಪಡಿ ಕಾಯ್ದೆಯ ಬಗ್ಗೆ ಅಲ್ಪಸಂಖ್ಯಾತರಲ್ಲಿ ಮೂಡಿರುವ ಗೊಂದಲವನ್ನು ಹೋಗಲಾಡಿಸುವ ದೃಷ್ಟಿಯಿಂದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಹುಬ್ಬಳ್ಳಿಯಲ್ಲಿ ಜಾಗೃತಿ ಅಭಿಯಾನವನ್ನು ಹಮ್ಮಿಕೊಂಡಿದ್ದಾರೆ.

ನಗರದ ವೀರಾಪುರ ಓಣಿ, ಯಲ್ಲಾಪುರ ಓಣಿ ಸೇರಿದಂತೆ ಹುಬ್ಬಳ್ಳಿ- ಧಾರವಾಡ ಮೀಸಲು ಕ್ಷೇತ್ರವಾಗಿರುವ ಕ್ಷೇತ್ರದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿದರು.

ಸಿಎಎ ಬಗ್ಗೆ ಜಾಗೃತಿ‌ಗೆ ಹೊರಟ ಬಿಜೆಪಿಗರನ್ನೇ ತರಾಟೆ ತೆಗೆದುಕೊಂಡ ಜನಸಿಎಎ ಬಗ್ಗೆ ಜಾಗೃತಿ‌ಗೆ ಹೊರಟ ಬಿಜೆಪಿಗರನ್ನೇ ತರಾಟೆ ತೆಗೆದುಕೊಂಡ ಜನ

ಪ್ರಹ್ಲಾದ ಜೋಶಿ ಅವರು ಮುಸ್ಲಿಂ ಸಮಾಜದವರ ಮನೆ ಮನೆಗೆ ತೆರಳಿ ಕಾಯ್ದೆಯ ಬಗ್ಗೆ ತಿಳಿವಳಿಕೆ ನೀಡಲು ಪ್ರಯತ್ನಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, "ಕಾಯ್ದೆಯಿಂದ ನಮ್ಮ ದೇಶದಲ್ಲಿ ವಾಸಿಸುವ ಜನರಿಗೆ ಯಾವುದೇ ತೊಂದರೆ ಇಲ್ಲ. ಒಂದೇ ಜಾತಿಯನ್ನು ಗುರಿಯಾಗಿಸಿಕೊಂಡು ಈ ಕಾಯ್ದೆ ತಂದಿಲ್ಲ. ಜೊತೆಗೆ ಕಾಯ್ದೆ ಕುರಿತು ಜನರಲ್ಲಿ ತಪ್ಪು ಕಲ್ಪನೆ ಮೂಡಿದ್ದು, ಅದನ್ನು ಹೋಗಲಾಡಿಸುವ ದೃಷ್ಟಿಯಿಂದ ಜನಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ" ಎಂದರು.

Prahlad Joshi Visited Homes In Hubballi To Bring Awareness On CAA

ಶಿವಕುಮಾರ ಮೆಣಸಿಣಕಾಯಿ, ರಂಗಾಬದ್ದಿ, ರಾಜು ಕೊರ್ಯಾಣುಠ ಸೇರಿದಂತೆ ಬಿಜೆಪಿಯ ಮುಖಂಡರು ಅಭಿಯಾನದಲ್ಲಿ ಪಾಲ್ಗೊಂಡಿದ್ದರು.

English summary
Central Minister Prahlada Joshi has launched an awareness campaign in Hubballi to clear the confusion among minorities about the Citizenship Amendment Act,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X