ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಎಗ್ ರೈಸ್ ನಲ್ಲಿ ಉಳಾಗಡ್ಡಿಯೇ ಇಲ್ಲ; ಈರುಳ್ಳಿ ಬಲು ಕಾಸ್ಟ್ಲಿ!

|
Google Oneindia Kannada News

ಹುಬ್ಬಳ್ಳಿ, ಡಿಸೆಂಬರ್: 08 ಎಗ್ ರೈಸ್ ಅಂದ್ರೆ ಯಾರಿಗೆ ತಾನೇ ಇಷ್ಟವಾಗಲ್ಲ ಹೇಳಿ. ವೆಜ್, ನಾನ್-ವೆಜ್ ಮಂದಿಯೂ ಕೂಡಾ ಎಗ್ ರೈಸ್ ನ್ನು ಇಷ್ಟಪಟ್ಟು ತಿನ್ನುವಂತಾಗಿದೆ. ಹೀಗೆ ನಾನ್ ವೆಜ್ ಇಷ್ಟಪಟ್ಟ ತಪ್ಪಿಗೆ ಜನರ ಜೇಬಿಗೆ ಈಗ ಕತ್ತರಿ ಬೀಳುತ್ತಿದೆ.
ಹೌದು, ಸ್ಪೆಶಲ್ ಎಗ್ಗ್ ರೈಸ್ ಅಂದ್ರೆ ಹೊಟ್ಟೆ ತುಂಬಾ ಊಟ ಮಾಡಿದರಾಯಿತು ಅನ್ನುವ ಜನರೇ ಹೆಚ್ಚು. ಅದರಲ್ಲೂ ಉತ್ತರ ಕರ್ನಾಟಕ ಮಂದಿಗೆ ಎಗ್ ರೈಸ್ ಎಂದರೆ ಪಂಚಪ್ರಾಣ ಅನ್ನುವ ಮಾತಿದೆ. ಆದರೆ ಇದೀಗ ಈ ಮಂದಿಗಷ್ಟೇ ಅಲ್ಲ, ಎಗ್ ರೈಸ್ ಮಾಲೀಕರಿಗೆ ಉಳ್ಳಾಗಡ್ಡಿ ಬೆಲೆ ಏರಿಕೆಯಿಂದ ಭಾರಿ ಹೊಡೆತ ಬೀಳುತ್ತಿದೆ.

ತಳ್ಳೋಗಾಡಿಯವನು ಈರುಳ್ಳಿ ಬೋರ್ಡ್ ಕೆಳಗೆ ಇಂಟರೆಸ್ಟಿಂಗ್ ಒಕ್ಕಣೆ ಬರೆದುಕೊಂಡಿದ್ದತಳ್ಳೋಗಾಡಿಯವನು ಈರುಳ್ಳಿ ಬೋರ್ಡ್ ಕೆಳಗೆ ಇಂಟರೆಸ್ಟಿಂಗ್ ಒಕ್ಕಣೆ ಬರೆದುಕೊಂಡಿದ್ದ

ಉತ್ತರ ಕರ್ನಾಟಕ ಎಗ್ ರೈಸ್ ಅಂಗಡಿಗೆ ಹೋಗುವ ಗ್ರಾಹಕರು ಉಳ್ಳಾಗಡ್ಡಿಯೇ ಇಲ್ಲದ ಎಗ್ ರೈಸ್ ನೋಡಿ ನಿರಾಶರಾಗುತ್ತಿದ್ದಾರೆ.‌ ಅಚ್ಚರಿ ಅನಿಸಿದರೂ ಇದು ಸತ್ಯ ಘಟನೆ. ಏಕೆಂದರೆ, ಎಗ್ ರೈಸ್ ಜೊತೆ ಸವಿಯಲು ಅವರಿಗೆ ಸಿಗ್ತಾ ಇರೋದು ಕ್ಯಾಬೇಜ್ ತುರಿ ಮಾತ್ರ.

Onioin Rate Is Too Hike In Hubli

ಎಗ್ ರೈಸ್ ಇದೆ, ಈರುಳ್ಳಿಯೇ ಇಲ್ಲ!

ಎಗ್ ರೈಸ್ ಇದೆ, ಈರುಳ್ಳಿಯೇ ಇಲ್ಲ!

ಉತ್ತರ ಕರ್ನಾಟಕದ ಮಂದಿಗೆ ಉಳ್ಳಾಗಡ್ಡಿ ಇಲ್ಲದಿದ್ದರೆ ಯಾವ ಆಹಾರವೂ ರು‍ಚಿ ಕೊಡುವುದಿಲ್ಲ. ಹೀಗಿರುವಾಗ ಎಗ್ ರೈಸ್ ನ್ನು ಈರುಳ್ಳಿ ಇಲ್ಲದೇ ತಿನ್ನುವುದಕ್ಕೆ ಆಗುತ್ತಾ. ಹುಬ್ಬಳ್ಳಿ- ಧಾರವಾಡದ ಮಂದಿಗೆ ಎಗ್ ರೈಸ್ ಲಘು ಉಪಹಾರವೂ ಹೌದು, ಕೆಲವರಿಗೆ ಅದು ಊಟವೂ ಹೌದು.

ಡಬಲ್ ಸೆಂಚೂರಿಯತ್ತ ಉಳಾಗಡ್ಡಿ ಬೆಲೆ

ಡಬಲ್ ಸೆಂಚೂರಿಯತ್ತ ಉಳಾಗಡ್ಡಿ ಬೆಲೆ

ಎಗ್ ರೈಸ್ ಮೇಲೆ ಹೆಚ್ಚಿದ ಉಳ್ಳಾಗಡ್ಡಿ ಉದುರಿಸಿಕೊಂಡು ತಿಂದರೆ ಅದರ ಮಜವೇ ಬೇರೆ. ಆದ್ರೆ, ಸದ್ಯದ ಮಟ್ಟಿಗೆ ಇದು ಸಾಧ್ಯವಿಲ್ಲ. ಏಕೆಂದರೆ ಉಳ್ಳಾಗಡ್ಡಿ ಬೆಲೆ ಈಗಾಗಲೇ ಮುಗಿಲು ಮುಟ್ಟಿದೆ. ಕೆಜಿ ಉಳಾಗಡ್ಡಿಗೆ 100 ಮತ್ತು ಉತ್ತಮ ಉಳಾಗಡ್ಡಿಗೆ 200 ರೂಪಾಯಿಯಷ್ಟಿದೆ. ಈರುಳ್ಳಿ ದರ ಹೆಚ್ಚಳಕ್ಕೆ ಎಗ್ ರೈಸ್ ವ್ಯಾಪಾರಿಗಳು ಹಾಗೂ ಗ್ರಾಹಕರು ದಂಗಾಗಿದ್ದಾರೆ. ಏಕೆಂದರೆ, ಈಗಾಗಲೇ ವ್ಯಾಪಾರ ಕೂಡಾ ಕುಂಠಿತವಾಗಿದ್ದು ವ್ಯಾಪಾರಸ್ಥರು ಥಂಡಾ ಹೊಡೆದಿದ್ದಾರೆ.

ರೈತರಿಗೆ ಹಣ ಕೊಟ್ಟರೆ ಏನಾಗುತ್ತೆ ಬಿಡ್ರಿ

ರೈತರಿಗೆ ಹಣ ಕೊಟ್ಟರೆ ಏನಾಗುತ್ತೆ ಬಿಡ್ರಿ

ಬಹಳ ವರ್ಷಗಳ ನಂತರ ಉಳ್ಳಾಗಡ್ಡಿಗೆ ಒಳ್ಳೆಯ ಬೆಲೆ ಬಂದಿದೆ. ಬೆಲೆ ಇಲ್ಲದಾಗ ರೈತ ನಷ್ಟ ಅನುಭವಿಸಿಲ್ವಾ..? ಈಗ ಬೆಲೆ ಬಂದಿದೆ ಲಾಭ ಮಾಡಿಕೊಳ್ಳಲಿ ಬಿಡಿ ಎನ್ನುವುದು ಕೆಲವರ ವಾದವಾಗಿದೆ. ಆದರೆ, ತುರ್ತು ಹಸಿವು ನೀಗಿಸಿಕೊಳ್ಳಲು ಅಗ್ಗದ ದರಕ್ಕೆ ಸಿಗುವ ಎಗ್ ರೈಸ್ ಅವಲಂಭಿಸಿರುವ ಸಾಮಾನ್ಯರ ಜೇಬಿಗೆ ಇದರಿಂದ ಕತ್ತರಿ ಬೀಳುತ್ತಿದೆ.

ಈರುಳ್ಳಿ ಹಾಕಿದ ಎಗ್ ರೈಸ್ ತಿನ್ನೋದ್ಯಾವಾಗ?

ಈರುಳ್ಳಿ ಹಾಕಿದ ಎಗ್ ರೈಸ್ ತಿನ್ನೋದ್ಯಾವಾಗ?

ಉಳ್ಳಾಗಡ್ಡಿ ಬೆಲೆ ಎಫೆಕ್ಟ್ ಈಗ ಅವಳಿ ನಗರದ ಜನರ ನೆಚ್ಚಿನ ಭೋಜನದ ಮೇಲೂ ಪ್ರಭಾವ ಬೀರಿದೆ. ಏನೇ ಆದ್ರೂ ಈರುಳ್ಳಿ ಬೆಲೆ ಕಡಿಮೆ ಆಗೋವರೆಗೂ ಗ್ರಾಹಕರು ಉಳ್ಳಾಗಡ್ಡಿ ಇಲ್ಲದ ಎಗ್ ರೈಸ್ ಸವಿಯೋದು ಅನಿವಾರ್ಯವಾಗಿ ಬಿಟ್ಟಿದೆ.

English summary
Egg Rice Is Too Costly For Middle Class Peoples In Hubli. Beacause Onion Rate Hiked Nearly 200 Rs.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X