ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆಗಸ್ಟ್ 4ರಿಂದ ಹಿರಿಯ ನಾಗರಿಕರಿಗೆ ಪುಣ್ಯಕ್ಷೇತ್ರಗಳ ಯಾತ್ರೆ

By ಹುಬ್ಬಳ್ಳಿ ಪ್ರತಿನಿಧಿ
|
Google Oneindia Kannada News

ಹುಬ್ಬಳ್ಳಿ, ಜುಲೈ 23: ಸ್ಥಳೀಯ ಸಾತ್ವಿಕ ಸಂಘದ ವತಿಯಿಂದ ಆಗಸ್ಟ್ 4 ರಿಂದ ಆ.10ರವರೆಗೆ ಹಿರಿಯ ನಾಗರಿಕರಿಗೆ ಎಂಟು ದಿನ ಪುಣ್ಯ ಕ್ಷೇತ್ರಗಳ ಧರ್ಮಯಾತ್ರೆಯನ್ನು ಏರ್ಪಡಿಸಲಾಗಿದೆ.

ಧರ್ಮಯಾತ್ರೆಯು ಆ.4 ರಿಂದ ಹುಬ್ಬಳ್ಳಿ, ಬೆಂಗಳೂರು ಮತ್ತು ತುಮಕೂರಿನಿಂದ ಬಸ್ ನಲ್ಲಿ ಹೊರಡುವ ಮೂಲಕ ಆರಂಭಗೊಳ್ಳಲಿದೆ.

 ಹಿರಿಯ ನಾಗರೀಕರಿಗೆ ತಿರುಪತಿ ತಿಮ್ಮಪ್ಪನ ದರ್ಶನ ಮುಕ್ತ.. ಮುಕ್ತ.. ಹಿರಿಯ ನಾಗರೀಕರಿಗೆ ತಿರುಪತಿ ತಿಮ್ಮಪ್ಪನ ದರ್ಶನ ಮುಕ್ತ.. ಮುಕ್ತ..

ಆಂಧ್ರಪ್ರದೇಶದ ತಿರುಪತಿ, ತಿರುಮಲ, ತಮಿಳುನಾಡಿನ ತಿರುತ್ತೀನಿ, ರಾಮೇಶ್ವರಂ, ಕಂಚೀಪುರಂ, ಮಧುರೈ, ಮಹಾಬಲಿಪುರಂ, ತಂಜಾವೂರು, ತಿರುವನ್ನಾಮಲೈ, ಕನ್ಯಾಕುಮಾರಿ, ರಾಮೇಶ್ವರಂ, ಕುಂಭಕೋಣಂ, ಪಳನಿ, ಭವಾನಿ, ಶಕ್ತಿಮಾತಾ, ತಿರುವನೆಲ್ವಿಲಿ, ಶ್ರೀರಂಗಂ, ಪೆರಂಬದೂರು, ಅರಿಹಂತ ಗಿರಿ, ತೂತುಕುಡಿ, ಕೇರಳದ ಅನಂತ ಪದ್ಮನಾಭ ದೇವಸ್ಥಾನ ಹಾಗೂ ಪುದುಚೇರಿಯ ಅಮರ್ಗನ್ ದೇವಾಲಯ ಸೇರಿದಂತೆ ಅನೇಕ ಪುಣ್ಯಕ್ಷೇತ್ರಗಳನ್ನು ಯಾತ್ರೆಯು ಒಳಗೊಂಡಿದೆ.

Pilgrimage to senior citizens from August 4

ಯಾತ್ರೆಯಲ್ಲಿ ಸ್ಥಳೀಯ ಗೈಡ್, ರಾತ್ರಿ ತಂಗಲು ಮತ್ತು ವಿಶ್ರಾಂತಿ ತೆಗೆದುಕೊಳ್ಳಲು ವಸತಿ ವ್ಯವಸ್ಥೆ, ಬೆಳಗಿನ ಟೀ, ಕಾಫಿ, ಉಪಹಾರ, ಮಧ್ಯಾಹ್ನ ಮತ್ತು ರಾತ್ರಿಯ ಸಮಯದಲ್ಲಿ ಸಾತ್ವಿಕ ಆಹಾರದ ವ್ಯವಸ್ಥೆ ಏರ್ಪಡಿಸಲಾಗಿದೆ.

ಹಿರಿಯ ನಾಗರಿಕರಿಗೆ ದೊರೆಯುವ ಸೌಲಭ್ಯಗಳಾವವು?ಹಿರಿಯ ನಾಗರಿಕರಿಗೆ ದೊರೆಯುವ ಸೌಲಭ್ಯಗಳಾವವು?

ಕೇವಲ 25 ಯಾತ್ರಿಗಳಿಗೆ ಅವಕಾಶವಿದ್ದು, ಹೆಸರು ನೋಂದಾಯಿಸಲು ಜು.31 ಕೊನೆ ದಿನವಾಗಿದೆ. ಯಾತ್ರೆಯಲ್ಲಿ ಪಾಲ್ಗೊಳ್ಳುವ ಆಸಕ್ತರು 9481522011 ಮೂಲಕ ಸಂಪರ್ಕಿಸಿ ಹೆಸರು ನೋಂದಾಯಿಸಿಕೊಳ್ಳಬಹುದು.

English summary
An eight-day pilgrimage tour to senior citizens has been organized by the Sattva Sangha. The pilgrimage will commence from Hubli, Bangalore and Tumkur by bus from august 4.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X