ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಾಮಾಜಿಕ ಜಾಲತಾಣಗಳ ಮೊರೆ ಹೋದ ರಾಜಕೀಯ ನಾಯಕರಾರು ಗೊತ್ತಾ?

By ಹುಬ್ಬಳ್ಳಿ ಪ್ರತಿನಿಧಿ
|
Google Oneindia Kannada News

ಹುಬ್ಬಳ್ಳಿ, ಏಪ್ರಿಲ್ 15 : ವಿಧಾನಸಭಾ ಚುನಾವಣೆ ದಿನಾಂಕ ಘೋಷಣೆಯಾದ ಬೆನ್ನಲ್ಲೇ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ನಾಯಕರು ಮತದಾರರನ್ನು ತಮ್ಮತ್ತ ಸೆಳೆಯಲು ಸಾಮಾಜಿಕ ಜಾಲತಾಣದ ಮೊರೆ ಹೋಗಿದ್ದಾರೆ.
ಸಾಮಾಜಿಕ ಜಾಲತಾಣವನ್ನು ಹೆಚ್ಚಾಗಿ ಬಳಸುವ ಯುವ ಮತದಾರರನ್ನು ಗುರಿಯಾಗಿಸಿಕೊಂಡು ತಮ್ಮತ್ತ ಸೆಳೆಯಲು ಕಸರತ್ತು ನಡೆಸುತ್ತಿದ್ದಾರೆ.

ಸಭೆ-ಸಮಾರಂಭಗಳ ಮಾಹಿತಿ
ಸಾಮಾಜಿಕ ಜಾಲತಾಣಗಳಾದ ಫೇಸ್ ಬುಕ್, ವಾಟ್ಸ್ಆಪ್, ಟ್ವಿಟರ್ ಹಾಗೂ ಯುಟ್ಯೂಬ್ ನಲ್ಲಿ ಖಾತೆ ತೆರೆದು ತಮ್ಮ ಸಾಧನೆ, ಚಿಂತನೆಗಳು, ಅಭಿವೃದ್ಧಿ ಯೋಜನೆಗಳನ್ನು ಪ್ರಚುರಪಡಿಸುತ್ತಿದ್ದಾರೆ. ಈಗಾಗಲೇ ಟಿಕೆಟ್ ಖಚಿತಪಡಿಸಿಕೊಂಡಿರುವ ಅಭ್ಯರ್ಥಿಗಳು ಪ್ರಚಾರ ನಿಮಿತ್ತ ತಾವು ಭೇಟಿ ನೀಡಿದ್ದ ಓಣಿ, ದೇವಸ್ಥಾನ, ಊರು, ಭಾಗವಹಿಸಿದ್ದ ಸಭೆ-ಸಮಾರಂಭಗಳ ಚಿತ್ರ ಮತ್ತು ಮಾಹಿತಿ ಹಾಕುವುದು ಸಾಮಾನ್ಯವಾಗಿದೆ.

Political leaders Active in Social media

15-20 ಸಾವಿರ ಸಂಬಳ..?

ಈಗಾಗಲೇ ಟಿಕೆಟ್ ಖಚಿತ ಅಭ್ಯರ್ಥಿಗಳು ಹಾಗೂ ಆಕಾಂಕ್ಷಿಗಳು ತಮ್ಮ ಹೆಸರಿನಲ್ಲಿ ಕನಿಷ್ಠ ನಾಲ್ಕೈದು ಫೇಸ್ಬುಕ್ ಖಾತೆ ಹಾಗು ನೂರಾರು ವಾಟ್ಸಪ್ ಗ್ರೂಪ್ ಹೊಂದಿದ್ದಾರೆ. ಜತೆಗೆ ವಾಟ್ಸ್ಆಪ್ ಗ್ರೂಪ್ ಗಳಲ್ಲಿ ಪ್ರತಿ ಊರು, ವಾರ್ಡ್ ಹಾಗೂ ಬ್ಲಾಕ್ ಮಟ್ಟದ ಕಾರ್ಯಕರ್ತರನ್ನು ಸಂಘಟಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪಕ್ಷದ ಪ್ರಚಾರ ಅಪ್ ಲೋಡ್ ಮಾಡಲು ನುರಿತ ಹುಡುಗರನ್ನು ಬಳಸಿಕೊಳ್ಳಲಾಗುತ್ತಿದೆ. ಅದರಲ್ಲೂ ವಿಡಿಯೋ ಎಡಿಟಿಂಗ್ ಮತ್ತು ಫೋಟೋ ಶಾಪ್ನಲ್ಲಿ ನುರಿತವರಿಗೆ ಹೆಚ್ಚಿನ ಡಿಮ್ಯಾಂಡ್ ಬಂದಿದ್ದು, ಕಳೆದ ಮೂರ್ನಾಲ್ಕು ತಿಂಗಳಿಂದ 15 ರಿಂದ 20 ಸಾವಿರ ಸಂಬಳ ಕೊಟ್ಟು ಕೆಲಸಕ್ಕಿಟ್ಟುಕೊಳ್ಳಲಾಗಿದೆ.
ಅಭ್ಯರ್ಥಿಗಳು ಊರೂರಿಗೆ ಭೇಟಿ ನೀಡಿ, ಪ್ರಚಾರದಲ್ಲಿ ತೊಡಗಿರುವುದರಿಂದ ಸಾಮಾಜಿಕ ಜಾಲತಾಣ ನಿರ್ವಹಣೆಗಾಗಿ ತಂತ್ರಜ್ಞಾನದಲ್ಲಿ ಪಳಗಿರುವವರನ್ನು ಬಳಸಿಕೊಳ್ಳುತಿದ್ದಾರೆ. ಮನೆ ಹಾಗೂ ಪಕ್ಷದ ಕಚೇರಿಯಲ್ಲಿ ನಿತ್ಯ ನಾಲ್ಕರಿಂದ ಹತ್ತು ಜನ ಸಾಮಾಜಿಕ ಜಾಲತಾಣ ನಿರ್ವಹಿಸುತ್ತಿದ್ದಾರೆ.

Political leaders Active in Social media

ನಾಯಕರ ಭರ್ಜರಿ ಪ್ರಚಾರ
ವಿಧಾನಸಭೆ ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್, ಪಶ್ಚಿಮ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ, ಧಾರವಾಡ ಕುಂದಗೋಳ ಶಾಸಕ ಸಿ.ಎಸ್. ಶಿವಳ್ಳಿ , ಧಾರವಾಡ ಗ್ರಾಮೀಣ ಭಾಗದ ಶಾಸಕ ಹಾಗೂ ಸಚಿವ ವಿನಯ ಕುಲಕರ್ಣಿ, ನವಲಗುಂದದ ಶಾಸಕ ಎನ್.ಎಚ್. ಕೋನರಡ್ಡಿ ಅವರು ಕೂಡ ಸಾಮಾಜಿಕ ಜಾಲತಾಣಗಳನ್ನು ರಾಜಕೀಯ ಪ್ರಚಾರಕ್ಕೆ ಭರ್ಜರಿಯಾಗಿ ಬಳಸಿಕೊಳ್ಳುತ್ತಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಮಾಡಿದ ಹೋರಾಟ, ಪ್ರತಿಭಟನೆ ಹಾಗೂ ಜನಜಾಗೃತಿ ಹೀಗೆ ಅನೇಕ ವಿಷಯಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತಿದ್ದು, ವಿರೋಧ ಪಕ್ಷದ ನ್ಯೂನ್ಯತೆಗಳನ್ನೂ ಪ್ರತಿದಿನ ಅಪ್ಲೋಡ್ ಮಾಡುತ್ತಾರೆ.

English summary
Right Now Congress, BJP, JDS Political Leaders depends on social media for election purpose. They are very busy in Whatsapp, Twitter, Facebook, Youtubewhen election date announced since that day Leaders Followers updated their Leaders achievements, functions and meeting pictures etc. Mainly Jagadish Shettar,arvind bellad, Vinay Kulkarni, Kona Reddy and others leaders Involving on Social Media.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X