ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜನೌಷಧ ಕೇಂದ್ರ ಘಟಕ ಸ್ಥಾಪಿಸಲು ಹುಬ್ಬಳ್ಳಿಯನ್ನು ಗುರುತಿಸಿದ ಕೇಂದ್ರ

By ಹುಬ್ಬಳ್ಳಿ ಪ್ರತಿನಿಧಿ
|
Google Oneindia Kannada News

ಹುಬ್ಬಳ್ಳಿ, ಜೂನ್ 05 : ಕೇಂದ್ರ ಸರ್ಕಾರದ ಮಹತ್ವಾ ಕಾಂಕ್ಷೆಯ ಜನೌಷಧ ಕೇಂದ್ರಗಳಿಗೆ ಔಷಧಿ ಸರಬರಾಜು ಮಾಡುವ ಮುಖ್ಯ ಘಟಕವು ಹುಬ್ಬಳ್ಳಿ ಹೊರವಲಯದಲ್ಲಿ ತಲೆ ಎತ್ತಲಿದೆ.

ಕೇಂದ್ರ ಸರ್ಕಾರ ರಾಜ್ಯದಲ್ಲಿ ಒಟ್ಟು 200 ಜನೌಷಧ ಕೇಂದ್ರಗಳನ್ನು ಆರಂಭಿಸುವ ಗುರಿ ಹೊಂದಿದ್ದು, ಈಗಾಗಲೇ ಹಲವು ಕೇಂದ್ರಗಳ ಮೂಲಕ ಕಡಿಮೆ ದರದಲ್ಲಿ ಔಷಧ ವಿತರಿಸಲಾಗುತ್ತಿದೆ.[ಜನ ಸಂಜೀವಿನಿಯಲ್ಲಿ ಶೇ.50ರಷ್ಟು ರಿಯಾಯಿತಿಯಲ್ಲಿ ಔಷಧಿಗಳು ಲಭ್ಯ]

ಇದೀಗ ಈ ಕೇಂದ್ರಗಳಿಗೆ ಔಷಧಿ ಪೂರೈಕೆ ಮಾಡಲು ಕೇಂದ್ರ ಸರ್ಕಾರ ರಾಜ್ಯದ ಮಧ್ಯ ಭಾಗದಲ್ಲಿರುವ ಹುಬ್ಬಳ್ಳಿಯನ್ನು ಆಯ್ಕೆ ಮಾಡಿದೆ. ಈ ಹಿನ್ನಲೆಯಲ್ಲಿ ರಾಜ್ಯದ ಎಲ್ಲಾ ಜನೌಷಧ ಕೇಂದ್ರಗಳಿಗೆ ಹುಬ್ಬಳ್ಳಿಯ ಮುಖ್ಯ ಘಟಕದಿಂದಲೇ ಔಷಧಿಗಳು ಪೂರೈಕೆಯಾಗಲಿವೆ.

ರಾಜ್ಯದಲ್ಲಿ ಆರಂಭಗೊಳ್ಳಲಿರುವ 200 ಜನೌಷಧ ಕೇಂದ್ರಗಳಿಗೆ ಅತಿ ಕಡಿಮೆ ದರದಲ್ಲಿ ಗುಣಮಟ್ಟದ ಔಷಧ ಪೂರೈಸುವ ಸ್ಟೋರ್ ರೂಮ್ ನ್ನು (ಸಂಗ್ರಹ ಕೊಠಡಿ) ವರೂರಿನಲ್ಲಿ ನಿರ್ಮಾಣಕ್ಕೆ ಕೇಂದ್ರ ಮುಂದಾಗಿದೆ.

 ಹುಬ್ಬಳ್ಳಿಯ ವರೂರಿನಲ್ಲಿ ನಿರ್ಮಾಣ

ಹುಬ್ಬಳ್ಳಿಯ ವರೂರಿನಲ್ಲಿ ನಿರ್ಮಾಣ

ಜನೌಷಧಿ ಕೇಂದ್ರಗಳಿಗೆ ಔಷಧಿ ಪೂರೈಕೆ ಮಾಡುವ ಕೇಂದ್ರ ಘಟಕ ಸ್ಥಾಪನೆಗೆ ಹುಬ್ಬಳ್ಳಿಯಿಂದ 18 ಕಿ.ಮೀ ದೂರದಲ್ಲಿರುವ ವರೂರು ಬಳಿ ಜಾಗೆ ಗುರುತಿಸಲಾಗಿದ್ದು, ಎಲ್ಲವೂ ಅಂದುಕೊಂಡಂತೆ ಆದರೆ ಮುಂಬರುವ ಸಪ್ಟೆಂಬರ್ ವೇಳೆಗೆ ಘಟಕದ ನಿರ್ಮಾಣ ಕಾರ್ಯ ಆರಂಭವಾಗಲಿದೆ ಎಂದು ಮೂಲಗಳು ಖಚಿತಪಡಿಸಿವೆ.

 ಪ್ರತಿವರ್ಷ ಸರಾಸರಿ 50 ಕೋಟಿ ಸಾರಿಗೆ ವೆಚ್ಚ ಉಳಿತಾಯ

ಪ್ರತಿವರ್ಷ ಸರಾಸರಿ 50 ಕೋಟಿ ಸಾರಿಗೆ ವೆಚ್ಚ ಉಳಿತಾಯ

ಉದ್ದೇಶಿತ ಕೇಂದ್ರ ಘಟಕವನ್ನು ಹುಬ್ಬಳ್ಳಿಯಲ್ಲಿ ಆರಂಭಿಸುವುದರಿಂದ ಪ್ರತಿವರ್ಷ ಸರಾಸರಿ 50 ಕೋಟಿ ಸಾರಿಗೆ ವೆಚ್ಚ ಉಳಿತಾಯವಾಗಲಿದೆ ಎಂದು ಅಂದಾಜಿಸಲಾಗಿದೆ. ಹುಬ್ಬಳ್ಳಿ ರಾಜ್ಯದ ಮಧ್ಯ ಭಾಗದಲ್ಲಿರುವುದರಿಂದ ಸಾರಿಗೆ ವೆಚ್ಚ ಉಳಿತಾಯದೊಂದಿಗೆ ಕಡಿಮೆ ಸಮಯದಲ್ಲಿ ಔಷಧಿ ಸರಬರಾಜು ಮಾಡಲು ಸಹಾಯಕವಾಗಲಿದೆ ಎಂಬುದು ಕೇಂದ್ರದ ಲೆಕ್ಕಾಚಾರ.

 ಕಿಮ್ಸ್ ನಿರ್ದೇಶಕ ಡಾ.ದತ್ತಾತ್ರೇಯ ಬಂಟ್ ಅಭಿಪ್ರಾಯ.

ಕಿಮ್ಸ್ ನಿರ್ದೇಶಕ ಡಾ.ದತ್ತಾತ್ರೇಯ ಬಂಟ್ ಅಭಿಪ್ರಾಯ.

'ಜನೌಷಧಿ ಪೂರೈಕೆಯ ಕೇಂದ್ರ ಘಟಕ ಹುಬ್ಬಳ್ಳಿಯಲ್ಲಿ ಆರಂಭವಾಗುವುದರಿಂದ ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆ (ಕಿಮ್ಸ್)ಗೆ ಪ್ರತಿವರ್ಷ ಕನಿಷ್ಠ 3-4 ಕೋಟಿ ರೂಪಾಯಿ ಉಳಿತಾಯ ಆಗಲಿದೆ. ಹ್ಯಾಂಡ್ ಗ್ಲೌಸ್ ನಿಂದ ಹಿಡಿದು ಪ್ರತಿಯೊಂದು ಕೇಂದ್ರ ಘಟಕದಲ್ಲಿಯೇ ದೊರೆಯುವುದರಿಂದ ಗುಣಮಟ್ಟ ಕಾಯ್ದುಕೊಳ್ಳಲು ಅನುಕೂಲವಾಗಲಿದೆ' ಎಂದು ಕಿಮ್ಸ್ ನಿರ್ದೇಶಕ ಡಾ.ದತ್ತಾತ್ರೇಯ ಬಂಟ್ ಅವರ ಅಭಿಪ್ರಾಯ.

 ಬಿಪಿಪಿಐ ಸಹಯೋಗದಲ್ಲಿ ರಾಜ್ಯದಲ್ಲಿ ಜನೌಷಧ ಕೇಂದ್ರ

ಬಿಪಿಪಿಐ ಸಹಯೋಗದಲ್ಲಿ ರಾಜ್ಯದಲ್ಲಿ ಜನೌಷಧ ಕೇಂದ್ರ

ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿರುವ ಹಾಗೂ ಸುಸ್ಥಿತಿಯಲ್ಲಿರುವ ಸಮುದಾಯ ಆರೋಗ್ಯ ಕೇಂದ್ರ, ತಾಲೂಕು ಆಸ್ಪತ್ರೆ ಹಾಗೂ ಕೆಲ ಆಯ್ದ ಜಿಲ್ಲಾಸ್ಪತ್ರೆಗಳಲ್ಲಿ ಬ್ಯೂರೋ ಆಫ್ ಫಾರ್ಮಾ ಪಿಎಸ್ ಯು ಆಫ್ ಇಂಡಿಯಾ ಸಂಸ್ಥೆ(ಬಿಪಿಪಿಐ)ಯ ಸಹಯೋಗದಲ್ಲಿ ರಾಜ್ಯದ ವಿವಿದೆಡೆ ಜನೌಷಧ ಕೇಂದ್ರಗಳನ್ನು ತೆರೆಯಲಿದೆ.

 ಎಂಎಸ್‍ಐಎಲ್ ಗೆ ಅನುಮತಿ

ಎಂಎಸ್‍ಐಎಲ್ ಗೆ ಅನುಮತಿ

ಜನೌಷಧ ಕೇಂದ್ರಗಳನ್ನು ತೆರೆಯಲು ರಾಜ್ಯ ಸರಕಾರ ಈಗಾಗಲೇ ಮೈಸೂರು ಸೇಲ್ಸ್ ಇಂಟರ್ ನ್ಯಾಷನಲ್ ಲಿಮಿಟೆಡ್(ಎಂಎಸ್‍ಐಎಲ್)ಗೆ ಅನುಮತಿ ನೀಡಿದ್ದು, ಅದರ ನಿರ್ವಹಣೆ ಹಾಗೂ ಜವಾಬ್ದಾರಿಯ ಹೊಣೆಯನ್ನು ರಾಜ್ಯ ಡ್ರಗ್ಸ್ ಲಾಜಿಸ್ಟಿಕ್ಸ್ ಮತ್ತು ವೇರ್ ಹೌಸಿಂಗ್ ಸೊಸೈಟಿಗೆ ವಹಿಸಿದೆ.

English summary
The Central government has identified Hubballi for 'Pradhana Manthri Jan Aushadhi Kendra' main unit.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X