ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಜ್ಯದ ಖಜಾನೆ ಕೊಳ್ಳೆ ಹೊಡೆದ ಕಾಂಗ್ರೆಸ್ ಸಚಿವರು

|
Google Oneindia Kannada News

ಹುಬ್ಬಳ್ಳಿ, ಡಿಸೆಂಬರ್ 12 : ರಾಜ್ಯ ಸರ್ಕಾರದ ಖಜಾನೆ ಖಾಲಿಯಾಗಿದೆ, ಹೀಗಾಗಿ ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆಯ 138 ಕೋಟಿ ರೂಪಾಯಿ ಪಿಂಚಣಿ ಹಣವನ್ನು ರಾಜ್ಯ ಸರ್ಕಾರ ಕಳೆದ 3 ವರ್ಷದಿಂದ ನೀಡುತಿಲ್ಲ ಎಂದು ಪಕ್ಷ ನಾಯಕ ಜಗದೀಶ್ ಶೆಟ್ಟರ್ ಆರೋಪಿಸಿದ್ದಾರೆ ಕಳೆದ 3 ವರ್ಷದ ಪಿಂಚಣೀ ಹಣ ಬಿಡುಗಡೆ ಆಗದಿರುವುದು ಸಚಿವ ವಿನಯ ಕುಲಕರ್ಣಿ ವಿಫಲತೆಯನ್ನು ತೋರಿಸುತ್ತದೆ.

ಹಣ ಬಿಡುಗಡೆಯಾಗದ ಕಾರಣ ಅಭಿವೃದ್ಧಿ ಕೆಲಸಗಳು ನಿಂತಿವೆ. ಇನ್ನ ಸಿದ್ದರಾಮಯ್ಯ ಸರ್ಕಾರದ ಕಲೆ ಸಚಿವರು ರಾಜ್ಯದ ಖಜಾನೆಯನ್ನು ಕೊಳ್ಳೆ ಹೊಡೆದಿದ್ದಾರೆ ಹೀಗಾಗಿ, ರಾಜ್ಯ ಸರ್ಕಾರದ ಖಜಾನೆ ಖಾಲಿಯಾಗಿದೆ. ಪಾಲಿಕೆಯ ಅನುದಾನ ಬಿಡುಗಡೆ ಮಾಡದೆ ಕಾಂಗ್ರೆಸ್ನವರು ಹಣ ಬಿಡುಗಡೆ ಮಾಡುವಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಇನ್ನು ಉತ್ತರ ಕರ್ನಾಟಕದ ಬಗ್ಗೆ ಸಿದ್ದರಾಮಯ್ಯ ಮಲತಾಯಿ ಧೋರಣೆ ತಳೆದಿದ್ದಾರೆ.

Opposition leader Shetter alleged state goes bankrupt

ಸಮಸ್ಯೆ ಗೊತ್ತಿದ್ದರೂ ಸಿಎಮ್ ಸಿದ್ದರಾಮಯ್ಯ ನಾಟಕ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ . ಇನ್ನು ಇದೇ ವೇಳೆಯಲ್ಲಿ ಮಾತನಾಡಿದ ಅವರು ಮಹದಾಯಿ ಯೋಜನೆ ವಿವಾದ ಶೀಘ್ರ ಬಗೆಹರಿಯಲಿದೆ. ಬಿ ಜೆ ಪಿ ಈ ಸಮಸ್ಯೆ ಇತ್ಯರ್ಥಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ. ರಾಜ್ಯದ ಜನರಿಗೆ ಸದ್ಯದಲ್ಲಿಯೇ ಇದರ ಫಲಿತಾಂಶ ತಿಳಿಯಲಿದೆ. ಎಂದಿದ್ದಾರೆ.

English summary
Leader of opposition in assembly Jagadish Shetter accused Siddaramaiah government has gone bankrupt as its failed to pay Rs.138 cr which suppose to pay the pension of Hubli-Dharwad Munciple corporation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X