ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪೆಟ್ರೋಲ್ ಬಂಕ್ ವಂಚನೆ ಜಾಲದಿಂದ ಸಾವಿರಾರು ಕೋಟಿ ಮೋಸ!

By Basavaraj
|
Google Oneindia Kannada News

ಹುಬ್ಬಳ್ಳಿ, ಜುಲೈ 13 : ಪೆಟ್ರೋಲ್ ಬಂಕ್ ಗಳಲ್ಲಿ ನಕಲಿ ಚಿಪ್ ಅಳವಡಿಸಿ, ಗ್ರಾಹಕರಿಗೆ ಅಳತೆಯಲ್ಲಿ ಮೋಸ ಮಾಡಲು ನೆರವಾಗುತ್ತಿದ್ದ ತಂಡವು ಬಾಯಿ ಬಿಡುತ್ತಿರುವ ರಹಸ್ಯಗಳು ಗಾಬರಿ ಹುಟ್ಟಿಸುವಂತಿವೆ.

ಹಬ್ಬಳ್ಳಿಯ ಪ್ರಶಾಂತ್ ನೂಲ್ಕಾರ್ ನ ವಂಚನೆಯ ವ್ಯಾಪ್ತಿ ಕಣ್ಣಂದಾಜಿಗೆ ಸಿಕ್ಕಿದ್ದಕ್ಕಿಂತಲೂ ಅಗಾಧವಾಗಿದೆ. ಬಂಕ್ ಮಾಲೀಕರು ಗ್ರಾಹಕರಿಗೆ ವಂಚನೆ ಮಾಡಲು ಪಂಪ್ ಗಳಿಗೆ ಅಳವಡಿಸುತ್ತಿದ್ದ ನಕಲಿ ಎಲೆಕ್ಟ್ರಾನಿಕ್ ಚಿಪ್‌ಗಳನ್ನು ಇಪ್ಪತ್ತೈದರಿಂದ ಐವತ್ತು ಸಾವಿರ ರುಪಾಯಿವರೆಗೂ ಈತ ಮಾರಾಟ ಮಾಡುತ್ತಿದ್ದ.

ಪೆಟ್ರೋಲ್ ಬಂಕ್ ಅಳತೆ ಮೋಸದ ಹಿಂದಿನ ಹುಬ್ಬಳ್ಳಿ ಪ್ರಶಾಂತ ಎಂಥ ಕಿಲಾಡಿಪೆಟ್ರೋಲ್ ಬಂಕ್ ಅಳತೆ ಮೋಸದ ಹಿಂದಿನ ಹುಬ್ಬಳ್ಳಿ ಪ್ರಶಾಂತ ಎಂಥ ಕಿಲಾಡಿ

ವಂಚನೆ ಜಾಲದ ಮೂಲಕ ಬಹುಬೇಗ ಶ್ರೀಮಂತನಾದ ಪ್ರಶಾಂತ್, ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಮೂರು ಪೆಟ್ರೋಲ್ ಬಂಕ್ ಗಳ ಮಾಲೀಕ ಎಂಬ ಆಘಾತಕಾರಿ ಸುದ್ದಿ ಬೆಳಕಿಗೆ ಬಂದಿದೆ. ಇದು ಸಾವಿರಾರು ಕೋಟಿ ವಂಚನೆ ಪ್ರಕರಣ ಎಂಬುದರಲ್ಲಿ ಎರಡು ಮಾತಿಲ್ಲ.

Petrol bunk scam looks like more than thousand crore

ಬಂಕ್ ಮಾಲೀಕರ ಸಂಪರ್ಕ
ಪೆಟ್ರೋಲ್ ಬಂಕ್ ಮಾಲೀಕರು ಈ ಚಿಪ್ ಅನ್ನು ಒಂದು ಬಾರಿ ಖರೀದಿಸಿದ ಮಾತ್ರಕ್ಕೆ ಮುಗಿಯುವುದಿಲ್ಲ. ಇದರ ನಿರ್ವಹಣೆಗಾಗಿ ಪ್ರತಿ ತಿಂಗಳು ಮೂರರಿಂದ ಐದು ಸಾವಿರ ರೂಪಾಯಿ ಪಡೆಯುತ್ತಿದ್ದ. ಐವತ್ತೆಂಟು ವರ್ಷದ ಪ್ರಶಾಂತ್ ಪೆಟ್ರೋಲ್ ಬಂಕ್ ಗಳಲ್ಲಿ ಅಳವಡಿಸುವ ಪಂಪ್ ತಯಾರಿಕಾ ಕಂಪೆನಿಯಲ್ಲಿ ಹದಿಮೂರು ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾನೆ.

ವಿವಿಧ ರಾಜ್ಯಗಳ ಸಾವಿರಾರು ಪೆಟ್ರೋಲ್ ಬಂಕ್ ಮಾಲೀಕರ ಸಂಪರ್ಕವನ್ನು ತನ್ನ ಕೃತ್ಯಕ್ಕೆ ಬಳಸಿಕೊಂಡಿದ್ದಾನೆ. ಎಂಟು ವರ್ಷದಿಂದ ಈ ವಂಚನೆ ಜಾಲದ ನೇತೃತ್ವ ವಹಿಸಿರುವ ಪ್ರಶಾಂತ್ ನ ಕೃತ್ಯದಿಂದ ಗ್ರಾಹಕರ ಜೇಬಿಗೆ ಒಟ್ಟಾರೆಯಾಗಿ ಕೋಟ್ಯಂತರ ರುಪಾಯಿ ಕತ್ತರಿ ಬಿದ್ದಿದೆ.

ಮಹಾರಾಷ್ಟ್ರದಲ್ಲಿಯೇ ಹೆಚ್ಚು ವಂಚನೆ
ಪ್ರಶಾಂತ್ ವಂಚನೆಯ ಜಾಲ ಮಹಾರಾಷ್ಟ್ರದಲ್ಲಿಯೇ ಹೆಚ್ಚು ಎಂಬ ವಿಷಯ ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಅದರಲ್ಲೂ ಮುಂಬೈನ ಥಾಣೆಯೊಂದರಲ್ಲಿಯೇ ಇಪ್ಪತ್ತೆಂಟು ಪೆಟ್ರೋಲ್ ಬಂಕ್ ಗಳಿಗೆ ನಕಲಿ ಚಿಪ್ ಅಳವಡಿಸಿದ್ದಾನೆ.

ಪೆಟ್ರೋಲ್ ಬಂಕಲ್ಲಿ ಗ್ರಾಹಕರ ಜೇಬಿಗೆ ಕತ್ತರಿ, ವಂಚನೆಗೆ ನಾನಾ ದಾರಿಪೆಟ್ರೋಲ್ ಬಂಕಲ್ಲಿ ಗ್ರಾಹಕರ ಜೇಬಿಗೆ ಕತ್ತರಿ, ವಂಚನೆಗೆ ನಾನಾ ದಾರಿ

ಉಳಿದಂತೆ ನಾಸಿಕ್ ಹಾಗೂ ಪುಣೆಯಲ್ಲಿ ತಲಾ ಹನ್ನೆರಡು, ರಾಯಘಡದಲ್ಲಿ ಏಳು, ನಾಗಪುರ, ಕೊಲ್ಲಾಪುರ ಹಾಗೂ ಧುಳೆಯಲ್ಲಿ ತಲಾ ಐದು, ಯವತವಾಳ, ಚಂದ್ರಪುರ, ಡಳಘಾಂವ, ಸಾಂಗ್ಲಿ ಹಾಗೂ ಸಾತಾರಾನಲ್ಲಿ ತಲಾ ಎರಡು ಬಂಕ್ ಗಳಿಗೆ ನಕಲಿ ಚಿಪ್ ಅಳವಡಿಸಿರುವುದಾಗಿ ಪೊಲೀಸರ ಎದುರು ಬಾಯ್ಬಿಟ್ಟಿದ್ದಾನೆ.

ಇಷ್ಟೇ ಅಲ್ಲದೆ ಗುಜರಾತ್, ಉತ್ತರ ಪ್ರದೇಶ, ಕರ್ನಾಟಕ ಸೇರಿದಂತೆ ದೇಶದ ಹಲವು ರಾಜ್ಯಗಳು ಮಾತ್ರವಲ್ಲದೆ ವಿದೇಶಗಳಿಗೂ ಈತನ ವಂಚನೆ ಜಾಲ ಹಬ್ಬಿರುವ ಸುಳಿವು ಪೊಲೀಸರಿಗೆ ಸಿಕ್ಕಿದೆ.

English summary
Prashanth Nulkar, who is prime accused involving in deception to consumers in petrol bunks across the country. He was selling fake chips by Rs 25,000 to 50,000 each chip, and bunk owners have to pay monthly Rs 3000 to 5000 for chip maintenance.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X