ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸರ್ಕಾರಿ ಆಸ್ಪತ್ರೆಯಲ್ಲಿ ಮೊದಲ ಬಾರಿಗೆ ಯಶಸ್ವಿ ಹೃದಯ ಚಿಕಿತ್ಸೆ

By ಹುಬ್ಬಳ್ಳಿ ಪ್ರತಿನಿಧಿ
|
Google Oneindia Kannada News

ಹುಬ್ಬಳ್ಳಿ, ಮೇ 27: ಕಿಮ್ಸ್ ಆಸ್ಪತ್ರೆಯಲ್ಲಿ ಪ್ರಥಮ ಬಾರಿಗೆ ಯಶಸ್ವಿ ತೆರೆದ ಹೃದಯ ಚಿಕಿತ್ಸೆ ಮಾಡಲಾಗಿದ್ದು, ಆ ಮೂಲಕ ಸರ್ಕಾರಿ ಆಸ್ಪತ್ರೆಯಲ್ಲಿ ಮೊದಲ ಬಾರಿಗೆ ಯಶಸ್ವಿ ತೆರೆದ ಹೃದಯ ಶಸ್ತ್ರ ಚಿಕಿತ್ಸೆಯನ್ನು ಮಾಡಿದ ಕೀರ್ತಿ ಕಿಮ್ಸ್ ಗೆ ದೊರೆತಿದೆ ಎಂದು ಕಿಮ್ಸ್ ನಿರ್ದೇಶಕ ಡಾ.ರಾಮಲಿಂಗಪ್ಪ ಅಂತರಠಾಣಿ ಹೇಳಿದರು.

ಹುಬ್ಬಳ್ಳಿ ಪಾಲಿಕೆ ಕಚೇರಿಯಲ್ಲಿ ದಾಂದಲೆ; ಕೋಮುವಾದಕ್ಕೆ ಬೇಸತ್ತು ಆರೋಪಿ ಮೊಹ್ಮದ್‌ನಿಂದ ಕೃತ್ಯಹುಬ್ಬಳ್ಳಿ ಪಾಲಿಕೆ ಕಚೇರಿಯಲ್ಲಿ ದಾಂದಲೆ; ಕೋಮುವಾದಕ್ಕೆ ಬೇಸತ್ತು ಆರೋಪಿ ಮೊಹ್ಮದ್‌ನಿಂದ ಕೃತ್ಯ

ಹುಬ್ಬಳ್ಳಿಯ ಕಿಮ್ಸ್ ಸುವರ್ಣ ಮಹೋತ್ಸವ ಭವನದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಅವರು ಮಾತನಾಡಿದರು. 68 ವರ್ಷದ ಗಂಗಮ್ಮ ಶಿರೋಳ ಎಂಬುವವರಿಗೆ ಎದೆನೋವು ಹಾಗೂ ಲಘು ಹೃದಯಾಘಾತವಾಗಿತ್ತು. ಅವರನ್ನು ಬೆಂಗಳೂರಿನ ಜಯದೇವ ಆಸ್ಪತ್ರೆ ಅಥವಾ ಬೇರೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಂತೆ ಸೂಚಿಸಲಾಗಿತ್ತು. ಕಿಮ್ಸ್ ನಿರ್ದೇಶಕ ಡಾ.ರಾಮಲಿಂಗಪ್ಪ, ಡಾ. ಉಲ್ಲಾಸ್ ಬಿಸಲೇರಿ ಹಾಗೂ ಅವರ ತಂಡದಿಂದ ಯಶಸ್ವಿಯಾಗಿ ಬೈಪಾಸ್ ಸರ್ಜರಿ ಮಾಡಲಾಯಿತು. 31 ವರ್ಷದ ನಾಗೇಶ ಮಾದರ ಎಂಬುವವರು ಉಸಿರಾಟ ಸಮಸ್ಯೆಯನ್ನು ಎದುರಿಸುತ್ತಿದ್ದರು. ತಪಾಸಣೆಗೆ ಒಳಪಡಿಸಿದಾಗ ಹೃದಯದಲ್ಲಿ ರಂಧ್ರವಿರುವುದು ಕಂಡು ಬಂದಿತ್ತು, ನಂತರ ಅವರಿಗೆ ಸರ್ಜರಿ ಮಾಡಲಾಯಿತು ಈಗ ಇಬ್ಬರೂ ಆರೋಗ್ಯದಿಂದ ಇದ್ದಾರೆ ಎಂದರು.

Open Heart Surgery Successful in Hubballi KIMS Hospital

ಜಯದೇವ ಹೃದ್ರೋಗ ಆಸ್ಪತ್ರೆ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ, ಡಾ.ಅರುಣ ಕುಮಾರ, ಡಾ.ಹೊಸಮನಿ, ಡಾ.ಗುರುಶಾಂತಪ್ಪ, ಡಾ.ರಾಜಶೇಖರ ದ್ಯಾಬೇರಿ, ಡಾ.ನಾಗೇಂದ್ರ ಹಿರೇಗೌಡರ, ಡಾ. ರಾಜಕುಮಾರ, ಡಾ.ಉಮೇಶ ಬೀಳಗಿ, ಡಾ.ಸುರೇಶ, ಡಾ. ನಿತೀನ್ ಕಡಕೋಳ, ಡಾ.ಬಳಿಗಾರ, ಡಾ. ಪ್ರಶಾಂತ ಹಾಗೂ ಅನಸ್ತೇಸಿಯಾ ತಂಡದ ಡಾ.ಮಾಧುರಿ, ಡಾ.ಆಲೂರ, ಡಾ.ವಿದ್ಯಾ ಹಾಗೂ ವಿದ್ಯಾರ್ಥಿಗಳ ತಂಡ ಈ ಸಾಧನೆ ಮಾಡಿದೆ. ಡಾ. ಅರವಿಂದ, ಡಾ. ರಾಜಶೇಖರ ಹಾಗೂ ಶುಶ್ರೂಷಕಿ ಕಮಲಾ ಅವರು ತುರ್ತು ನಿಗಾ ಘಟಕದಲ್ಲಿ ಉತ್ತಮವಾಗಿ ರೋಗಿಗಳನ್ನು ನೋಡಿಕೊಂಡಿದ್ದರು. ನರ್ಸ್ ಗಳು ಉತ್ತಮ ರೀತಿಯಲ್ಲಿ ಸ್ಪಂದಿಸಿದರು ಎಂದು ಕೃತಜ್ಞತೆ ತಿಳಿಸಿದರು.

Open Heart Surgery Successful in Hubballi KIMS Hospital

ಸುದ್ದಿಗೋಷ್ಠಿಯಲ್ಲಿ ಡಾ.ಉಲ್ಲಾಸ ಬೀಳಗಿ, ಡಾ.ರಾಜಶೇಖರ ದ್ಯಾಬೇರಿ, ಡಾ.ನಾಗೇಂದ್ರ ಹಿರೇಗೌಡರ, ಡಾ.ಮಾಧುರಿ, ಡಾ.ವಿದ್ಯಾ, ಡಾ.ಹೊಸಮನಿ, ಶುಶ್ರೂಷಕರಾದ ವಿಜಯ, ಅನಿಲ, ಸುನೀಲ, ಹಾಲೇಶ, ಸತೀಶ್, ಶಿಲ್ಪಾ, ಅನಿತಾ, ಸಹನಾ ಹಾಗೂ ಇತರ ತಜ್ಞವೈದ್ಯರು ಉಪಸ್ಥಿತರಿದ್ದರು.

(ಒನ್ಇಂಡಿಯಾ ಸುದ್ದಿ)

English summary
Open Heart Surgery was successfully done at KIMS Hospital in Hubli. This is the first time this surgery was done in a government hospital.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X