ಹುಬ್ಬಳ್ಳಿಯ ಕಿಮ್ಸ್ ನಲ್ಲಿ ಯಶಸ್ವಿಯಾದ "ಪ್ಲಾಸ್ಮಾ ಥೆರಪಿ"
ಹುಬ್ಬಳ್ಳಿ, ಜುಲೈ 24: ರಾಜ್ಯದಲ್ಲಿ ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆ ಏರುತ್ತಲೇ ಇದೆ. ಜನರಲ್ಲೂ ಆತಂಕ ಹೆಚ್ಚಾಗುತ್ತಿದೆ. ಈ ನಡುವೆ ಸಮಾಧಾನಕರವಾದ ಸಂಗತಿಯೊಂದು ಕಂಡುಬಂದಿದೆ. ಹುಬ್ಬಳ್ಳಿಯ ಕಿಮ್ಸ್ ನಲ್ಲಿ 13 ಮಂದಿ ಕೊರೊನಾ ಸೋಂಕಿತರಿಗೆ ನೀಡಿದ ಪ್ಲಾಸ್ಮಾ ಚಿಕಿತ್ಸೆ ಯಶಸ್ವಿಯಾಗಿದೆ.
ನಾವಿದ್ದೇವೆ ಯೋಚನೆ ಮಾಡಬೇಡಿ ಎಂದ ಶಿವಣ್ಣ
ಕಿಮ್ಸ್ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತರಾಗಿದ್ದ 13 ರೋಗಿಗಳಿಗೆ ಪ್ಲಾಸ್ಮಾ ಚಿಕಿತ್ಸೆಯನ್ನು ನೀಡಲಾಗಿತ್ತು. ಇದೀಗ ಈ ಹದಿಮೂರು ಮಂದಿಯೂ ಕೊರೊನಾ ಸೋಂಕಿನಿಂದ ಹೊರಬಂದಿದ್ದಾರೆ. ಅಷ್ಟೇ ಅಲ್ಲ, ರಾಜ್ಯದಲ್ಲಿಯೇ ಅತೀ ಹೆಚ್ಚು ಮಂದಿಗೆ ಯಶಸ್ವಿ ಪ್ಲಾಸ್ಮಾ ಥೆರಪಿ ನೀಡಿದ ಕೀರ್ತಿಗೂ ಕಿಮ್ಸ್ ಪಾತ್ರವಾದಂತಾಗಿದೆ.
ಕೋವಿಡ್ ಶುಭಶುದ್ದಿ: ಕರ್ನಾಟಕದಲ್ಲಿ ಶುರುವಾಗಲಿವೆ ಪ್ಲಾಸ್ಮಾ ಬ್ಯಾಂಕ್!
ಬೆಂಗಳೂರಿನ ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಲ್ಲೂ ಎಂಟು ಕೊರೊನಾ ಸೋಂಕಿತರಿಗೆ ಪ್ಲಾಸ್ಮಾ ಥೆರಪಿ ನೀಡಲಾಗಿದ್ದು,, ಐವರು ಮಾತ್ರ ಗುಣಮುಖರಾಗಿದ್ದಾರೆ. ಕಿಮ್ಸ್ ನಲ್ಲಿ ಪ್ಲಾಸ್ಮಾ ಚಿಕಿತ್ಸೆ ಪಡೆದ ಎಲ್ಲರೂ ಗುಣಮುಖರಾಗಿದ್ದಾರೆ.