ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಜ್ಯದ ಜನತೆಯ ಚಿತ್ತ ಜೆಡಿಎಸ್ ನತ್ತ: ಟಿ.ಎ ಶರವಣ ಹೇಳಿಕೆ

By ಹುಬ್ಬಳ್ಳಿ ಪ್ರತಿನಿಧಿ
|
Google Oneindia Kannada News

ಇಂಡಿಯಾ ಟುಡೆ ಸಮೀಕ್ಷೆ ದುಡ್ಡು ಕೊಟ್ಟು ಮಾಡಿಸಿದ ಸರ್ವೆ. ನಮಗೆ ಯಾವುದೇ ಸರ್ವೆ ಮೇಲೆ ನಂಬಿಕೆ ಇಲ್ಲ ಎಂದು ಜೆಡಿಎಸ್ ವಿಧಾನಪರಿಷತ್ ಸದಸ್ಯ ಟಿ.ಎ ಶರವಣ ಹೇಳಿದರು.

ಹುಬ್ಬಳ್ಳಿಯಲ್ಲಿ ಭಾನುವಾರ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಯಾವುದೇ ಸಂದೇಹ ಇಲ್ಲ. ಈ ಬಾರಿ ನಮಗೆ 110 ಕ್ಷೇತ್ರದಲ್ಲಿ ಗೆಲುವು ನಿಶ್ಚಿತ. ರಾಜ್ಯಾದ್ಯಂತ ಜನ ಜೆಡಿಎಸ್ ನತ್ತ ಒಲವು ತೋರಿದ್ದಾರೆ ಎಂದು ಹರ್ಷವ್ಯಕ್ತಪಡಿಸಿದರು.

ಇಂಡಿಯಾ ಟುಡೇ, ಕಾರ್ವಿ ಸಮೀಕ್ಷೆ : ಯಾವ ಪಕ್ಷಕ್ಕೆ ಎಷ್ಟು ಸೀಟು?ಇಂಡಿಯಾ ಟುಡೇ, ಕಾರ್ವಿ ಸಮೀಕ್ಷೆ : ಯಾವ ಪಕ್ಷಕ್ಕೆ ಎಷ್ಟು ಸೀಟು?

ಸಿಎಂ ಸಿದ್ದರಾಮಯ್ಯ ಅವರಪ್ಪನಾಣೆ ಎಂದು ಬಾಯಿಗೆ ಬಂದ ಹಾಗೆ ಮಾತನಾಡುತ್ತಾರೆ. ಆದ್ರೆ ಅವರ ರಾಜಕೀಯ ಗುರು ದೇವೇಗೌಡ್ರು ಎಂಬುದನ್ನು ಮರೆತಿದ್ದಾರೆ ಎಂದು ಕುಟುಕಿದರು.

People liked JDS very much:TA Saravanana

ಬಿಜೆಪಿಯಲ್ಲಿ ಬಂಡಾಯ
ಉತ್ತರ ಕರ್ನಾಟಕ ಭಾಗದಲ್ಲಿ ಜಗದೀಶ್ ಶೆಟ್ಟರ್ ಸಿಎಂ ಆಗಿ, ವಿರೋಧ ಪಕ್ಷದ ನಾಯಕನಾಗಿ ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ. ರಾಜ್ಯದ ಜನ ಹಿಡಿಶಾಪ ಹಾಕುತ್ತಿದ್ದಾರೆ.

ಸಂಸದ ಪ್ರಹ್ಲಾದ್ ಜೋಶಿಗೆ ಓಟು ಕೇಳುವ ನೈತಿಕ ಹಕ್ಕಿಲ್ಲ. ಬಿಜೆಪಿ ಮೊದಲ ಪಟ್ಟಿಯಲ್ಲಿ 72 ಅಭ್ಯರ್ಥಿಗಳ ಹೆಸರು ಬಿಡುಗಡೆ ಮಾಡಿದ್ದು, 15 ಜನ ಬಂಡಾಯವೆದ್ದಿದ್ದಾರೆ. ಆದರೆ, ಜೆಡಿಎಸ್ ಒಂದೇ ಬಾರಿಗೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ ಎಂದು ತಿಳಿಸಿದರು.

ಇಂಡಿಯಾ ಟುಡೇ ಸಮೀಕ್ಷೆ ಹಿಂದೆ ಅಮಿನ್ ಮಟ್ಟು ಕೈವಾಡ: ಎಚ್ ಡಿಕೆ ಇಂಡಿಯಾ ಟುಡೇ ಸಮೀಕ್ಷೆ ಹಿಂದೆ ಅಮಿನ್ ಮಟ್ಟು ಕೈವಾಡ: ಎಚ್ ಡಿಕೆ

ಕಾಂಗ್ರೆಸ್ ಹಾಗೂ ಬಿಜೆಪಿ ಮುಕ್ತ ಕರ್ನಾಟಕ ರಚನೆಯಾಗಲಿದ್ದು, ಕುಮಾರಣ್ಣ ವಿಕಾಸ ಪರ್ವಕ್ಕೆ ಲಕ್ಷಾಂತರ ಜನ ಸೇರುತ್ತಿದ್ದಾರೆ. ಈ ಬಾರಿ ಜೆಡಿಎಸ್ ಸ್ವತಂತ್ರ ಸರ್ಕಾರ ರಚನೆ ಮಾಡುತ್ತದೆ ಎಂದು ಭವಿಷ್ಯ ನುಡಿದರು.

English summary
JDS MLC TA Saravanana Said in press meet we dont believe survey. Survey is untruth. victory is fixed in 110 constituency. People liked JDS.Definitely JDS will create government.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X