ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹುಬ್ಬಳ್ಳಿ ಪಾಲಿಕೆ ಕಚೇರಿಯಲ್ಲಿ ದಾಂದಲೆ; ಕೋಮುವಾದಕ್ಕೆ ಬೇಸತ್ತು ಆರೋಪಿ ಮೊಹ್ಮದ್‌ನಿಂದ ಕೃತ್ಯ

By ಹುಬ್ಬಳ್ಳಿ ಪ್ರತಿನಿಧಿ
|
Google Oneindia Kannada News

ಹುಬ್ಬಳ್ಳಿ, ಮೇ 26: ನಗರದ ಹುಬ್ಬಳ್ಳಿಯ ಮಹಾನಗರ ಪಾಲಿಕೆ ಕಚೇರಿಯ ಮೇಲೆ ಹಾಗೂ ಆವರಣದಲ್ಲಿ ನಿಲ್ಲಿಸಿದ್ದ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿದ ಪರಿಣಾಮ ಕಚೇರಿ ಕಿಟಕಿಯ ಗಾಜು ಹಾಗೂ ವಾಹನಗಳು ಜಖಂಗೊಂಡ ಘಟನೆ ನಡೆದಿದೆ.

ಹುಬ್ಬಳ್ಳಿಯ ಗಣೇಶ ಪೇಟ್ ನಿವಾಸಿ ಮೊಹ್ಮದ್ ಎಂಬಾತ ಇಂದು ಗುರುವಾರ ಬೆಳಿಗ್ಗೆ ಮಹಾನಗರ ಪಾಲಿಕೆ ಕಚೇರಿಗೆ ಬಂದವನೇ, ಕಲ್ಲುಗಳಿಂದ ಕಚೇರಿ ಕಿಡಕಿ ಹಾಗೂ ಎರಡು ಕಾರುಗಳು ಮೇಲೆ ಕಲ್ಲು ತೂರಾಟ ನಡೆಸಿದ್ದಾನೆ.

ಹುಬ್ಬಳ್ಳಿ ರಸ್ತೆ ಅಪಘಾತ: ಕೇಂದ್ರದಿಂದ 2 ಲಕ್ಷ ರೂ, ರಾಜ್ಯದಿಂದ 5 ಲಕ್ಷ ರೂ ಪರಿಹಾರಹುಬ್ಬಳ್ಳಿ ರಸ್ತೆ ಅಪಘಾತ: ಕೇಂದ್ರದಿಂದ 2 ಲಕ್ಷ ರೂ, ರಾಜ್ಯದಿಂದ 5 ಲಕ್ಷ ರೂ ಪರಿಹಾರ

ಕೂಡಲೇ ಅಲ್ಲೇ ಇದ್ದ ಸೆಕ್ಯೂರಿಟಿ ಸಿಬ್ಬಂದಿ ಉಪನಗರ ಪೊಲೀಸ್ ಠಾಣೆಗೆ ಮಾಹಿತಿಯನ್ನು ರವಾನಿಸಿದ್ದು ಸ್ಥಳಕ್ಕೆ ಆಗಮಿಸಿದ ಉಪನಗರ ಠಾಣೆಯ ಪೊಲೀಸರು ಆರೋಪಿ ಮೊಹ್ಮದ್‌ನನ್ನು ಠಾಣೆಗೆ ಕರೆದುಕೊಂಡು ಹೋಗಿ ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. ಮುಂಜಾನೆ ಪಾಲಿಕೆ ಕಚೇರಿಗೆ ಬೈಕ್‌ನಲ್ಲಿ ಬಂದಿದ್ದ ಆರೋಪಿ ಮೊಹ್ಮದ್ ಹುಬ್ಬಳ್ಳಿಯ ಗಣೇಶ ಪೇಟ್ ನಿವಾಸಿ ಆಗಿದ್ದಾನೆ.

Police detain one person on Hubballi corporation incident

ಪೊಲೀಸರ ಪ್ರಾಥಮಿಕ ವಿಚಾರಣೆಯಲ್ಲಿ ಮೊಹ್ಮದ್ ಹಲವು ಮಾಹಿತಿ ನೀಡಿದ್ದು ಇತ್ತೀಚಿಗೆ ನಡೆದ ಹಳೆ ಹುಬ್ಬಳ್ಳಿ ಗಲಾಟೆ ಹಾಗೂ ಕೋಮುವಾದಕ್ಕೆ ಬೇಸತ್ತು ಅಧಿಕಾರಿಗಳ ತಾರತಮ್ಯ ಖಂಡಿಸಲು ಈ ರೀತಿಯಾಗಿ ಮಾಡಿದ್ದಾನೆ ಎಂದು ಹೇಳಲಾಗುತ್ತಿದೆ.

Police detain one person on Hubballi corporation incident

ಪಾಲಿಕೆ ಕಚೇಯಲ್ಲಿ ನಿಲ್ಲಿಸಿದ್ದ ವಾಹನಗಳ ಮೇಲೆ ಕಲ್ಲಿನಿಂದ ದಾಳಿ

ಗುರುವಾರ ಬೆಳಿಗ್ಗೆ 8.30ಕ್ಕೆ ಮಹಾನಗರ ಪಾಲಿಕೆ ಕಚೇರಿಗೆ ಬೈಕ್ ನಲ್ಲಿ ಬಂದವವೇ, ನೇರವಾಗಿ ಕಲ್ಲುಗಳಿಂದ ಪಾಲಿಕೆ ಕಚೇರಿ ಕಿಟಕಿ ಮತ್ತು ಪಾಲಿಕೆ ಆವರಣದಲ್ಲಿದ್ದ ಎರಡು ಕಾರುಗಳ ಮೇಲೆ ಏಕಾಏಕಿ ಕಲ್ಲು ತೂರಾಟ ನಡೆಸಿದ್ದಾನೆ. ಕಾರುಗಳ ಗಾಜು ಪುಡಿ ಪುಡಿಯಾಗಿವೆ. ಗಣೇಶ್ ಪೇಟ್ ನಲ್ಲಿರುವ ನಿವಾಸಿ ಮೊಹ್ಮದ್ ಆಸೀಫ್ ಎಂಬಾತನೇ ಗಲಾಟೆ ಮಾಡಿರೋದು ಕಂಡು ಬಂದಿದೆ.

Police detain one person on Hubballi corporation incident

ಮೇ. 28ಕ್ಕೆ ಹುಬ್ಬಳ್ಳಿ ಮಹಾನಗರ ಪಾಲಿಕೆ ಚುನಾವಣೆ

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ 21 ನೇ ಅವಧಿಯ ಮಹಾಪೌರ ಹಾಗೂ ಉಪಪೌರ ಸ್ಥಾನಗಳಿಗೆ ಮೇ, 28 ರಂದು ಚುನಾವಣೆ ನಡೆಯಲಿದೆ. ಪಾಲಿಕೆಯಲ್ಲಿ ನಡೆದ ಗಲಾಟೆಗೆ ಖಚಿತವಾದ ಮಾಹಿತಿ ಸಿಕ್ಕಿಲ್ಲ.

(ಒನ್ಇಂಡಿಯಾ ಸುದ್ದಿ)

English summary
Hubli Corporation office witnessed some stone pelting and other violence incidents as Ganeshpet resident Mohmad allegedly goes on rampage. Police have detained Mohmad and probe is going on.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X