• search
 • Live TV
ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

'ಎಚ್ಡಿಕೆ ರಾತ್ರಿಯೆಲ್ಲ ಅಳುತ್ತಾರೆ': ಹುಬ್ಬಳ್ಳಿಯಲ್ಲಿ ಮೋದಿ 10 ಹೇಳಿಕೆ

|
   ಹುಬ್ಬಳ್ಳಿಯಲ್ಲಿ ನರೇಂದ್ರ ಮೋದಿ ಕೊಟ್ಟ 10 ಮಹತ್ವದ ಹೇಳಿಕೆಗಳು | Oneindia Kannada

   ಹುಬ್ಬಳ್ಳಿ, ಫೆಬ್ರವರಿ 11: ಕರ್ನಾಟಕ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರಿಗೆ ಅಧಿಕಾರ ಉಳಿಸಿಕೊಳ್ಳುವುದೇ ದೊಡ್ಡ ತಲೆಬಿಸಿಯಾಗಿದೆ. ಅದಕ್ಕೆಂದೇ ಅವರು ದಿನವೂ ರಾತ್ರಿ ಅಳುತ್ತಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

   ಹುಬ್ಬಳ್ಳಿಯಲ್ಲಿ ಭಾನುವಾರ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿದ ಸಂದರ್ಭದಲ್ಲಿ ಮೋದಿ ಮಾತನಾಡುತ್ತಿದ್ದರು.

   ಕುಮಾರಸ್ವಾಮಿ ಅವರು ಕಾಂಗ್ರೆಸ್ ನ ಮುಲಾಜಿಗೆ ಬಿದ್ದಿದ್ದಾರೆ. ಆದ್ದರಿಂದ ಈ ರಾಜ್ಯದಲ್ಲಿ ನಿಜವಾಗಿಯೂ ಅಧಿಕಾರ ಚಲಾಯಿಸುತ್ತಿರುವುದು ಯಾರು ಎಂಬ ಅನುಮಾನ ಶುರುವಾಗಿದೆ ಎಂದು ಮೋದಿ ಹೇಳಿದರು.

   ಕರ್ನಾಟಕ ಮುಖ್ಯಮಂತ್ರಿಗೆ ತಮ್ಮ ಸ್ಥಾನ ಉಳಿಸಿಕೊಳ್ಳುವುದೇ ಆಗಿರುತ್ತದೆ: ಮೋದಿ

   ಇದರೊಟ್ಟಿಗೆ ಕೇಂದ್ರ ಸರ್ಕಾರ ಬಡವರ ಉದ್ಧಾರಕ್ಕೆ ಜಾರಿಗೆ ತಂದ ಕೆಲವು ಕ್ರಮಗಳ ಬಗ್ಗೆಯೂ ಮಾತನಾಡಿದ ಮೋದಿ, ಕರ್ನಾಟಕದ ಅದರಲ್ಲೂ ವಿಶೇಷವಾಗಿ ಹುಬ್ಬಳ್ಳಿಯ ಹಲವು ಅದ್ವಿತೀಯ ವ್ಯಕ್ತಿತ್ವಗಳನ್ನು ಸ್ಮರಿಸಿದರು.

   ಹುಬ್ಬಳ್ಳಿಯಲ್ಲಿ ಮೋದಿ ಭಾಷಣದ 10 ಮಹತ್ವದ ಹೇಳಿಕೆಗಳು ಇಲ್ಲಿವೆ.

   ಹುಬ್ಬಳ್ಳಿಯ ಪುಣ್ಯನೆಲ

   ಹುಬ್ಬಳ್ಳಿಯ ಪುಣ್ಯನೆಲ

   1. ಸಾಹಸ, ಷೌರ್ಯ, ತ್ಯಾಗ ಸೇಬೆ, ವಿದ್ಯೆ, ಸಂಸ್ಕೃತಿ, ಇತಿಹಾಸ, ಪರಂಪರೆಗೆ ಹೆಸರಾದ ಹುಬ್ಬಳ್ಳಿಯ ಈ ಪುಣ್ಯ ಭೂಮಿಗೆ ಬಂದು ನನಗೆ ರೋಮಾಂಚನವಾಗಿದೆ- ನರೇಂದ್ರ ಮೋದಿ, ಪ್ರಧಾನಿ

   2. ವಸಂತ ಪಂಚಮಿಯಂದು ವಾತಾವರಣ ಬದಲಾಗುತ್ತಿದೆ. ಶ್ರೀ ಭಗವಾನ್ ವೀರನಾರಾಯಣ ಸೇವೆಗಾಗಿ ಜೀವನವನ್ನೇ ಶ್ರಮಿಸಿದ ಸಿದ್ಧಗಂಗಾ ಶ್ರೀಗಳಿಗೆ ಪ್ರಣಾಮಗಳು- ನರೇಂದ್ರ ಮೋದಿ, ಪ್ರಧಾನಿ

   ಮಹನೀಯರ ನೆನೆದ ಮೋದಿ

   ಮಹನೀಯರ ನೆನೆದ ಮೋದಿ

   3. ಈ ನಾಡಿನ ಕಿತ್ತೂರುರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ದ.ರಾ.ಬೇಂದ್ರೆ, ಭೀಮ್ ಸೇನ್ ಜೋಷಿ, ಗಂಗೂಬಾಯಿ ಹಾನಗಲ್, ಕುಮಾರವ್ಯಾಸ, ಕನಕದಾಸರಂಥ ಶ್ರೇಷ್ಠರಿಗೆ ನಮನಗಳು-ನರೇಂದ್ರ ಮೋದಿ, ಪ್ರಧಾನಿ

   4. ಈ ಭೂಮಿಯ ಪುತ್ರ ದಿ.ಅನಂತ್ ಕುಮಾರ್ ನಮ್ಮೊಂದಿಗಿಲ್ಲ. ಕೇಂಏದ್ರದ ಎನ್ ಡಿ ಎ ಸರ್ಕಾರ ಯುವಕರಿಗೆ ಕೆಲಸ, ರೈತರಿಗೆ ನೀರು, ಎಲ್ಲರಿಗೂ ಬೇಕಾದ ಅಗತ್ಯಗಳನ್ನು ಒದಗಿಸುತ್ತಿದೆ-ನರೇಂದ್ರ ಮೋದಿ, ಪ್ರಧಾನಿ

   ಹುಬ್ಬಳ್ಳಿ: ಗೋ ಬ್ಯಾಕ್ ಮೋದಿ ಎಂದ ರೈತ ಹೋರಾಟಗಾರರ ಬಂಧನ

   ಸರ್ಕಾರದ ಸಾಧನೆ

   ಸರ್ಕಾರದ ಸಾಧನೆ

   5. 5 ಸಾವಿರ ಕೋಟಿಯ ಯೋಜನೆಗಳಿಗೆ ಶಿಲಾನ್ಯಾಸ ಮಾಡಲಾಗಿದೆ. ಚಿಕ್ಕಜಾಜೂರು-ಮಾಯಗೊಂಡ ರೈಲ್ವೆಯಿಂದ ಮುಂಬೈಗೆ ಸಂಪರ್ಕ ಕಲ್ಪಿಸಲಾಗಿದೆ. ಇದರಿಂದ ಸಾಕಷ್ಟು ಉಪಯೋಗವಾಗಲಿದೆ. ಪೆಟ್ರೋಲಿಯಂ ರಿಸರ್ವ್ ದೇಶದ ಪೆಟ್ರೋಲಿಯಂ ಕೊರತೆ ನಿವಾರಿಸುತ್ತಿದೆ.

   6. ಹಿಂದಿನ ಸರ್ಕಾರ 10 ವರ್ಷಗಳಲಲ್ಲಿ ಕೇವಲ 7 ಲಕ್ಷ ಮನೆ ನಿರ್ಮಾಣ ಮಾಡಿತ್ತು. ನಮ್ಮ ಸರ್ಕಾರದ ಅವಧಿಯಲ್ಲಿ 13 ಲಕ್ಷ ಮನೆಗಳು ನಿರ್ಮಾಣ ಹಂತದಲ್ಲಿವೆ. ಹುಬ್ಬಳ್ಳಿ-ಧಾರವಾಡದಲ್ಲಿ ಸುಮಾರು 11,000 ಮನೆಗಳು ನಿರ್ಮಾಣವಾಗಿವೆ. 2.5 ಸಾವಿರ ಮನೆಗಳು ಫಲಾನುಭವಿಗಳಿಗೆ ಹಸ್ತಾಂತರವಾಗಿವೆ.

   ತಗ್ಗಿದ ತೆರಿಗೆ ಭಾರ

   ತಗ್ಗಿದ ತೆರಿಗೆ ಭಾರ

   7. ಮಧ್ಯಮ ವರ್ಗಕ್ಕೆ ಬರುವ ಬಾಡಿಗೆ ಹಣದ ಮೇಲೆ ಇದ್ದ ತೆರಿಗೆ 1.80 ಲಕ್ಷ ರೂ.ನಿಂಡ 2.40 ಲಕ್ಷ ರೂ.ವರೆಗೆ ತೆರಿಗೆ ವಿನಾಯಿತಿ ನೀಡಲಾಗಿದೆ.

   8. ಶ್ರಮಯೋಗಿ ಮಾನ್ ಧನ್ ಯೋಜನೆಯಡಿ ಅಸಂಘಟಿತ ಕಾರ್ಮಿಕರಿಗೂ 3 ಸಾವಿರ ರೂ.ಮಾಸಿಕ ಪಿಂಚಣಿ ನೀಡಲಾಗುತ್ತಿದೆ.

   ಮುಯ್ಯಿಗೆ ಮುಯ್ಯಿ... ಪ್ರಧಾನಿ ಮೋದಿಗೆ ನಾಯ್ಡು ಖಡಕ್ ಎಚ್ಚರಿಕೆ

   ಕುಮಾರಸ್ವಾಮಿ ದಿನ ರಾತ್ರಿ ಅಳುತ್ತಾರೆ!

   ಕುಮಾರಸ್ವಾಮಿ ದಿನ ರಾತ್ರಿ ಅಳುತ್ತಾರೆ!

   9. ಕರ್ನಾಟಕ ರಾಜ್ಯ ಸರ್ಕಾರ ರೈತರ ಸಾಲಮನ್ನಾಗೆ ದೊಡ್ಡ ದೊಡ್ಡ ಭರವಸೆ ನೀಡಿತ್ತು. 43 ಲಕ್ಷ ರೈತರ ಸಾಲಮನ್ನಾ ಮಾಡ್ತೀನಿ ಎಂದಿತ್ತು. ಆದರೆ ಈಗ ರಾಜ್ಯದಲ್ಲಿ 100 ಕ್ಕೆ 25-30 ರೈತರ ಸಾಲಮನ್ನಾ ಆಗಿದ್ದರೆ ಹೆಚ್ಚು. ಕರ್ನಾಟಕದಲ್ಲಿ ಅಧಿಕಾರಕ್ಕಾಗಿ ಹೊಡೆದಾಡಿಕೊಳ್ಳುತ್ತಿದ್ದಾರೆ. ಈ ಪರಿಸ್ಥಿತಿಯನ್ನು ಬದಲಿಸಬೇಕಿದೆ.

   10. ಕರ್ನಾಟಕ ಮುಖ್ಯಮಂತ್ರಿಗಳಿಗೆ ಪ್ರತಿದಿನ ಧಮ್ಕಿಗಳು ಬರುತ್ತಿವೆ. ಆದ್ದರಿಂದ ಅಸಹಾಯಕತೆಯಿಂದ ರಾತ್ರಿಯೆಲ್ಲ ಅಳುತ್ತಿದ್ದಾರೆ. ದೆಹಲಿಯಲ್ಲಿ ನಾಮದಾರಿಗಳು ರಾತ್ರಿಯೆಲ್ಲ ಅಳುತ್ತಾರೆ. ಇವರನ್ನೆಲ್ಲ ನೋಡಿ ದೇಶದ ಜನ ನಗುತ್ತಿದ್ದಾರೆ -ನರೇಂದ್ರ ಮೋದಿ, ಪ್ರಧಾನಿ

   ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

   English summary
   Prime Minister Narendra Modi in Hubballi inaugurates many developmental programmes on Sunday. Top ten statements of his speech are here.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more