ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹುಬ್ಬಳ್ಳಿ; ಕಾರ್ಗೋ ಟರ್ಮಿನಲ್ ಉದ್ಘಾಟನೆ ಕೇಂದ್ರ ಸಚಿವರಿಗೆ ಪತ್ರ

|
Google Oneindia Kannada News

ಹುಬ್ಬಳ್ಳಿ, ಅಕ್ಟೋಬರ್ 04; ಹುಬ್ಬಳ್ಳಿ ವಿಮಾನ ನಿಲ್ದಾಣದ ಕಾರ್ಗೋ ಟರ್ಮಿನಲ್ ಕಟ್ಟಡ ನವೀಕರಣ ಕಾರ್ಯ ಪೂರ್ಣಗೊಂಡಿದೆ. ಶೀಘ್ರವೇ ಕಟ್ಟಡ ಉದ್ಘಾಟನೆ ಮಾಡಬೇಕು ಎಂದು ಕೇಂದ್ರ ಸಚಿವ, ಧಾರವಾಡ ಸಂಸದ ಪ್ರಹ್ಲಾದ್ ಜೋಶಿ ಕೇಂದ್ರ ವಿಮಾನಯಾನ ಸಚಿವರಿಗೆ ಪತ್ರ ಬರೆದಿದ್ದಾರೆ.

ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಕೇಂದ್ರ ವಿಮಾನಯಾನ ಖಾತೆ ಸಚಿವ ಜ್ಯೋತಿರಾದಿತ್ಯ ಸಿಂಧ್ಯಾಗೆ ಈ ಕುರಿತು ಪತ್ರವನ್ನು ಬರೆದಿದ್ದಾರೆ. ಕಾರ್ಗೋ ಸೇವೆ ಆರಂಭಿಸಲು ಅಗತ್ಯ ಸಿಬ್ಬಂದಿ ನೇಮಕಾತಿ ಮಾಡಬೇಕು ಎಂದು ಮನವಿ ಮಾಡಿದ್ದಾರೆ.

 ಬೆಂಗಳೂರು, ಹುಬ್ಬಳ್ಳಿ- ಧಾರವಾಡ ನಂತರ ಶೀಘ್ರದಲ್ಲೇ ಕಲಬುರಗಿಯಲ್ಲಿ ಬಸ್ ಆದ್ಯತಾ ಪಥ ನಿರ್ಮಾಣ ಬೆಂಗಳೂರು, ಹುಬ್ಬಳ್ಳಿ- ಧಾರವಾಡ ನಂತರ ಶೀಘ್ರದಲ್ಲೇ ಕಲಬುರಗಿಯಲ್ಲಿ ಬಸ್ ಆದ್ಯತಾ ಪಥ ನಿರ್ಮಾಣ

ಹುಬ್ಬಳ್ಳಿ ವಿಮಾನ ನಿಲ್ದಾಣದ ಹಳೆಯ ಕಟ್ಟಡವನ್ನು 60.6 ಲಕ್ಷ ರೂ. ವೆಚ್ಚದಲ್ಲಿ ಕಾರ್ಗೋ ಟರ್ಮಿನಲ್ ಆಗಿ ನವೀಕರಿಸುವ ಪ್ರಕ್ರಿಯೆ ಪೂರ್ಣಗೊಂಡಿದೆ. ಹುಬ್ಬಳ್ಳಿಯಿಂದ ಇತರೆ ನಗರಗಳಿಗೆ ಕಾರ್ಗೋ ಸೇವೆ ಆರಂಭಿಸುವ ಉದ್ದೇಶದಿಂದ ಟರ್ಮಿನಲ್ ನಿರ್ಮಾಣ ಮಾಡಲಾಗಿದೆ.

ಬೆಂಗಳೂರು-ಧಾರವಾಡ ನಡುವೆ ವಂದೇ ಭಾರತ್ ರೈಲು ಸಂಚಾರ ಬೆಂಗಳೂರು-ಧಾರವಾಡ ನಡುವೆ ವಂದೇ ಭಾರತ್ ರೈಲು ಸಂಚಾರ

 Open Hubballi Airport Air Cargo Terminal Pralhad Joshi Letter To Jyotiraditya Scindia

ಕಾರ್ಗೋ ಸೇವೆ ಆರಂಭಕ್ಕೆ ನಾಗರಿಕ ವಾಯುಯಾನ ಭದ್ರತಾ ಮಂಡಳಿ ಅಂತಿಮ ಒಪ್ಪಿಗೆ ಸಿಗಬೇಕಿದೆ. ಭಾರತೀಯ ವಿಮಾನಯಾನ ಪ್ರಾಧಿಕಾರ ಕಾರ್ಗೋ ಲಾಜಿಸ್ಟಿಕ್ ಎಂಡ್ ಮೈತ್ರಿ ಸೇವೆಗಳ ಕಂಪನಿಯೊಂದಿಗೆ ಏರ್ ಕಾರ್ಗೋ ಕಟ್ಟಟದಿಂದ ಸರಕು ಸಾಗಣೆಗೆ ಒಪ್ಪಿಗೆ ಪಡೆಯಬೇಕಿದೆ.

 Full result: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆ Full result: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆ

ಬಿಸಿಎಎಸ್ ಒಪ್ಪಿಗೆ ಸಿಕ್ಕಿದರೆ ಹುಬ್ಬಳ್ಳಿಯಲ್ಲಿ ಉತ್ತರ ಕರ್ನಾಟಕದ ಮೊದಲ ವಿಮಾನ ಕಾರ್ಗೋ ಟರ್ಮಿನಲ್ ಕಾರ್ಯಾರಂಭ ಮಾಡಲಿದೆ. ಇದರಿಂದಾಗಿ ಮುಂದಿನ ದಿನಗಳಲ್ಲಿ ಈ ಭಾಗದಲ್ಲಿ ಕೃಷಿ ಮತ್ತು ಕೈಗಾರಿಕೆ ಸರಕುಗಳ ಸಾಗಣೆಗೆ ಸಹಕಾರಿಯಾಗಲಿದೆ.

ಟರ್ಮಿನಲ್ ವಿಶೇಷತೆಗಳು; ಹುಬ್ಬಳ್ಳಿ ವಿಮಾನ ನಿಲ್ದಾಣದ ಹಳೆ ಟರ್ಮಿನಲ್ ಕಟ್ಟಡವನ್ನು 60 ಲಕ್ಷ ರೂ.ಗಳನ್ನು ಕಾರ್ಗೋ ಟರ್ಮಿನಲ್ ಆಗಿ ಪರಿವರ್ತನೆ ಮಾಡಲಾಗಿದೆ. ಕೋಲ್ಡ್ ಸ್ಟೋರೇಜ್, ಅಪಾಯಕಾರಿ ಸರಕುಗಳು, ಬೆಳೆಬಾಳುವ ವಸ್ತುಗಳನ್ನು ಶೇಖರಣೆ ಮಾಡಲು ಪ್ರತ್ಯೇಕ ವಿಭಾಗ ಮಾಡಲಾಗಿದೆ.

ಏರ್ ಇಂಡಿಯಾ, ಇಂಡಿಗೋ, ಸ್ಟಾರ್ ಏರ್ ಮುಂತಾದ ವಿಮಾನಯಾನ ಸಂಸ್ಥೆಗಳು ಹುಬ್ಬಳ್ಳಿಯಿಂದ ಪ್ರಯಾಣಿಕರ ಜೊತೆ ಸರಕುಗಳನ್ನು ಸಹ ಸಾಗಣೆ ಮಾಡಲಿವೆ. ಬೆಂಗಳೂರು, ಚೆನ್ನೈ, ಮುಂಬೈ ನಗರಗಳಿಗೆ ಸರಕುಗಳನ್ನು ಸಾಗಿಸಲು ಯೋಜನೆ ರೂಪಿಸಲಾಗಿದೆ.

ಹುಬ್ಬಳ್ಳಿ ವಿಮಾನ ಅಭಿವೃದ್ಧಿಗೊಳಿಸಿ ಹೊಸ ಟರ್ಮಿನಲ್ ನಿರ್ಮಾಣ ಮಾಡಿದ ಬಳಿಕ ಹಳೆ ಟರ್ಮಿನಲ್ ಕಟ್ಟಡ ಖಾಲಿ ಇತ್ತು. ಇದನ್ನು ಕಾರ್ಗೋ ಟರ್ಮಿನಲ್ ಆಗಿ ಅಭಿವೃದ್ಧಿಗೊಳಿಸಲಾಗಿದೆ.

ಮುಂದಿನ ದಿನಗಳಲ್ಲಿ ಟಾಟಾ ಮೋಟಾರ್ಸ್, ಮೈಕ್ರೋ ಫಿನಿಶ್ ಟ್ರೇಡಿಂಗ್ ಸೇರಿದಂತೆ ಇತರೆ ಕಂಪನಿಗಳು ಬರಲಿದ್ದು, ಇದರಿಂದಾಗಿ ಹುಬ್ಬಳ್ಳಿಯಲ್ಲಿನ ಕಾರ್ಗೋ ಟರ್ಮಿನಲ್‌ಗೆ ಬೇಡಿಕೆ ಹೆಚ್ಚಾಗಲಿದೆ ಎಂದು ನಿರೀಕ್ಷಿಸಲಾಗಿದೆ.

ಹುಬ್ಬಳ್ಳಿ ವಿಮಾನ ನಿಲ್ದಾಣವನ್ನು 140 ಕೋಟಿ ರೂ. ವೆಚ್ಚದಲ್ಲಿ ಅಂತರಾಷ್ಟ್ರೀಯ ದರ್ಜೆಯ ವಿಮಾನ ನಿಲ್ದಾಣವಾಗಿ ಅಭಿವೃದ್ಧಿಗೊಳಿಸಲಾಯಿತು. ನೂತನ ಟರ್ಮಿನಲ್, ರನ್ ವೇ ನಿರ್ಮಾಣ ಮಾಡಲಾಯಿತು. ಉಳಿ ಉಡಾನ್ ಯೋಜನೆಗೆ ವಿಮಾನ ನಿಲ್ದಾಣ ಸೇರಿತು.

ಪ್ರಸ್ತುತ ಹುಬ್ಬಳ್ಳಿಯಿಂದ ಮುಂಬೈ, ಗೋವಾ, ಕೊಚ್ಚಿ, ಬೆಂಗಳೂರು, ಚೆನ್ನೈ, ಹೈದರಾಬಾದ್ ಸೇರಿದಂತೆ ವಿವಿಧ ನಗರಗಳಿಗೆ ವಿಮಾನ ಹಾರಾಟ ನಡೆಸುತ್ತಿದೆ. 2020ರಲ್ಲಿ ರಾಜ್ಯದ ಬ್ಯುಸಿಯೆಸ್ಟ್ ವಿಮಾನ ನಿಲ್ದಾಣಗಳಲ್ಲಿ ಹುಬ್ಬಳ್ಳಿ ಸೇರಿತ್ತು.

ಹುಬ್ಬಳ್ಳಿ ಕರ್ನಾಟಕದ ಪ್ರಮುಖ ವಾಣಿಜ್ಯ ಕೇಂದ್ರವಾಗಿದೆ. ಬೆಂಗಳೂರು, ಮುಂಬೈ, ದೆಹಲಿ ಮುಂತಾದ ನಗರಗಳ ಜೊತೆ ವ್ಯಾಪಾರ ವಹಿವಾಟು ಹೊಂದಿದೆ. ಆದ್ದರಿಂದ ಕಾರ್ಗೋ ಸೇವೆ ಆರಂಭವಾದರೆ ಉದ್ಯಮಿಗಳಿಗೆ ಅನುಕೂಲವಾಗಲಿದೆ.

2018ರಲ್ಲಿ ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ಸರಕು ಸಾಗಣೆ ಸೇವೆ ಪ್ರಾರಂಭ ಮಾಡುವ ಪ್ರಯತ್ನ ಆರಂಭವಾಯಿತು. ಬಳಿಕ ಟರ್ಮಿನಲ್ ಕಟ್ಟಡವನ್ನು ನವೀಕರಣ ಮಾಡಲಾಗಿದ್ದು, ಈಗ ಸೇವೆ ಆರಂಭಿಸಲು ತಯಾರಿ ನಡೆದಿದೆ.

Recommended Video

ಶಾರುಖ್ ಖಾನ್ ವಿಡಿಯೋ ವೈರಲ್ ! | Oneindia Kannada

ಕಾರ್ಗೋ ಸೇವೆ ಆರಂಭವಾದರೆ ಉತ್ತರ ಕರ್ನಾಟಕದ ಹೆಬ್ಬಾಗಿಲಾದ ಹುಬ್ಬಳ್ಳಿ ಮುಂಬೈ , ದೆಹಲಿ, ಬೆಂಗಳೂರು, ಚೆನ್ನೈ ಹಾಗೂ ಇತರ ನಗರಗಳೊಂದಿಗೆ ವ್ಯಾಪಾರ ವಹಿವಾಟು ನಡೆಸಲು ಸಹಾಯಕವಾಗಲಿದೆ.

English summary
In a letter to minister of civil aviation Jyotiraditya Scindia Pralhad Joshi request to open Hubballi airport air cargo terminal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X